ಮನೆ ಆರೋಗ್ಯ ಮನಃಸ್ಥಿತಿ (ಮೂಡ್ಸ್) ಪ್ರಭಾವ

ಮನಃಸ್ಥಿತಿ (ಮೂಡ್ಸ್) ಪ್ರಭಾವ

0

 *  ರೋಗ ನಿರೋಧಕ ವ್ಯವಸ್ಥೆಯ ಮೇಲೆ ನಮ್ಮ ಮನಃಪರಿಸ್ಥಿತಿಯೂ ಪರಿಣಾಮ ಬೀರುತ್ತದೆ.

* ಸದಾ ಕೋಪಗೊಳ್ಳುವವರು, ತಾವೇ ಪ್ರಮುಖ್ಯಾವೆಂದು ಭಾವಿಸುವರು, (self centred) ಪದೇ ಪದೇ ಜ್ವರ ನೆಗಡಿಗಳಿಂದ ಬಳಲುತ್ತಾರೆ.

* ಸದಾ ಆನಂದ ಆನಂದವಾಗಿರುವವ̧ರು ಎಲ್ಲವನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುವವರು, ಯಾವ ವಿಷಯವನ್ನು ಗಂಭೀರವಾಗಿ ಪರಿಗಣಿಸಿದವರು, ಆರೋಗ್ಯವಂತರಾಗಿರುತ್ತಾರೆ.

* ಹಾಗೆ ಖಿನ್ನತೆ, ಕೀಳರಿಮೆಯಿಂದ ಬಳಲುವವರು ಹೃದ್ರೋಗದಿಂದ ನರಳುತ್ತಾರೆ.

* ಮನದ ಭಾವನೆಗಳನ್ನ ಹತ್ತಿಕ್ಕಿ, ಹೊರಗೆ ಪ್ರಶಾಂತತೆಯ ಮುಖವಾಡ ಹಾಕಿಕೊಂಡವರು. ಕ್ಯಾನ್ಸರ್ ನಂತಹ ರೋಗಕ್ಕೆ ಒಳಗಾಗುವ ಅವಕಾಶವಿರುತ್ತದೆ.

ರಿಲ್ಯಾಕ್ಸೇಶನ್ (ಸಮಾಧಾನ ಚಿತ್ತತೆ) :-

*  ಮಾನಸಿಕ ಒತ್ತಡ (stress)ವನ್ನು ಹತ್ತಿಕ್ಕಲು ವ್ಯಾಯಾಮ, ಯೋಗ ಮಾಡುವುದು ಒಂದು ವಿಧವಾದರೆ, ಮನಸ್ಸನ್ನು ಶಾಂತವಾಗಿ ಇರಿಸಿಕೊಳ್ಳಲು ರಿಲ್ಯಾಕ್ಸೇಷನ್ ಪದ್ಧತಿ ಮತ್ತೊಂದು ವಿಧ.

* ರಿಲ್ಯಾಕ್ಸೇಶನ್ ಮುಖ್ಯವಾಗಿ ಭಾವನಾತೀತ ಯೋಗ (transcendental meditation)ರೋಗವನ್ನು ಎದುರಿಸುವ ಮನಃಶಕ್ತಿಯನ್ನು ಕೊಡುತ್ತದೆ. ಉಬ್ಬಸ, ಡಯಾಬಿಟಿಸ್, Angina,  ಅಲರ್ಜಿಗಳಿಂದ ನಮ್ಮನ್ನ ರಕ್ಷಿಸುತ್ತದೆ.

* ಧ್ಯಾನ ಮಾಡದಿದ್ದರೂ ಟಿ.ವಿಯಲ್ಲಿ ಬರುವ ಹಾಸ್ಯ ಸನ್ನೀವೇಶಗಳನ್ನು, ಸಿನಿಮಾಗಳನ್ನು ನೋಡುವುದು, ನಗುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

* ರೋಗದಿಂದ ಬಿಡುಗಡೆಯಾಗಲು ನಗು ಬಹಳ ಸಹಾಯ ಮಾಡುತ್ತದೆಂದು ಸಂಶೋಧನೆಗಳು ತಿಳಿಸುತ್ತದೆ.

ನಿರಾಶವಾದಿಗಳಿಗಿಂತ ಆಶಾವಾದಿಗಳು (Optimists) ಸರ್ಜರಿಯಂತಹ ಗಂಭೀರ ಸ್ಥಿತಿಯಿಂದ ಬೇಗ ಗುಣಮುಖರಾಗುತ್ತಾರೆಂದು ಡಾಕ್ಟರ್ಗಳ ಹೇಳಿಕೆ. ರೋಗಿಯು ನಗಲು ಆರಂಭಿಸಿದ ತಕ್ಷಣ ಅವರು ಚೇತರಿಸಿಕೊಳ್ಳುತ್ತಿದ್ದಾನೆಂದು, ಸೈಕೋಥೆರಪಿಸ್ಟ್ ಗಳು ಅರ್ಥ ಮಾಡಿಕೊಳ್ಳುತ್ತಾರೆ.

*  ಮಾನಸಿಕ ಒತ್ತಡಕ್ಕೆ ಸಿಕ್ಕ ಮನುಷ್ಯನ ಜೀವನ ಶೈಲಿಯಲ್ಲಿ ಬದಲಾವಣೆಗಳಾಗುವುದು. ಕ್ರಮಬದ್ಧತೆ ತಪ್ಪುವುದು, ಮುಂತಾದವು ಆಗುತ್ತದೆ. ಅಂತಹವರು ವ್ಯಾಯಾಮ ಮಾಡುವುದನ್ನ ನಿಲ್ಲಿಸಿ, ಸ್ನೇಹಿತರಿಂದ ಕುಟುಂಬದವರಿಂದ ಮಾನಸಿಕವಾಗಿ ದೂರವಿರಲು ಪ್ರಯತ್ನಿಸುತ್ತಾರೆ. ಮನಸು ಬಿಚ್ಚಿ ಮಾತಾಡರು, ಹರಟೆಯನ್ನು ಸಂಪೂರ್ಣವಾಗಿ ನಿಲ್ಲಿಸಿ ಬಿಡುತ್ತಾರೆ. ಕಾಫಿ, ಟೀ, ಸಿಗರೇಟು, ಮಾದಕ ದ್ರವ್ಯಗಳನ್ನು ಅವರನ್ನ ಸಮೀಪಿಸುತ್ತಾವೆ. ಈ ಎಲ್ಲವೂ ರೋಗ ನಿರೋಧಕ ಶಕ್ತಿಯನ್ನು ಬಲಹೀನಗೊಳಿಸುತ್ತದೆ.

ಪೌಷ್ಟಿಕ ಆಹಾರ :-

ಕಾಯಿಲೆ ಬಾರದಿರಲು, ಅಂದರೆ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸಲು ಶಕ್ತಿಯುತ ಆಯುಧವೆಂದರೆ, ಸರಿಯಾದ ಪೌಷ್ಟಿಕ ಆಹಾರ ಸೇವನೆ.

* ಅಪೌಷ್ಟಿಕ ಆಹಾರದಿಂದ ಹಲವಾರು ರೋಗಗಳು ಪೀಡಿಸಬಹುದು. ಹೃದ್ರೋಗ, ಲಕ್ವ, ಬ್ರೆಸ್ಟ್ ಕ್ಯಾನ್ಸರ್, ದಂತಕ್ಷಯ, ಡಯಾಬಿಟಿಸ್, ಮಲಬದ್ಧತೆ ಮುಂತಾದವು.

ಹಾಗಾದರೆ ಪೌಷ್ಟಿಕ ಆಹಾರ ತೆಗೆದುಕೊಂಡರೆ ರೋಗನಿರೋಧಕ ವ್ಯವಸ್ಥೆ ಬಲವಾಗುತ್ತದೆಯೇ?:-

ಪೌಷ್ಟಿಕ ಆಹಾರದ ಲೋಪವಿದ್ದಲ್ಲಿ, ರೋಗನಿರೋಧಕ ಶಕ್ತಿ ಕುಂದುವುದು ಖಂಡಿತ.

ಕ್ರಮವಾಗಿ ಪ್ರೊಟೀನ್ ಯುಕ್ತ ಆಹಾರ ಸೇವನೆ ಅವಶ್ಯಕವೇ ಹೊರತು, ಅದರೊಂದಿಗೆ ವಿಟಮಿನ್ ಗಳು, ಮಿನರಲ್ ಗಳನ್ನು ಜೊತೆಗೆ ಸೇವಿಸುವುದು ರೋಗನಿರೋಧಕ ಶಕ್ತಿ ಹೆಚ್ಚುತ್ತದೆನ್ನುವ ಅಂಶ ʼಸಂದೇಹಾಸ್ಪದʼ ಎನ್ನುತ್ತಾರೆ. ಆಕ್ಸ್ ಫರ್ಡಿನ ಜಾನ್ ರ್ಯಾಡ್ ಕ್ಲಫ್ ಹಾಸ್ಪಿಟಲ್ ನ ಕನ್ಸಲ್ಟೆಂಟ್ ಇಮ್ಯುನಾಲಜಿಸ್ಟ್ ಡಾಕ್ಟರ್ ಗ್ರಹಾಂ ಬರ್ಡ್.

ಹೃದ್ರೋಗಗಳು, ಕ್ಯಾನ್ಸರ್ ರಿಂದ ನಮ್ಮನ್ನು ಕಾಪಾಡಿಕೊಳ್ಳಲು Antioxidant ವಿಟಮಿನ್ ಗಳಾದ ʼCʼ, ʼEʼ Beta Carotene ಮುಂತಾದವುಗಳನ್ನು ಸೇವಿಸುವುದು ಬಹಳ ಮುಖ್ಯವೆಂದು ಎಲ್ಲರೂ ಒಪ್ಪುತ್ತಾರೆ.

ಬಲವಾದ ರೋಗನಿರೋಧಕ ವ್ಯವಸ್ಥೆಗೆ ಕೆಲವು ಖನಿಜ ಲವಣಗಳು ಕೂಡ ಅತ್ಯವಶ್ಯಕ.