ಮನೆ ಸುದ್ದಿ ಜಾಲ ನಂಜನಗೂಡಿನ ಶ್ರೀಕಂಠೇಶ‍್ವರ ದೇವಾಲಯದ ಹುಂಡಿ ಎಣಿಕೆ: 2 ಕೋಟಿ ರೂ. ಸಂಗ್ರಹ

ನಂಜನಗೂಡಿನ ಶ್ರೀಕಂಠೇಶ‍್ವರ ದೇವಾಲಯದ ಹುಂಡಿ ಎಣಿಕೆ: 2 ಕೋಟಿ ರೂ. ಸಂಗ್ರಹ

0

ಮೈಸೂರು: ದಕ್ಷಿಣಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ  ಭಕ್ತರಿಂದ ಭಾರಿ ಕಾಣಿಕೆ ಹರಿದು ಬಂದಿದ್ದು, ಎರಡೇ ತಿಂಗಳಲ್ಲಿ ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ  2 ಕೋಟಿ ರೂ ಸಂಗ್ರಹವಾಗಿದೆ.

 ಶ್ರೀಕಂಠೇಶ್ವರನ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, 25 ಹುಂಡಿಯಲ್ಲಿ 2,04,08,923 ರೂ ಸಂಗ್ರಹವಾಗಿದೆ. ಈ ಮೂಲಕ 2,04,08,923 ರೂ. ಗೂ ಹೆಚ್ಚು ಕಾಣಿಕೆಯನ್ನ ಭಕ್ತರು ನೀಡಿದ್ದಾರೆ.

120 ಗ್ರಾಂ ಚಿನ್ನ, 5 ಕೆಜಿ 600 ಗ್ರಾಂ ಬೆಳ್ಳಿ ಕಾಣಿಕೆಯಾಗಿ ಬಂದಿದೆ. ಇನ್ನು ನಿಷೇಧಿತ ನೋಟುಗಳನ್ನೂ  ಕಾಣಿಕೆಯಾಗಿ ಹುಂಡಿಗೆ  ಹಾಕಲಾಗಿದೆ. ಒಟ್ಟು 28,500 ರೂ ಮೌಲ್ಯದ ನಿಷೇಧಿತ ನೋಟುಗಳು ಕಾಣಿಕೆ ರೂಪದಲ್ಲಿ ಬಂದಿದೆ.  1000 ರೂ.ಮುಖಬೆಲೆಯ 5 ನೋಟುಗಳು, 500 ರೂ.ಮುಖಬೆಲೆಯ 47 ನೋಟುಗಳನ್ನ ಭಕ್ತರು ಹಾಕಿದ್ದಾರೆ.

ವಿದೇಶಿ ಭಕ್ತರಿಂದ ನಂಜುಂಡನಿಗೆ ಕಾಣಿಕೆ ಅರ್ಪಣೆ ಮಾಡಿದ್ದು, 15 ವಿದೇಶಿ ಕರೆನ್ಸಿ ಹುಂಡಿಯಲ್ಲಿ ಸಂಗ್ರಹವಾಗಿದೆ. ಕೊರೊನಾ ಮುಕ್ತವಾದ ನಂತರ ಶ್ರೀಕಂಠೇಶ್ವರ ದೇವಾಲಯಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾದ ಹಿನ್ನಲೆ, ಹುಂಡಿ ಕಾಣಿಕೆಯಲ್ಲೂ ಹೆಚ್ಚು ಹಣ ಸಂಗ್ರಹವಾಗಿದೆ. ಬ್ಯಾಂಕ್ ಸಿಬ್ಬಂದಿ ಸೇರಿದಂತೆ ಸುಮಾರು 40 ಕ್ಕೂ ಹೆಚ್ಚು ಮಂದಿ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದರು.

ಹಿಂದಿನ ಲೇಖನ19 ವರ್ಷಗಳ  ಹಿಂದಿನ ಅಪಘಾತ ಪ್ರಕರಣ: ಆರೋಪಿಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್
ಮುಂದಿನ ಲೇಖನಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ‌  ಮಹತ್ತರವಾದದು: ಸಚಿವ ಕೆ.ಗೋಪಾಲಯ್ಯ