ಮನೆ ಮನರಂಜನೆ ಮೇ.26 ರಿಂದ ಒಟಿಟಿಗೆ ಲಗ್ಗೆ ಇಡಲಿರುವ ʼಆಡುಜೀವಿತಂʼ

ಮೇ.26 ರಿಂದ ಒಟಿಟಿಗೆ ಲಗ್ಗೆ ಇಡಲಿರುವ ʼಆಡುಜೀವಿತಂʼ

0

ಕೊಚ್ಚಿ: ಪೃಥ್ವಿರಾಜ್‌ ಸುಕುಮಾರನ್‌ ಅಭಿನಯದ ʼಆಡುಜೀವಿತಂʼ ಈ ವರ್ಷ ಮಾಲಿವುಡ್‌ ನಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳಲ್ಲಿ ಒಂದು.

Join Our Whatsapp Group

ಬ್ಲೆಸ್ಸಿ ನಿರ್ದೇಶನದ ನೈಜ ಕಥಾಹಂದರದ ಈ ಸಿನಿಮಾ ಇದೇ ವರ್ಷದ ಮಾ.28 ರಂದು ರಿಲೀಸ್‌ ಆಗಿತ್ತು. ಕೇರಳ ಮಾತ್ರವಲ್ಲದೆ ಸಿನಿಮಾಕ್ಕೆ ಇತರೆ ಕಡೆಯಿಂದಲೂ ಪ್ರಶಂಸೆ ವ್ಯಕ್ತವಾಗಿತ್ತು. 60 ದಿನಗಳ ಕಾಲ ಥಿಯೇಟರ್‌ ಯಶಸ್ವಿಯಾಗಿ ಪ್ರದರ್ಶನ ಕಂಡ ಬಳಿಕ ಇದೀಗ ಓಟಿಟಿ ಸ್ಟ್ರೀಮಿಂಗ್‌ ಗೆ ರೆಡಿಯಾಗಿದೆ.

ನಜೀಬ್‌ ಹೆಸರಿನ ವ್ಯಕ್ತಿ ಸೌದಿ ಅರೇಬಿಯಾಗೆ ಕೆಲಸ ಅರಸಿ ಹೋಗುತ್ತಾರೆ. ಅಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಾರೆ. ಹಲವು ವರ್ಷಗಳ ತೊಂದರೆ ಬಳಿಕ ಅವರು ದೇಶಕ್ಕೆ  ಮರಳುವ ಕಥೆಯನ್ನು ಭಾವನಾತ್ಮಕವಾಗಿ ನೈಜ ರೀತಿಯಲ್ಲೇ ತೋರಿಸಲಾಗಿದೆ.

ಪೃಥ್ವಿರಾಜ್‌ ಅವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಬಾಕ್ಸ್‌ ಆಫೀಸ್‌ ನಲ್ಲಿ ಸಿನಿಮಾ 150 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿದೆ.

ಇದೀಗ ಓಟಿಟಿ ಇದೇ ಮೇ.26 ರಿಂದ ಸಿನಿಮಾ ಡಿಸ್ನಿ + ಹಾಟ್‌ ಸ್ಟಾರ್‌ ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ. ಮಲಯಾಳಂ, ತಮಿಳು, ಹಿಂದಿ, ತೆಲುಗು ಮತ್ತು ಕನ್ನಡದಲ್ಲಿ ಸಿನಿಮಾ ಸ್ಟ್ರೀಮ್‌ ಆಗಲಿದೆ ಎಂದು ʼಓಟಿಟಿ ಪ್ಲೇʼ ವರದಿ ಮಾಡಿದೆ.

ಆದರೆ ಅಧಿಕೃತವಾಗಿ ಸಿನಿಮಾ ತಂಡ ಇನ್ನಷ್ಟೇ ಈ ಬಗ್ಗೆ ಅಪ್ಡೇಟ್‌ ನೀಡಬೇಕಿದೆ. ಬಹುತೇಕ ಇದೇ ದಿನ ಸಿನಿಮಾ ಓಟಿಟಿಗೆ ಬರುವುದಾಗಿ ಹೇಳಲಾಗುತ್ತಿದೆ.

ಓಟಿಟಿಯಲ್ಲಿ ಸಿನಿಮಾದ ಅವಧಿ ಇನ್ನಷ್ಟು ಹೆಚ್ಚಾಗಿರಲಿದೆ ಎನ್ನಲಾಗಿದೆ. 3 ಗಂಟೆ 30 ನಿಮಿಷದ ಅವಧಿ ಇರಲಿದೆ ಎನ್ನಲಾಗಿದೆ.

ಪೃಥ್ವಿರಾಜ್‌ ಜೊತೆ ಸಿನಿಮಾದಲ್ಲಿ ಅಮಲಾ ಪೌಲ್, ಕೆಆರ್‌ ಗೋಕುಲ್‌ , ಜಿಮ್ಮಿ ಜೀನ್-ಲೂಯಿಸ್ ನಟಿಸಿದ್ದಾರೆ.

ಹಿಂದಿನ ಲೇಖನ”ನನ್ನ ತಾಳ್ಮೆ ಪರೀಕ್ಷೆ ಮಾಡಬೇಡ”. ಎಲ್ಲಿದ್ದರೂ ಬಾ: ಪ್ರಜ್ವಲ್ ಗೆ ಎಚ್.ಡಿ.ದೇವೇಗೌಡ ಎಚ್ಚರಿಕೆ
ಮುಂದಿನ ಲೇಖನ‘ಮಂಜುಮ್ಮೆಲ್ ಬಾಯ್ಸ್’ ಚಿತ್ರದ ನಿರ್ಮಾಪಕರಿಗೆ ಲೀಗಲ್ ನೋಟಿಸ್ ಕೊಟ್ಟ ಇಳಯರಾಜ