ಮನೆ ರಾಜಕೀಯ ಮೈಸೂರು ಅಭಿವೃದ್ಧಿ ಮಾಡಿದ್ದು ನಾನು, ಮಹಾರಾಜರನ್ನು ಬಿಟ್ಟರೆ ನೆಕ್ಟ್ ನಾನೇ! ಎಂದುಕೊಂಡಿರುವ ಸ್ವಪಕ್ಷೀಯ ಶಾಸಕರಿಗೆ ಸಂಸದ...

ಮೈಸೂರು ಅಭಿವೃದ್ಧಿ ಮಾಡಿದ್ದು ನಾನು, ಮಹಾರಾಜರನ್ನು ಬಿಟ್ಟರೆ ನೆಕ್ಟ್ ನಾನೇ! ಎಂದುಕೊಂಡಿರುವ ಸ್ವಪಕ್ಷೀಯ ಶಾಸಕರಿಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು

0

ಮೈಸೂರು,ಜ.29- ಮೈಸೂರು ಅಭಿವೃದ್ಧಿ ಮಾಡಿದ್ದು ನಾನು, ನಾನು, ನಾನು..! ಮೈಸೂರು ಮಹಾರಾಜರನ್ನು ಬಿಟ್ಟರೆ ನೆಕ್ಟ್ ನಾನೇ ಎಂದು ಹೇಳಿಕೊಂಡು ತಿರುಗಾಡುತ್ತಿರುವ ಸ್ವಪಕ್ಷೀಯ ಶಾಸಕರಿಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
ಇಂದು ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಹಾರಾಜರ ನಂತರ ಅತಿಹೆಚ್ಚು ಲೀಡ್‌ನಲ್ಲಿ ಗೆದ್ದಿರೋದು ನಾನು. ಮೈಸೂರು ಮಹಾರಾಜರನ್ನು ಬಿಟ್ಟರೆ ನೆಕ್ಟ್ ನಾನೇ ಶಾಸಕ ಎಲ್ ನಾಗೇಂದ್ರ ಅಭಿವೃದ್ಧಿಯ ಹರಿಕಾರ ಎನ್ನುವ ಭ್ರಮೆಯಲ್ಲಿದ್ದಾರೆ. ೩೦ ಕೋಟಿ ರೂಪಾಯಿ ಅನುದಾನ ತಂದಿಲ್ಲ. ೩೦೦ ಕೋಟಿ ರೂಪಾಯಿ ಕೆಲಸ ಅಂತ ಹೇಳ್ತಾರೆ.ಎಲ್ಲಿದೆ ೩೦೦ ಕೋಟಿ ಯಾವ ರಸ್ತೆ ಮಾಡಿದ್ದೀರಿ ಅಂತ ತೋರಿಸಿ ಎಂದು ಸವಾಲು ಹಾಕಿದರು.
ಚಾಮರಾಜ ಕ್ಷೇತ್ರದ ಕೆ ಆರ್ ಆಸ್ಪತ್ರೆಯಲ್ಲಿ ಸೊಳ್ಳೆ, ನಾಯಿ ಕಾಟ ಇದೆ. ನಿಮ್ಮ ಕ್ಷೇತ್ರದ ವಿಜಯನಗರದಲ್ಲಿ ವಾಟರ್ ಟ್ಯಾಂಕ್ ಹಾಕಿಸಿದ್ದು ನಾನು. ಪಾಸ್ ಪೊರ್ಟ್ ಸೇವಾ ಕೇಂದ್ರ ಮಾಡಿಸಿದ್ದು ನಾನು. ನೀವು ಗೋವಾಕ್ಕೆ ಹೋಗುವ ಫ್ಲೆöÊಟ್ ತಂದಿದ್ದು ನಾನು. ಬೆಂಗಳೂರು-ಮೈಸೂರು ಹೆದ್ದಾರಿ ಮಾಡಿಸಿದ್ದು ನಾನು. ಕೆ ಆರ್ ಕ್ಷೇತ್ರದ ಕಸದ ಸಮಸ್ಯೆ ನಿವಾರಿಸಿದ್ದು ನಾನು ಶಾಸಕರು ರಿಯಲ್ ಎಸ್ಟೇಟ್ ಮಾಡಲಿ. ಆದರೆ ಕೃಷ್ಣರಾಜ, ಚಾಮರಾಜ ಕ್ಷೇತ್ರಗಳು ಅವರ ಬಡಾವಣೆಗಳಲ್ಲ. ಸ್ವಪಕ್ಷೀಯ ಶಾಸಕರಿಗೆ ಸಂಸದ ಪ್ರತಾಪ್ ಸಿಂಹ ಟಾಂಗ್ ನೀಡಿದರು.

ಕಾರ್ಯಕರ್ತರ ಬೆಂಬಲದಿAದ ಗೆಲುವು: ನಮ್ಮ ಪಕ್ಷದ ಕಾರ್ಯಕರ್ತರ ಅವಿರತ ಪರಿಶ್ರಮದ ಫಲವಾಗಿ ನಾನು ಸಂಸದನಾಗಿ ಮರು ಆಯ್ಕೆಯಾಗಿದ್ದೇನೆ. ಜೆಡಿಎಸ್ ಕಾಂಗ್ರೆಸ್ ನಲ್ಲಿರುವ ಮೋದಿ ಅಭಿಮಾನಿಗಳು ಸಹ ನನಗೆ ಬೆಂಬಲ ನೀಡಿದ್ದಾರೆ. ಅವರೆಲ್ಲರ ಬೆಂಬಲದಿAದ ನಾನು ಮರು ಆಯ್ಕೆಯಾಗಿದ್ದೇನೆ.
ನಾಗೇಂದ್ರ ಅವರ ಕೆ.ಜಿಕೊಪ್ಪಲ್ ನಲ್ಲಿ ನನಗೆ ಲೀಡ್ ಸಿಕ್ಕಿಲ್ಲ:
ಶಾಸಕ ನಾಗೇಂದ್ರ ಅವರು ವಾಸಿಸುತ್ತಿರುವ ಕೆ ಜಿ ಕೊಪ್ಪಲಿನಲ್ಲಿ ನನಗೆ ಲೀಡ್ ಸಿಕ್ಕಿಲ್ಲ. ಕೆ ಜಿ ಕೊಪ್ಪಲಿನಲ್ಲಿ ನನಗೆ ಹಿನ್ನಡೆಯಾಗಿದೆ. ಜೊತೆಗೆ ನೀವು ಆಡಿಬೆಳೆದ ಕೆ.ಜಿ ಕೊಪ್ಪಲಿನಲ್ಲಿ ನಿಮಗೂ ಲೀಡ್ ಸಿಕ್ಕಿಲ್ಲ. ನಗರಪಾಲಿಕೆ ಚುನಾವಣೆಯಲ್ಲೂ ಕೆ ಜಿ ಕೊಪ್ಪಲಿನಲ್ಲಿ ಬಿಜೆಪಿ ಅಭ್ಯರ್ಥಿ ಸೋತಿದ್ದಾರೆ. ಅಲ್ಲಿ ಹರೀಶ್ ಗೌಡ ಬೆಂಬಲಿತ ಅಭ್ಯರ್ಥಿ ಗೆದ್ದಿದ್ದಾರೆ.ನಗರಪಾಲಿಕೆ ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಶಾಸಕ ನಾಗೇಂದ್ರಗೆ ಸಾಧ್ಯವಾಗಿಲ್ಲ ಎಂದರು.
ಮೈಸೂರಿನ ಮಹಾರಾಜರನ್ನು ಹೊರತುಪಡಿಸಿದರೆ ಅತಿ ಹೆಚ್ಚು ಮತಗಳ ಅಂತರದಿAದ ನಾನು ಗೆದ್ದಿದ್ದೇನೆ. ಹೆಚ್ಚಿನ ಮತಗಳ ಅಂತರದಿAದ ಸಂಸದನಾಗಿ ಮರು ಆಯ್ಕೆಯಾಗಿದ್ದೇನೆ ಎಂದು ಶಾಸಕ ಎಲ್ ನಾಗೇಂದ್ರ ಅವರಿಗೆ ತಿರುಗೇಟು ನೀಡಿದರು.

ಗ್ಯಾಸ್ ಪೈಪ್ ಲೈನ್ ಅಳವಡಿಕೆಯಿಂದ ಅನುಕೂಲ: ಮೈಸೂರು ನಗರ ಅತಿ ವೇಗವಾಗಿ ಬೆಳೆಯುತ್ತಿದೆ. ಎರಡು ಸಿಲಿಂಡರ್ ಇದ್ದರೂ ಅದನ್ನು ಪಡೆಯಲು ಮನೆಯಲ್ಲೊಬ್ಬರು ಇರಲೇಬೇಕಿದೆ. ಸಿಲಿಂಡರ್ ನೀಡುವವರು ಹಣ ಪಡೆಯುತ್ತಾರೆ. ಸಿಲಿಂಡರ್ ಸ್ಪೋಟಗೊಂಡು ಅವಘಡಗಳು ಸಂಭವಿಸುತ್ತಿವೆ. ಇವೆಲ್ಲಾ ಸಮಸ್ಯೆಗಳನ್ನು ನಿವಾರಿಸುವ ಸಲುವಾಗಿ ಗ್ಯಾಸ್ ಪೈಪ್ ಲೈನ್ ಅಳವಡಿಕೆ ಮೂಲಕ ಅನಿಲ ಪೂರೈಕೆ ಚಿಂತನೆ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಚಿಂತನೆ ಇದಾಗಿದೆ. ಮೈಸೂರು ಸೇರಿದಂತೆ ರಾಜ್ಯದ ಹಲವಾರು ನಗರಗಳಲ್ಲಿ ಗ್ಯಾಸ್ ಪೈಪ್ ಲೈನ್ ಅಳವಡಿಸುವ ಉದ್ದೇಶವಿದೆ. ಗ್ಯಾಸ್ ಲೈನ್ ಪೈಪ್ ಅಳವಡಿಕೆಯಿಂದ ಜನರಿಗೆ ತುಂಬಾ ಅನುಕೂಲವಾಗಲಿದೆ ಎಂದು ಹೇಳಿದರು.

ಮೈಸೂರಿನಲ್ಲಿ ಈ ಹಿಂದೆಯೂ ಖಾಸಗಿ ಕಂಪನಿಯವರು ಮನಬಂದAತೆ ರಸ್ತೆಗಳನ್ನು ಅಗೆದಿದ್ದಾರೆ. ಜಸ್ಕೋದವರು ಎಲ್ಲೆಂದರಲ್ಲಿ ರಸ್ತೆಗಳನ್ನು ಅಗೆದಿದ್ದಾರೆ. ಆಗ ಜನಪ್ರತಿನಿಧಿಗಳು ಏಕೆ ಸುಮ್ಮನಿದ್ದರು. ಈಗ ಗ್ಯಾಸ್ ಪೈಪ್ ಲೈನ್ ಕಾಮಗಾರಿಯನ್ನು ಏಕೆ ವಿರೋಧಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಶಾಸಕ ರಾಮದಾಸ್ ಅವರು ಯೋಜನೆ ವಿರೋಧಿಸಿ ಪತ್ರ ಬರೆದಿರುವ ಔಚಿತ್ಯವನ್ನು ಪ್ರಶ್ನಿಸಿದ ಸಂಸದ ಪ್ರತಾಪ್ ಸಿಂಹ, ಯೋಜನೆ ವಿರೋಧಿಸಿ ಪತ್ರ ಬರೆಯುವ ಅಗತ್ಯವೇನಿತ್ತು? ಎಂದರು.

ಈ ವಿಚಾರದಲ್ಲಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು. ಪ್ರಧಾನಿ ನರೇಂದ್ರ ಮೋದಿಯವರು ಸಾಧಕ ಬಾಧಕಗಳನ್ನು ಪರಿಶೀಲಿಸಿ ಈ ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಶಾಸಕ ರಾಮದಾಸ್ ನರೇಂದ್ರ ಮೋದಿಗಿಂತ ಸೀನಿಯರ್ ಲೀಡರ್. ಮೋದಿ ಮುಖ್ಯಮಂತ್ರಿ ಆಗುವುದಕ್ಕಿಂತಲೂ ಮೊದಲೇ ಇವರು ಜನಪ್ರತಿನಿಧಿಗಳಾಗಿದ್ದವರು. ಶಾಸಕ ಎಲ್ ನಾಗೇಂದ್ರ ಕೂಡ ಪಾಲಿಕೆ ಸದಸ್ಯರಾಗಿದ್ದವರು. ಪಾಲಿಕೆ ಕೌನ್ಸಿಲ್ ಸಭೆಗೆ ಭಾಗಿಯಾಗದೇ ನಮ್ಮ ಪಕ್ಷದ ಮೇಯರ್ ಸುನಂದಾ ಪಾಲನೇತ್ರ ಅವರಿಗೆ ಅಗೌರವ ತೋರಲಾಗಿದೆ. ನಮ್ಮ ಪಕ್ಷದ ಮೇಯರ್ ಗೆ ಅಗೌರವ ತೋರಿದ್ದು ಸರಿಯಾದ ನಿಲುವೇ ಎಂದು ಪ್ರಶ್ನಿಸಿದರು.

ಮೋದಿಗಿಂತಲೂ ರಾಮದಾಸ್, ನಾಗೇಂದ್ರ ರಾಜಕೀಯದಲ್ಲಿ ಸಿನೀಯರ್: ಚಾಮರಾಜ ಕ್ಷೇತ್ರದಲ್ಲಿ ಈಗ ನೀವು ಹಾಕಿರುವ ರಸ್ತೆಗಳು ಒಂದು ವರ್ಷವೂ ಬಳಕೆ ಬರುವುದಿಲ್ಲ. ಸುಮ್ಮನೆ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ಮಾತು ಬರುತ್ತದೆ ಅಂತಾ ಏನೇನೋ ಮಾತಾಡಬೇಡಿ. ಮನೆ ಮನೆಗೆ ಗ್ಯಾಸ್ ಕೊಟ್ಟರು ಅಂತಾ ನಾಗೇಂದ್ರ ಅವರ ಹೆಸರನ್ನೆ ಹೇಳ್ತೀನಿ. ಮೋದಿ ಅವರಿಗಿಂತಲೂ ರಾಮದಾಸ್, ನಾಗೇಂದ್ರ ಅವರು ರಾಜಕೀಯದಲ್ಲಿ ಸಿನೀಯರ್. ಅವರಿಬ್ಬರು ಮೋದಿ ಅವರಿಗೆ ಪತ್ರ ಬರೆದು ಈ ಯೋಜನೆ ಸರಿ ಇಲ್ಲ ಅಂತಾ ಪತ್ರ ಬರೆಯಲಿ. ಆಗ ನಾನು ಸುಮ್ಮನಾಗುತ್ತೇನೆ ಎಂದು ಕಿಡಿಕಾರಿದರು.