ಮನೆ ಆರೋಗ್ಯ ಹೈಪೋಥೈರಾಯಿಡಿಸಂ

ಹೈಪೋಥೈರಾಯಿಡಿಸಂ

0

ಚಿಕ್ಕ ಮಕ್ಕಳಲ್ಲಿ ಡೆವಲಪ್ಮೆಂಟ್ ಡಿಸೆಬಿಲಿಟಿ ಹೈಪೋಥೈರಾಯಿಡಿಸಂ ನಿಂದ ಉಂಟಾಗುತ್ತದೆ. ಹುಟ್ಟಿನಿಂದಲೇ ಥೈರಾಯಿಡಿಸಂ ದೋಷವಿರಬಹುದು. ಹುಟ್ಟಿನಿಂದಲೇ ಥೈರಾಯಿಡಿಸಂ ದೋಷವಿದ್ದಾಗ ನಿಗದಿತ ಅವಧಿಯಾಗಿದ್ದರೂ, ಹೆರಿಗೆಯಾಗುವುದು ತಡವಾಗುತ್ತದೆ. ಮಗು ಬಹಳ ಮಂಕಾಗಿರುತ್ತದೆ. ಸ್ನಾಯುಗಳ ಹಿಡಿತ ಕಡಿಮೆ ಇರುತ್ತದೆ. ಹಾಲು ಕುಡಿಯಲು ಕಷ್ಟವಾಗುತ್ತದೆ. ಕಾಮಾಲೆ ಬಂದು ವಾಸಿಯಾಗದೇ ಇರುತ್ತದೆ.        

ಮಗುವಿಗೆ ದಿನಕಳೆದಂತೆ ಮಲಬದ್ಧತೆ ಉಂಟಾಗುತ್ತದೆ. ಹಸಿವು ಕಡಿಮೆಯಿರುತ್ತದೆ. ಅಂಬಲಿಕಲ್ ಹಾರ್ನಿಯಾ ಬೆಳವಣಿಗೆ ಆಗುತ್ತದೆ. ಹೊಟ್ಟೆ ಉಬ್ಬಿದಂತೆ ಕಾಣುತ್ತದೆ. ಅಳುತ್ತಿದ್ದರೆ ಗಂಟಲು ಗೊಗ್ಗರಾಗಿರುತ್ತದೆ. ನಾಲಿಗೆ ದೊಡ್ಡದಾಗಿರುತ್ತದೆ. ರಕ್ತ ಹೀನತೆಯಿರುತ್ತದೆ.      

ಮೇಲಿನ ಲಕ್ಷಣಗಳಿಗನುಗುಣವಾಗಿ ಹೈಪೋಥೈರಾಯಿಡಿಸಂ ಇದೆಯೆಂದು ಸುಲಭವಾಗಿ ಗುರುತಿಸಬಹುದು. ಟಿ 3, ಟಿ4, ಟಿ5 ಪರೀಕ್ಷೆಗಳ ಮೂಲಕ ಹೈಪೋಥೈರಾಯಿಡಿಸಂ ನಿರ್ಧರಿಸಬಹುದು.

ಚಿಕಿತ್ಸೆ :– ಹೈಪೋಥೈರಾಯಿಡಿಸಂ ಅನ್ನು ಆರಂಭದಲ್ಲಿಯೇ ಗುರುತಿಸಿ ಥೈರಾಕ್ಸಿನ್ ಔಷಧಿ ಕೊಟ್ಟರೆ ಮಗುವಿನ ಬೆಳವಣಿಗೆ ದೋಷವನ್ನು ಸುಲಭವಾಗಿ ನಿವಾರಿಸಬಹುದು.

5. ಅಟೆನ್ಷನ್ ಡಿಫಿಷಿಟ್ ಹೈಪರ್ ಆಕ್ಟಿವ್ ಡಿಸಾರ್ಡಸ್ (ಎ.ಡಿ.ಹೆಚ್.ಡಿ) :-        

ಎ.ಡಿ.ಎಚ್.ಡಿ ಸಮಸ್ಯೆ 5-10% ಶಾಲೆಯ ಮಕ್ಕಳಲ್ಲಿ ಕಂಡುಬರುತ್ತದೆ. ಹೆಣ್ಣುಮಕ್ಕಳಿಗಂತಲೂ ಗಂಡುಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚು ಎ.ಡಿ.ಹೆಚ್.ಡಿ ಇರುವ 50% ರಷ್ಟು ಮಕ್ಕಳಲ್ಲಿ 4 ವರ್ಷದೊಳಗೆ ಇದರ ಲಕ್ಷಣಗಳು ಕಾಣಿಸುತ್ತವೆ. ಆದರೆ ಬಹಳಷ್ಟು ಜನ ಅದನ್ನ ಗಂಭೀರವಾಗಿ ಪರಿಗಣಿಸುವುದಿಲ್ಲ. ತುಂಟಮಗು ಎಂದುಕೊಂಡು ಸುಮ್ಮನಿದ್ದುಬಿಡುತ್ತಾರೆ. ಶಾಲೆಗೆ ಸೇರಿದ ನಂತರ ಈ ಸಮಸ್ಯೆ ಬೃಹದಾಕಾರವಾಗುತ್ತದೆ. ಎ.ಡಿ.ಹೆಚ್.ಡಿ ಮಕ್ಕಳಲ್ಲಿ ಇನ್ ಅಟೆನ್ಷನ್ ಹೈಪರ್ ಆಕ್ಟಿವಿಟಿ ಮತ್ತು ಇಂಪಲ್ಸವಿಟಿ ಇರುತ್ತದೆ.    

ಎ.ಡಿ.ಹೆಚ್.ಡಿ ಲಕ್ಷಣಗಳು ಇನ್ ಅಟೆನ್ಷನ್ :-

ಎ.ಡಿ.ಹೆಚ್.ಡಿ ಮಗು ನಿರ್ಲಕ್ಷ ದಿಂದಿರುತ್ತದೆ. ಶಾಲೆಯ ಮತ್ತು ಕಲಿಕೆ ವಿಷಯದಲ್ಲಿ ಓದುವುದು ಮತ್ತು ಬರೆಯುವುದರಲ್ಲಿ ಬಹಳ ತಪ್ಪುಗಳನ್ನು ಮಾಡುತ್ತದೆ. ಯಾರಾದರೂ, ಏನಾದರೂ ಹೇಳಿದರೆ ಮನಸ್ಸಿಟ್ಟು ಕೇಳಿಸಿಕೊಳ್ಳುವುದಿಲ್ಲ. ಹೇಳಿದ್ದನ್ನು ಪಾಲಿಸುವುದಿಲ್ಲ. ಹೇಳಿದ ಕೆಲಸ ಮಾಡೋದಿಲ್ಲ. ತನ್ನ ಪುಸ್ತಕಗಳನ್ನು, ಆಟದ ಸಾಮಾನುಗಳನ್ನು ಸದಾ ಎಲ್ಲೆಂದರಲ್ಲಿ ಬಿಟ್ಟುಬಿಡುತ್ತದೆ. ಎಲ್ಲಿಬಿಟ್ಟಿದೆನೆಂಬ ಗಮನವಿರುವುದಿಲ್ಲ. ಮರೆವು ಜಾಸ್ತಿ ಇರುತ್ತದೆ.

ಹೈಪರ್ ಆಕ್ಟಿವಿಟಿ :-

ಮನೆಯಲ್ಲಾಗಲೀ, ಶಾಲೆಯಲ್ಲಾಗಲೀ ಇಂತಹ ಮಕ್ಕಳು ಅಚ್ಚುಕಟ್ಟಾಗಿ ಒಂದು ಕಡೆ ಕೂರುವುದಿಲ್ಲ. ಸದಾ ಅತ್ತಿತ್ತ ತಿರುಗಾಡುತ್ತಿರುತ್ತಾರೆ. ಎಲ್ಲೆಲ್ಲಿಗೋ ಹತ್ತುತ್ತಾ, ಮೇಲಿನಿಂದ ಕೆಳಗೆ ಧುಮುಕುತ್ತಾರೆ. ಆಟಗಳಲ್ಲಿ ಕೂಡ ಸ್ಥಿರತೆಯಿರುವುದಿಲ್ಲ. ಆಡುತ್ತಿದ್ದಂತೆಯೇ ಬಿಟ್ಟು ಮತ್ತೊಂದು ಕಡೆ ಹೊರಡುತ್ತಾರೆ. ಏನಾದರೊಂದನ್ನ ಕುಡಿಯುತ್ತಿರುತ್ತಾರೆ. 

ಇಂಪಲ್ಸಿವಿಟಿ :-

ಉಪಾಧ್ಯಾಯರು ಏನಾದರೂ ಪ್ರಶ್ನೆ ಕೇಳುತ್ತಿದ್ದರೆ ಪೂರ್ತಿ ಕೇಳಿಸಿಕೊಳ್ಳುವ ಮೊದಲೇ ತನಗೆ ತೋಚಿದ ಉತ್ತರವನ್ನು ಹೇಳುತ್ತಾರೆ. ಸಂಯಮ, ವಿಧಾನವೆಂಬುದು ಇರುವುದಿಲ್ಲ. ಕ್ಷಣಾರ್ಧದಲ್ಲಿ ಮನಸ್ಸು ಬದಲಾಗುತ್ತಿರುತ್ತದೆ.       

ಮೇಲೆ ವಿವರಿಸಲಾದ ಲಕ್ಷಣಗಳಲ್ಲಿ ಯಾವುದಾದರೂ ಆರು ಲಕ್ಷಣಗಳು ಆರು ತಿಂಗಳವರೆಗೆ ಇದ್ದದ್ದೇ ಆದರೆ ಆ ಮಗುವಿನಲ್ಲಿ ಎ.ಡಿ.ಹೆಚ್.ಡಿ ಇದೆ ಎಂದು ಭಾವಿಸಬೇಕು.

ಚಿಕಿತ್ಸೆ :-

ಎ.ಡಿ.ಹೆಚ್.ಡಿ ಇರುವ ಮಕ್ಕಳಿಗೆ ಔಷಧಿಗಳ ಮೂಲಕ ಅತಿ ಚಟುವಟಿಕೆಯನ್ನು ಸ್ವಲ್ಪ ಕಡಿಮೆ ಮಾಡಬಹುದು. ಬಿಹೇವಿಯರ್ ಥೆರಪಿ ಮೂಲಕ ವರ್ತನೆಯಲ್ಲಿ ಬದಲಾವಣೆ ತರಬಹುದು. ಕಲಿಕೆಯ ಮೇಲೆ ಗಮನವನ್ನು ಕೇಂದ್ರೀಕರಿಸುವಂತೆ ಮಾಡಬಹುದು.