ಮನೆ ಮನರಂಜನೆ ‘ಮಂಜುಮ್ಮೆಲ್ ಬಾಯ್ಸ್’ ಚಿತ್ರದ ನಿರ್ಮಾಪಕರಿಗೆ ಲೀಗಲ್ ನೋಟಿಸ್ ಕೊಟ್ಟ ಇಳಯರಾಜ

‘ಮಂಜುಮ್ಮೆಲ್ ಬಾಯ್ಸ್’ ಚಿತ್ರದ ನಿರ್ಮಾಪಕರಿಗೆ ಲೀಗಲ್ ನೋಟಿಸ್ ಕೊಟ್ಟ ಇಳಯರಾಜ

0

ಚೆನ್ನೈ: ಇತ್ತೀಚೆಗೆ ತೆರೆಕಂಡು ಸೂಪರ್ ಹಿಟ್ ಆದ ಮಳಯಾಲಂ ಸಿನಿಮಾ ‘ಮಂಜುಮ್ಮೆಲ್ ಬಾಯ್ಸ್’ ಚಿತ್ರದ ನಿರ್ಮಾಪಕರಿಗೆ ಹಿರಿಯ ಸಂಗೀತ ನಿರ್ದೇಶಕ ಇಳಯರಾಜ ಅವರು ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

Join Our Whatsapp Group

ಮಂಜುಮ್ಮೆಲ್ ಬಾಯ್ಸ್ ಚಿತ್ರದ ನಿರ್ಮಾಪಕರಾದ ಸೊಬಿನ್ ಶಹಿರ್, ಬಾಬು ಶಹಿರ್ ಮತ್ತು ಶಾನ್ ಅಂಟೋನಿ ಅವರಿಗೆ ಕಾಪಿರೈಟ್ ಉಲ್ಲಂಘನೆಗಾಗಿ ಇಳಯರಾಜ ಅವರು ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

ಕಮಲ್ ಹಾಸನ್ ಅವರ ‘ಗುಣ’ ಚಿತ್ರದ ಇಳಯರಾಜ ಅವರ ಐಕಾನಿಕ್ ‘ಕಣ್ಮಣಿ ಅನ್ಬೋಡು’ ಹಾಡನ್ನು ‘ಮಂಜುಮ್ಮೆಲ್ ಬಾಯ್ಸ್’ ಚಿತ್ರದಲ್ಲಿ ಅನಧಿಕೃತವಾಗಿ ಬಳಸಿಕೊಳ್ಳಲಾಗಿದೆ ಎಂದು ಅವರ ಕಾನೂನು ತಂಡವು ಆರೋಪಿಸಿದೆ.

ಚಿದಂಬರಂ ನಿರ್ದೇಶನದ ಮಲಯಾಳಂ ಚಿತ್ರ ‘ಮಂಜುಮ್ಮೆಲ್ ಬಾಯ್ಸ್’ ನ ಕ್ಲೈಮ್ಯಾಕ್ಸ್‌ ನಲ್ಲಿ ‘ಕಣ್ಮಣಿ ಅನ್ಬೋಡು’ ಹಾಡಿನ ಬಳಕೆ ಮಾಡಿದ್ದು, ಚಿತ್ರಕ್ಕೆ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ.

ಇಳಯರಾಜ ಅವರು ಹಕ್ಕುಸ್ವಾಮ್ಯ ಉಲ್ಲಂಘನೆಯನ್ನು ಕ್ಲೈಮ್ ಮಾಡಿದ್ದಾರೆ. ಚಿತ್ರದಲ್ಲಿ ಹಾಡಿನ ಬಳಕೆಯನ್ನು ಮುಂದುವರಿಸಲು ಅಥವಾ ಅದನ್ನು ತೆಗೆದು ಹಾಕಲು ಅವರಿಂದ ಸೂಕ್ತ ಅನುಮತಿ ಪಡೆಯಲು ನಿರ್ಮಾಪಕರನ್ನು ಕೋರಿದ್ದಾರೆ.

 ‘ಮಂಜುಮ್ಮೆಲ್ ಬಾಯ್ಸ್’ ತಮಿಳುನಾಡಿನ ಕೊಡೈಕೆನಾಲ್‌ನಲ್ಲಿರುವ ಗುಣ ಗುಹೆಯಲ್ಲಿ ಸ್ನೇಹಿತರ ಗುಂಪೊಂದು ಆಳವಾದ ಗುಂಡಿಯಲ್ಲಿ ಬಿದ್ದ ತಮ್ಮ ಸ್ನೇಹಿತನನ್ನು ರಕ್ಷಿಸುವ ನೈಜ ಘಟನೆಯನ್ನು ಆಧರಿಸಿದ ಚಲನಚಿತ್ರವಾಗಿದೆ.

‘ಮಂಜುಮ್ಮೆಲ್ ಬಾಯ್ಸ್’ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ರೂ.ಗಳನ್ನು ಗಳಿಸಿದೆ.

ಹಿಂದಿನ ಲೇಖನಮೇ.26 ರಿಂದ ಒಟಿಟಿಗೆ ಲಗ್ಗೆ ಇಡಲಿರುವ ʼಆಡುಜೀವಿತಂʼ
ಮುಂದಿನ ಲೇಖನನಿಗದಿತ ತೂಕಕ್ಕಿಂತಲೂ ಕಡಿಮೆ ಬಿಸ್ಕೆಟ್ ಮಾರಾಟ: ಬ್ರಿಟಾನಿಯಾಗೆ ₹60 ಸಾವಿರ ದಂಡ ವಿಧಿಸಿದ ಕೇರಳದ ಗ್ರಾಹಕ ವೇದಿಕೆ