ಮನೆ ರಾಷ್ಟ್ರೀಯ ಅಲ್ಪಸಂಖ್ಯಾತ ಧಾರ್ಮಿಕ ಸಂಸ್ಥೆಯಲ್ಲಿ ಅಪ್ರಾಪ್ತೆ ಸಾವು: ತೀವ್ರಗೊಂಡ ತನಿಖೆ

ಅಲ್ಪಸಂಖ್ಯಾತ ಧಾರ್ಮಿಕ ಸಂಸ್ಥೆಯಲ್ಲಿ ಅಪ್ರಾಪ್ತೆ ಸಾವು: ತೀವ್ರಗೊಂಡ ತನಿಖೆ

0

ತಿರುವನಂತಪುರಂ: ಕೇರಳ ರಾಜಧಾನಿ ತಿರುವನಂತಪುರಂನಲ್ಲಿನ ಅಲ್ಪಸಂಖ್ಯಾತ ಧಾರ್ಮಿಕ ಸಂಸ್ಥೆಯಲ್ಲಿ ಅಪ್ರಾಪ್ತೆ ಸಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇರಳ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

Join Our Whatsapp Group

ಭೀಮಪಲ್ಲಿ ಮೂಲದ 17 ವರ್ಷದ ಬಾಲಕಿ ಶನಿವಾರ ಬಲರಾಮಪುರಂನಲ್ಲಿರುವ ಮುಸ್ಲಿಂ ಧಾರ್ಮಿಕ ಸಂಸ್ಥೆಯ ಗ್ರಂಥಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳು ಎಂದು ಪೊಲೀಸರು ತಿಳಿಸಿದ್ದಾರೆ.

ಅನುಮಾನಾಸ್ಪದ ಸಾವು ಎಂದು ಆರೋಪಿಸಿ ಬಾಲಕಿಯ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಸಿಆರ್’ಪಿಸಿಯ ಸೆಕ್ಷನ್ 174 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಸ್ಥೆಯಲ್ಲಿ ತಾನು ಎದುರಿಸುತ್ತಿರುವ ಮಾನಸಿಕ ಕಿರುಕುಳದ ಬಗ್ಗೆ ಬಾಲಕಿ ಈ ಹಿಂದೆ ತನ್ನ ಕುಟುಂಬಕ್ಕೆ ದೂರು ನೀಡಿದ್ದಳು. ಶನಿವಾರ, ಅವಳು ತನ್ನ ತಾಯಿಗೆ ಕರೆ ಮಾಡಿ ತನ್ನನ್ನು ಕರೆದುಕೊಂಡು ಹೋಗುವಂತೆ ಹೇಳಿದ್ದಳು. ಆದರೆ ಮಾರನೇಯ ದಿನವೇ ಆಕೆ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಹಿಂದಿನ ಲೇಖನಸೋಮಕ-ಜಂತು
ಮುಂದಿನ ಲೇಖನಬಿ.ವೈ.ವಿಜಯೇಂದ್ರ ಗೆಲ್ಲದಂತೆ ಕಾಡು ಪ್ರಾಣಿ ಕೊಂದು ವಾಮಾಚಾರ: ದೂರು ದಾಖಲು