ಒಬ್ಬ ಖ್ಯಾತ ಸಂಗೀತಗಾರರು ತಮ್ಮ ಕಛೇರಿ ಪ್ರದರ್ಶನದ ಕುರಿತು ‘ಆಗಾಗ್ಗೆ ಟೀಕೆಗಳನ್ನು ಕೇಳಿ ಬಹಳ ನಿರುತ್ಸಾಹ ‘ಪಟ್ಟರು. ನುರಿತರಾಗಿದ್ದು ಬಹಳ ಹಿರಿಯರಾದ ಅವರಿಗೆ ಈ ಟೀಕೆಯು ತೀವ್ರ ಪರಿಣಾಮ ಬೀರಿತು.
ಆತ್ಮವಿಶ್ವಾಸ ಕಳೆದುಕೊಂಡಂತೆ ಅನಿಸಿತು. ಧಾರ್ಮಿಕ ಸಮಾಲೋಚನೆಗೆ ಮತ್ತು ಸಲಹೆಗೆ ಅವರು ಗುರುಗಳ ಬಳಿ ಹೋದರು. “ಒಬ್ಬ ವ್ಯಕ್ತಿಯ ಬದುಕಿನಲ್ಲಿ ಟೀಕಾಕಾರರು ಬಹಳ ಮುಖ್ಯ ಪಾತ್ರ ವಹಿಸುತ್ತಾರೆ. ಅವರು ತಮ್ಮ ಸ್ನೇಹಿತರು ಎಂದೂ ಹೇಳದ್ದನ್ನು ಹೇಳುತ್ತಾರೆ. ಆದರೆ ನೀನು ನಿನ್ನ ಕೌಶಲ್ಯವನ್ನು ಇನ್ನೂ ಹೇಗೆ ಉತ್ತಮಗೊಳಿಸುವುದೆಂದು ಮಾತ್ರ ಯೋಚಿಸು. ಅದು ನಿನ್ನ ಪ್ರಗತಿಗೆ ಸಹಾಯಕಾರಿಯಾಗಿದ್ದರೆ ಅವರು ನಿಜವಾಗಿ ಒಳಿತನ್ನು ಮಾಡುತ್ತಿದ್ದಾರೆಂದರ್ಥ ತಿಳಿಯಿತೇ?” ಎಂದು ಗುರುಗಳು ಹೇಳಿದರು.
ಇದರೊಂದಿಗೆ ಗುರುಗಳು ಸಂಗೀತಗಾರರಿಗೆ ಇನ್ನೇನೋ ಹೇಳಿದರು.
ಪ್ರಶ್ನೆಗಳು
- ಗುರುಗಳು ಸಂಗೀತಗಾರರಿಗೆ ಮನವರಿಕೆ ಮಾಡಲು ಇನ್ನೇನು ಹೇಳಿದರು?
- ಈ ಕಥೆಯ ನೀತಿಯೇನು? ಉತ್ತರಗಳು
- “ಯಾವ ಟೀಕಾಕಾರನನ್ನೂ ಗೌರವಿಸಲು ಪ್ರತಿಮೆಗಳನ್ನು ಮಾಡಲಿಲ್ಲ. ಟೀಕಿಸಲೆಂದೇ ಪ್ರತಿಮೆಗಳನ್ನು ಮಾಡಲಾಗಿದೆ” ಎಂದು ಗುರುಗಳು ಹೇಳಿದರು.
- ಟೀಕೆಯನ್ನು ತಪ್ಪಿಸಿಕೊಳ್ಳುವುದೆಂದರೆ ಏನೂ ಮಾಡದಿರುವುದು, ಹೇಳದಿರುವುದು ಕೊನೆಗೆ ಏನೂ ಆಗದಿರುವುದು. ಸಮಾಜಕ್ಕೆ ಏನಾದರೂ ಉಪಯೋಗವಿರುವುದನ್ನು ಮಾಡುವವರಿಗೆ ಮಾತ್ರ ಟೀಕೆ ಮಾಡಲಾಗುತ್ತದೆ. ಟೀಕೆಗಳು ಮಾಡುವವರಿಗೆಯೇ ಹೊರತು ಮಾಡದಿರುವವರಿಗಲ್ಲ. ಹೆಚ್ಚು ಟೀಕೆ ಇದ್ದಲ್ಲಿ ಹೆಚ್ಚು ಕೊಡುಗೆ. ಹೀಗಾಗಿ ಟೀಕೆಯಿಂದ ನಿರುತ್ಸಾಹಿಗಳಾಗಬಾರದು. ಟೀಕೆಯನ್ನು ರಚನಾತ್ಮಕವಾಗಿ ಕಾಣಬೇಕು. ಇದು ನಿಮ್ಮ ಪ್ರಗತಿಗೆ ಪೂರಕವಾಗುತ್ತದೆ.