ಮನೆ ರಾಜಕೀಯ ಸಂಪುಟ ವಿಸ್ತರಣೆ ಬಗ್ಗೆ ಗಂಧ-ಗಾಳಿಯೂ ಗೊತ್ತಿಲ್ಲ: ಸಚಿವ ಎಸ್.ಟಿ.ಸೋಮಶೇಖರ್

ಸಂಪುಟ ವಿಸ್ತರಣೆ ಬಗ್ಗೆ ಗಂಧ-ಗಾಳಿಯೂ ಗೊತ್ತಿಲ್ಲ: ಸಚಿವ ಎಸ್.ಟಿ.ಸೋಮಶೇಖರ್

0

ಮೈಸೂರು: ಸಂಪುಟ ವಿಸ್ತರಣೆ ಬಗ್ಗೆ ನನಗೆ ಏನು ಮಾಹಿತಿ ಇಲ್ಲ. ಅದರ ಗಂಧ- ಗಾಳಿಯೂ ಗೊತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಫೆ.7 ರಂದು ದೆಹಲಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೆರಳುತ್ತಿರುವ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಸಚಿವ ಸಂಪುಟ ವಿಸ್ತರಣೆ ಮಾತುಗಳು ಮತ್ತೇ ಮುನ್ನೆಲೆಗೆ ಬಂದಿವೆ. ಈ ಬಗ್ಗೆ ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಚಿವರು, ಸಚಿವ ಸಂಪುಟ ವಿಸ್ತರಣೆ ವಿಚಾರ ಬಗ್ಗೆ ನನಗೆ ಗಂಧ-ಗಾಳಿಯು ತಿಳಿದಿಲ್ಲ ಎಂದರು.

ಒಬ್ಬ ರಾಂಗ್ ವ್ಯಕ್ತಿಗೆ ನೀವು ಪ್ರಶ್ನೆ ಕೇಳುತ್ತಿದ್ದೀರಾ. ಮಾಹಿತಿ ಸಿಕ್ಕರೆ ನಿಮಗೆ ಮೊದಲು ಹೇಳುತ್ತೇನೆ. ಸಚಿವ ಸಂಪುಟ ವಿಸ್ತರಣೆ ಸಿಎಂ ಪರಮಾಧಿಕಾರ. ಅವರು ವಿಸ್ತರಣೆ ಆದರೂ ಮಾಡಬಹುದು ಪುನರ್‌ರಚನೆ ಆದರೂ ಮಾಡಬಹುದು. ಇದರಲ್ಲಿ ನಮ್ಮ ಪಾತ್ರ ಏನು ಇಲ್ಲ ಸ್ಪಷ್ಟ ಪಡಿಸಿದರು.

 ಬಿಜೆಪಿ ಶಾಸಕರು ಸಚಿವರು ಸಂಪರ್ಕದಲ್ಲಿದ್ದಾರೆ ಎಂದು ವಿಪಕ್ಷ ನಾಯಕ‌ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಪಕ್ಷದಲ್ಲೇ ಬೆಂಕಿ ಹೊತ್ತಿ ಉರಿಯುತ್ತಿದೆ. ಅಲ್ಲಿದ್ದವರೇ ಒಬ್ಬೊಬ್ಬರಾಗಿ ಹೊರಗೆ ಬರುತ್ತಿದ್ದಾರೆ. ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಹೋಗುವುದು ಸಾಮಾನ್ಯ ಎಂದು ಹೇಳಿದರು.

ಗ್ಯಾಸ್ ಪೈಪ್ ಲೈನ್ ಜಟಾಪಟಿ ಶೀಘ್ರ ಬಗೆಹರಿಯಲಿದೆ:

ಮೈಸೂರಿನಲ್ಲಿ ಗ್ಯಾಸ್ ಪೈಪ್ ಲೈನ್ ವಿಚಾರವಾಗಿ ಶಾಸಕರು ಹಾಗೂ ಸಂಸದರ ನಡುವಿನ ಜಟಾಪಟಿ ವಿಚಾರವಾಗಿ  ಶಾಸಕರು ಸಂಸದರ ನಡುವೆ ಮಾಹಿತಿ ವಿಚಾರವಾಗಿ ಗೊಂದಲ ಇದ್ದು, ಸದ್ಯದಲ್ಲೇ ಬಗೆಹರಿಸಲಾಗುವುದು ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ಖುದ್ದು ರಾಜ್ಯಾಧ್ಯಕ್ಷರು ಎಲ್ಲರನ್ನೂ ಕರೆದು ಮಾತನಾಡಿ, ಯಾರು ಅನಗತ್ಯವಾಗಿ ಮಾತನಾಡದಂತೆ ಸೂಚಿಸಿದ್ದಾರೆ. ಅವರೇ ಸಮಸ್ಯೆ ಬಗೆಹರಿಸುವ ಹೊಣೆ ಹೊತ್ತಿರುವುದರಿಂದ ನಾನು ಮಧ್ಯ ಪ್ರವೇಶ ಮಾಡಿ ಸಭೆ ಮಾಡುವ ಅಗತ್ಯತೆ ಇಲ್ಲ ಎಂದು ಹೇಳಿದರು.

ಪಾಲಿಕೆ ಆಯುಕ್ತರಿಗೆ ಕೋರೊನಾ ಸೋಂಕು ದೃಢಪಟ್ಟಿರುವುದರಿಂದ ದೂರವಾಣಿ ಮೂಲಕ ಯೋಜನೆ ಕುರಿತ ಗೊಂದಲದ ಬಗ್ಗೆ ಮಾತನಾಡಿದ್ದೇನೆ. ಶ್ರೀಘ್ರದಲ್ಲೇ ಸಮಸ್ಯೆ ಬಗೆಹರಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಹಿಂದಿನ ಲೇಖನಪರ್ಸಂಟೇಜ್ ಗಾಗಿ ಪಿಡಿಓಗಳಿಗೆ ಕಿರುಕುಳ ಆರೋಪ: ಇಓ ಅಮಾನತು
ಮುಂದಿನ ಲೇಖನಶಾಲೆಗಳಲ್ಲಿ ಕೇಸರಿ ಶಾಲೆ- ಹಿಜಾಬ್ ಧರಿಸಲು ಅವಕಾಶವಿಲ್ಲ: ಅರಗ ಜ್ಞಾನೇಂದ್ರ