ಮನೆ ಆರೋಗ್ಯ ಮಹಿಳೆಯ ಗರ್ಭಕೋಶದಲ್ಲಿತ್ತು 9.4 ಕೆಜಿ ಗೆಡ್ಡೆ

ಮಹಿಳೆಯ ಗರ್ಭಕೋಶದಲ್ಲಿತ್ತು 9.4 ಕೆಜಿ ಗೆಡ್ಡೆ

0

ಮಾಗಡಿ: 70 ವರ್ಷದ ಮಹಿಳೆಯ ಗರ್ಭಕೋಶದಲ್ಲಿದ್ದ 9.4 ಕೆಜಿ ತೂಕದ ಗೆಡ್ಡೆಯನ್ನು ಮೈತ್ರಿ ಆಸ್ಪತ್ರೆ ವೈದ್ಯರು ಯಶಸ್ವಿ ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆದಿರುವ ಘಟನೆ ಮಾಗಡಿ ತಾಲ್ಲೂಕಿನ ತೂಬಿನಕೆರೆ ಗ್ರಾಮದಲ್ಲಿ ನಡೆದಿದೆ.

ಹೊಟ್ಟೆ ನೋವು ಎಂದು ಬುಧವಾರ ಆಸ್ಪತ್ರೆಗೆ ದಾಖಲಾದ ಮಹಿಳೆಯನ್ನು ವೈದ್ಯರು  ತಪಾಸಣೆ ಮಾಡಿದಾಗ ಗರ್ಭಕೋಶದ ಕಾಯಿಲೆ ಇರುವುದು ಪತ್ತೆಯಾಗಿತ್ತು. ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯ ತಜ್ಞ ವೈದ್ಯ ಡಾ.ಪ್ರಕಾಶ್‌ ಮತ್ತು ಡಾ.ನಾಗರಾಜು ಉಪಾಧ್ಯಾಯ ನೇತೃತ್ವದ ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮಾಡಿ ಗೆಡ್ಡೆ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸದ್ಯ ಮಹಿಳೆ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಹಿಂದಿನ ಲೇಖನಫೆ.7 ರಂದು ಸಿಎಂ ದೆಹಲಿಗೆ: ಬಿಜೆಪಿಯಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ
ಮುಂದಿನ ಲೇಖನಇಂದಿನ ನಿಮ್ಮ ದಿನ ಭವಿಷ್ಯ