ಮನೆ ರಾಜ್ಯ ಅಂತಾರಾಷ್ಟ್ರೀಯ ಹುಲಿ ದಿನಾಚರಣೆ:  ಮರದಲ್ಲಿ ಹುಲಿ ಚಿತ್ರ ಬಿಡಿಸಿದ ಕಲಾವಿದ

ಅಂತಾರಾಷ್ಟ್ರೀಯ ಹುಲಿ ದಿನಾಚರಣೆ:  ಮರದಲ್ಲಿ ಹುಲಿ ಚಿತ್ರ ಬಿಡಿಸಿದ ಕಲಾವಿದ

0

ಮೈಸೂರು(Mysuru): ಅಂತಾರಾಷ್ಟ್ರೀಯ ಹುಲಿ ದಿನಾಚರಣೆ ಅಂಗವಾಗಿ ಮರದಲ್ಲಿ ಹುಲಿ ಚಿತ್ರ ಬಿಡಿಸುವ ಮೂಲಕ ಸಾರ್ವಜನಿಕರು ಹಾಗೂ ಪ್ರವಾಸಿಗರ ಗಮನ ಸೆಳೆಯುತ್ತಾರೆ.

ಕಲಾವಿದ ಅನಿಲ್ ಭೋಗಶೆಟ್ಟಿ ಶುಕ್ರವಾರ ಮೈಸೂರು ಮೃಗಾಲಯದ ಮುಂಭಾಗದ ಮರದಲ್ಲಿ ಹುಲಿ ಚಿತ್ರವನ್ನು ಬಿಡಿಸಿ ಪ್ರಾಣಿಪ್ರೇಮ ಮೆರೆದಿದ್ದಾರೆ.

ರಾಷ್ಟ್ರ ಪ್ರಾಣಿಯ ಚಿತ್ರ ನೋಡುಗರನ್ನ ಆಕರ್ಷಿಸುತ್ತಿದೆ. ಮರದ ಮೇಲೆ ವಿಶೇಷ ಪೇಂಟಿಂಗ್ ಮೂಲಕ ಹುಲಿಯ ಚಿತ್ರವನ್ನು ಬಿಡಿಸಿದ್ದಾರೆ.

ಮೃಗಾಲಯಕ್ಕೆ ಆಗಮಿಸಿದ್ದ ಪ್ರವಾಸಿಗರು ಅನಿಲ್ ಚಿತ್ರಿಸಿರುವ ಹುಲಿ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಹುಲಿ ಚಿತ್ರದ ಜೊತೆಗೆ ಫೋಟೋ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ.

ಹುಲಿ ಸಂರಕ್ಷಣೆ ಮನುಷ್ಯನಿಗೆ ಯಾವ ರೀತಿಯಲ್ಲಿ ಅನುಕೂಲವಾಗತ್ತೆ ಅನ್ನೋದನ್ನ ಸಾಂಕೇತಿಕವಾಗಿ ಈ ಚಿತ್ರ ಸಾರಿ ಹೇಳುತ್ತಿದೆ.

ಹುಲಿಗಳ ಸಂತತಿ ಇಳಿಕೆಯಾಗುತ್ತಿದ್ದಂತೆ ಇವುಗಳ ರಕ್ಷಣೆಗಾಗಿ ವಿವಿಧ ದೇಶಗಳು ಸೇರಿ 2010ರಿಂದ ಪ್ರತಿವರ್ಷ ಜು.29ರಂದು ‘ಅಂತಾರಾಷ್ಟ್ರೀಯ ಹುಲಿ ದಿನ’ ಆಚರಿಸಲು ನಿರ್ಧರಿಸಿತು. ಬೆಕ್ಕಿನ ಜಾತಿಯ ಅತ್ಯಂತ ದೊಡ್ಡ ಪ್ರಾಣಿಗಳಲ್ಲಿ ಹುಲಿ ಅತ್ಯಂತ ಪ್ರಮುಖ ಪ್ರಾಣಿಯಾಗಿದೆ.

ಹುಲಿಯನ್ನು ಸಂರಕ್ಷಣೆ ಮಾಡುವುದೆಂದರೆ ಒಂದು ಕಾಡನ್ನೇ ರಕ್ಷಣೆ ಮಾಡಿದಂತೆ. ಏಕೆಂದರೆ ಹುಲಿ ಸಂರಕ್ಷಿತವಾದರೆ ಕಾಡು ಸಮೃದ್ಧವಾಗಲಿದೆ. ಕಾಡಿನಲ್ಲಿರುವ ಸಸ್ಯಹಾರಿ ಪ್ರಾಣಿಗಳನ್ನು ನಿಯಂತ್ರಿಸಿ ಇಡೀ ಕಾಡನ್ನು ಸಮತೋಲನದಲ್ಲಿ ಇಟ್ಟುಕೊಳ್ಳಲು ಹುಲಿಗಳು ಸಹಾಯಕಾರಿ ಅನ್ನೋ ಅಂಶ ಈಗಾಗಲೇ ಸಂಶೋಧಕರಿಂದ ದೃಢಪಟ್ಟಿದೆ.