Saval TV on YouTube
ಮುಂಬೈ(Mumbai): ಗುವಾಹಟಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಬ್ಯಾಟಿಂಗ್ ಮಾಸ್ಟರ್ ಕ್ಲಾಸ್ ಪ್ರದರ್ಶಿಸಿದ ನಂತರ ಭಾರತದ ಬ್ಯಾಟರ್ ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಐಸಿಸಿ ಏಕದಿನ ಪುರುಷರ ಶ್ರೇಯಾಂಕದಲ್ಲಿ ಉನ್ನತಿ ಪಡೆದಿದ್ದಾರೆ.
ಗುವಾಹಟಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತದ ಗೆಲುವಿನಲ್ಲಿ ಕೊಹ್ಲಿ ಭರ್ಜರಿ ಶತಕ ಬಾರಿಸಿದ್ದು, ಎರಡು ಸ್ಥಾನ ಮೇಲೇರಿ 6ನೇ ಸ್ಥಾನಕ್ಕೆ ತಲುಪಿದ್ದಾರೆ. ಆಕ್ರಮಣಕಾರಿ 83 ರನ್ ಗಳಿಸಿದ ರೋಹಿತ್ ಶರ್ಮಾ 8ನೇ ಸ್ಥಾನ ಪಡೆದು ಕೊಂಡಿದ್ದಾರೆ. ಶ್ರೀಲಂಕಾ ತಂಡದ ನಾಯಕ ದಸುನ್ ಶನಕಾ ಅವರು ಶತಕ ಗಳಿಸಿದ್ದರು. ಹೀಗಾಗಿ 20 ಸ್ಥಾನ ಮೇಲೇರಿ 61 ಸ್ಥಾನಕ್ಕೆ ತಲುಪಿದ್ದಾರೆ.
ಬೌಲಿಂಗ್ ಪಟ್ಟಿಯಲ್ಲಿ, ಮೊಹಮ್ಮದ್ ಸಿರಾಜ್ ಅವರು ಮೊದಲ ಏಕದಿನ ಪಂದ್ಯದಲ್ಲಿ ಎರಡು ವಿಕೆಟ್ ಕಬಳಿಸಿ ನಾಲ್ಕು ಸ್ಥಾನಗಳನ್ನು ಮೇಲೇರಿ 18 ಕ್ಕೆ ತಲುಪಿದ್ದಾರೆ.