ಮನೆ ಕಾನೂನು 19 ವರ್ಷಗಳ  ಹಿಂದಿನ ಅಪಘಾತ ಪ್ರಕರಣ: ಆರೋಪಿಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

19 ವರ್ಷಗಳ  ಹಿಂದಿನ ಅಪಘಾತ ಪ್ರಕರಣ: ಆರೋಪಿಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

0

ಬೆಂಗಳೂರು: 19 ವರ್ಷಗಳ  ಹಿಂದಿನ ಅಪಘಾತ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿಗೆ ಆರು ತಿಂಗಳ ಕಾಲ ಕೋರ್ಟ್ ಜೈಲು ಶಿಕ್ಷೆ ವಿಧಿಸಿದೆ.

ನಾರಾಯಣಸ್ವಾಮಿ ಜೈಲು ಶಿಕ್ಷೆಗೆ ಗುರಿಯಾದ ಆರೋಪಿಯಾಗಿದ್ದು, ದಿನಾಂಕ 24 .3. 2003 ರಂದು ಸೀತಾ ಸರ್ಕಲ್ ನಲ್ಲಿ ರಂಗಯ್ಯ ನಾಯ್ಡ  ಎಂಬ ಪಾದಚಾರಿಗೆ  ಟಿಪ್ಪರ್ ಲಾರಿಯಿಂದ ಚಾಲಕ ನಾರಾಯಣಸ್ವಾಮಿ  ಅಪಘಾತ ಮಾಡಿದ್ದನು.  ಪಾದಚಾರಿ ಮೃತಪಟ್ಟಿದ್ದರು.  ಈ ಸಂಬಂಧವಾಗಿ ಬನಶಂಕರಿ ಸಂಚಾರ ಪೊಲೀಸರು ಮೊ.ಸಂಖ್ಯೆ: 91/2003 ಕಲಂ 279, 304(ಎ) ಐಪಿಸಿ 134(ಎ) & (ಬಿ) ರೆ/ವಿ 187 ಎಂ.ವಿ ಕಾಯ್ದೆಯ ರೀತ್ಯಾ ಕೇಸು ದಾಖಲಿಸಿಕೊಂಡು, ಪ್ರಕರಣದ ಆರೋಪಿ ಟಿಪ್ಪರ್ ಚಾಲಕ ನಾರಾಯಣಸ್ವಾಮಿ ಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.

ನಂತರ ಪ್ರಕರಣದ ವಿಚಾರಣೆ ನಡೆಸಿದ  2ನೇ ಎಂ.ಎಂ.ಟಿ.ಸಿ ನ್ಯಾಯಾಲಯವು ಆರೋಪಿತನಿಗೆ 16.06.2005ರಂದು 6 ತಿಂಗಳ ಜೈಲುಶಿಕ್ಷೆ ಮತ್ತು ರೂ 3000/- ದಂಡ ವಿಧಿಸಿ ಆದೇಶಿಸಿದ್ದು, ಈ ಆದೇಶದ ವಿರುದ್ಧ ಆರೋಪಿತ ನಾರಾಯಣಸ್ವಾಮಿ ಘನ 1ನೇ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದನು.  ದಿ:13.07.2012 ರಂದು ನ್ಯಾಯಾಲಯವು 2ನೇ ಎಂ.ಎಂ.ಟಿ.ಸಿ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದು ಆದೇಶಿಸಿತ್ತು,.

ಆದಾಗ್ಯೂ ಆರೋಪಿತ ನಾರಾಯಣಸ್ವಾಮಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಈ ಆದೇಶದ ವಿರುದ್ಧವು ಮೇಲ್ಮನವಿ ಸಲ್ಲಿಸಿದ್ದನು.

ಹೈಕೋರ್ಟ್ ಕೆಳ ನ್ಯಾಯಾಲಯಗಳ ಆದೇಶವನ್ನು ಎತ್ತಿ ಹಿಡಿದಿದ್ದು, ರಾಜ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ಆರೋಪಿ ನಾರಾಯಣಸ್ವಾಮಿಯನ್ನು ಬಂಧಿಸಲು ಘನ 4ನೇ ಎಂ.ಎಂ.ಟಿ.ಸಿ ನ್ಯಾಯಾಲಯವು ಸೆರೆಮನೆಗೆ ಒಪ್ಪಿಸುವ ವಾರೆಂಟ್ ಜಾರಿಗೊಳಿಸಿತ್ತು.  ಸದರಿ ನ್ಯಾಯಾಲಯದ ಆದೇಶ ಮೇರೆಗೆ ಆರೋಪಿಯನ್ನು ಬಂಧಿಸಿ  ಜೈಲಿಗೆ ಕಳುಹಿಸಿದೆ. 19ವರ್ಷಗಳ ಸುದೀರ್ಘ ವಿಚಾರಣೆಯ ಈ ಪ್ರಕರಣದಲ್ಲಿ ಆರೋಪಿತನನ್ನು ಪತ್ತೆ ಮಾಡಿ ಜೈಲುವಾಸಕ್ಕೆ ಹಾಜರುಪಡಿಸಲು ಬನಶಂಕರಿ ಸಂಚಾರ ಪೊಲೀಸ್ ಠಾಣೆ ಸಿಬ್ಬಂದಿರವರಾದ  ಕುಮಾರಸ್ವಾಮಿ ಹೆಚ್.ಸಿ, ಅತೀಕ್ ಉಲ್ಲಾ  .ರವಿ  .ಹನುಂತಪ್ಪ ನಾಗಪ್ಪಳ ಅವರು ಪ್ರಾಮಾಣಿಕವಾಗಿ ಕರ್ತವ್ಯವನ್ನು ನಿರ್ವಹಿಸಿದ್ದಾರೆ.

ಹಿಂದಿನ ಲೇಖನಯೂಟ್ಯೂಬ್‌ನಲ್ಲಿ ಹಿಜಾಬ್ ಕಲಾಪ: ಭಾರತದ ನ್ಯಾಯಾಂಗ ಇತಿಹಾಸದಲ್ಲಿ ನೂತನ ದಾಖಲೆ ಬರೆದ ಕರ್ನಾಟಕ ಹೈಕೋರ್ಟ್‌
ಮುಂದಿನ ಲೇಖನನಂಜನಗೂಡಿನ ಶ್ರೀಕಂಠೇಶ‍್ವರ ದೇವಾಲಯದ ಹುಂಡಿ ಎಣಿಕೆ: 2 ಕೋಟಿ ರೂ. ಸಂಗ್ರಹ