ಮನೆ ಕ್ರೀಡೆ ಎಲ್ವಿರಾ ಬ್ರಿಟ್ಟೋ ನಿಧನಕ್ಕೆ ಕಂಬನಿ ಮಿಡಿದ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್

ಎಲ್ವಿರಾ ಬ್ರಿಟ್ಟೋ ನಿಧನಕ್ಕೆ ಕಂಬನಿ ಮಿಡಿದ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್

0

ಬೆಂಗಳೂರು(Bengaluru): ಮಂಗಳವಾರ ನಿಧನರಾದ ಅರವತ್ತರ ದಶಕದ ಮಹಿಳಾ ಹಾಕಿಯ(womens Hockey) ಚಾಂಪಿಯನ್‌(Champion) ಆಟಗಾರ್ತಿ ಎಲ್ವಿರಾ ಬ್ರಿಟ್ಟೊ(Elvira Britto) (81) ಅವರು ಕುರಿತು ಕಂಬನಿ ಮಿಡಿದಿರುವ ರಾಜ್ಯಸಭೆ(Rajyasabha) ಸದಸ್ಯ(Member) ಜೈರಾಮ್‌ ರಮೇಶ್‌(Jairam ramesh), ಭಾವುಕವಾಗಿ ಟ್ವೀಟ್‌(Tweet) ಮಾಡಿದ್ದಾರೆ.

‘1960ರಲ್ಲಿ, ಆಗಿನ ಮೈಸೂರು ರಾಜ್ಯವು, ಎಲ್ಲರ ಮನೆಮಾತಾಗಿದ್ದ ಶ್ರೇಷ್ಠ ಕ್ರಿಕೆಟ್‌ ಆಟಗಾರರನ್ನಷ್ಟೇ ಅಲ್ಲ, ಅತ್ಯುತ್ತಮ ಮಹಿಳಾ ಹಾಕಿ ತಂಡವನ್ನೂ ಹೊಂದಿತ್ತು. ಅದರಲ್ಲಿ ‘ಬ್ರಿಟ್ಟೊ ಸಹೋದರಿಯರು’ ಎಂಬ ಅದ್ಭುತ ಆಟಗಾರ್ತಿಯರು- ಎಲ್ವಿರಾ, ರೀಟಾ ಮತ್ತು ಮೇ ಇದ್ದರು. ಅವರು ಭಾರತದ ಪರವಾಗಿಯೂ ಆಡಿದ್ದಾರೆ. ಎಲ್ವಿರಾ ನಿಧನದಿಂದ ತುಂಬಾ ಹಚ್ಚಿಕೊಂಡಿದ್ದ ಹಿಂದಿನ ಹಲವಾರು ನೆನಪುಗಳು ಮರುಕಳಿಸಿದವು’ ಎಂದು ಟ್ವೀಟ್‌ ಮಾಡಿದ್ದಾರೆ.

1960ರಲ್ಲಿ, ಎಲ್ವಿರಾ ಬ್ರಿಟ್ಟೊ ಅವರು ಜಪಾನ್‌, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾದಲ್ಲಿ ಆಡಿದ್ದ ಭಾರತ ಮಹಿಳಾ ಹಾಕಿ ತಂಡದ ನಾಯಕಿಯಾಗಿದ್ದರು. ಅವರಿಗೆ ಇಬ್ಬರು ಸಹೋದರಿಯರಾದ ರೀಟಾ ಮತ್ತು ಮೇ ಇದ್ದಾರೆ. ಇವರಿಬ್ಬರೂ ಆಟಗಾರ್ತಿಯರಾಗಿದ್ದು, ‘ಬ್ರಿಟ್ಟೊ ಸಹೋದರಿಯರು’ ಎಂದೇ ಮೂವರೂ ಹಾಕಿ ಲೋಕದಲ್ಲಿ ಚಿರಪರಿಚಿತರಾಗಿದ್ದರು.

ಹಿಂದಿನ ಲೇಖನರಾಜಿ ಮೂಲಕ ಪೋಕ್ಸೋ ಪ್ರಕರಣ ಇತ್ಯರ್ಥ ಕೋರಿ ಅರ್ಜಿ ಸಲ್ಲಿಕೆ: ಪರಿಶೀಲನೆಗೆ ಮುಂದಾದ ಹೈಕೋರ್ಟ್
ಮುಂದಿನ ಲೇಖನವೈದ್ಯಕೀಯ ಕಾಲೇಜುಗಳಿಗೆ ಸಮಗ್ರ ಪಠ್ಯಕ್ರಮಕ್ಕಾಗಿ ಅರ್ಜಿ: ಕೇಂದ್ರದ ಪ್ರತಿಕ್ರಿಯೆ ಕೇಳಿದ ದೆಹಲಿ ಹೈಕೋರ್ಟ್