ಐಪಿಎಲ್ : 2026ರ ಐಪಿಎಲ್ ನಡುವಿಯೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕಠಿಣ ಕಾನೂನು ಜಾರಿಗೆ ತರಲು ಮುಂದಾಗಿದೆ ಎನ್ನಬಹುದು. ಐಪಿಎಲ್ನಲ್ಲಿ “ಗರ್ಲ್ಫ್ರೆಂಡ್ ಸಂಸ್ಕೃತಿ”ಗೆ ಕಡಿವಾಣ ಹಾಕುವು ಬಗ್ಗೆ ಚಿಂತನೆ ನಡೆಸುತ್ತಿದೆ. ಗರ್ಲ್ಫ್ರೆಂಡ್ ಸಂಸ್ಕೃತಿ ಬಗ್ಗೆ ಮಂಡಳಿಯು ಹೆಚ್ಚು ಅಸಮಾಧಾನ ಹೊರಹಾಕ್ಕಿದೆ ಎಂದು ತಿಳಿದುಬಂದಿದೆ ಎನ್ನಲಾಗಿದೆ.
ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ, ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್ ಮತ್ತು ಅರ್ಶ್ದೀಪ್ ಸಿಂಗ್ ಅವರಂತಹ ಸ್ಟಾರ್ ಆಟಗಾರರು ತಮ್ಮ ಗೆಳತಿಯರೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು, ತಂಡದ ಬಸ್ಗಳಲ್ಲಿ ಒಟ್ಟಿಗೆ ಪ್ರಯಾಣಿಸುವುದು ಮತ್ತು ತಂಡದ ಹೋಟೆಲ್ಗಳಲ್ಲಿ ತಂಗುವುದು ಈಗ ತೀವ್ರ ಚರ್ಚೆಯ ವಿಷಯವಾಗಿದೆ ತಿಳಿದುಬಂದಿದೆ.
ಈ ಪ್ರವೃತ್ತಿಯನ್ನು ನಿಯಂತ್ರಿಸದಿದ್ದರೆ ಭವಿಷ್ಯದಲ್ಲಿ ದೊಡ್ಡ ಸಮಸ್ಯಗಳಿಗೆ ಕಾರಣವಾಗಬಹುದು ಎಂಬ ಭಯದಿಂದ, ಬಿಸಿಸಿಐ ಇದನ್ನು ತಡೆಯಲು ಹೊಸ ನಿಯಮಗಳನ್ನು ಜಾರಿಗೆ ತರುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎನ್ನಲಾಗುತ್ತಿದೆ. ಮಂಡಳಿಯ ಕಳವಳಕ್ಕೆ ಪ್ರಾಮುಖ ಕಾರಣವೆಂದರೇ ಆಟಗಾರರೊಂದಿಗೆ ಇರುವ ಗೆಳತಿಯರಲ್ಲಿ ಅನೇಕರು ಸಾಮಾಜಿಕ ಮಾಧ್ಯಮ ಪ್ರಭಾವಿಗಳಾಗಿದ್ದು ಇವರಲ್ಲಿ ಕೆಲವರು ಈ ಹಿಂದೆ ಬೆಟ್ಟಿಂಗ್ ಅಪ್ಲಿಕೇಶನ್ಗಳ ಬಗ್ಗೆ ಪ್ರಚಾರ ಮಾಡಿದ ನಿದರ್ಶನಗಳು ಇವೆ. ಅಲ್ಲದೇ ಗೌಪ್ಯವಾದ ಮತ್ತು ತಂಡಕ್ಕೆ ಸಂಬಂಧಿತ ಮಾಹಿತಿಯು ಸಾರ್ವಜನಿಕ ವಲಯಕ್ಕೆ ಸೋರಿಕೆಯಾಗುವ ಅಪಾಯವಿದೆ ಎಂದು ಬಿಸಿಸಿಐ ಆತಂಕ ವ್ಯಕ್ತಪಡಿಸಿದೆ ಎನ್ನಲಾಗುತ್ತಿದೆ.
ಇದರ ಈ ಸಂಸ್ಕೃತಿಯು ಆಟದ ಸಮಗ್ರತೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ಮಂಡಳಿ ನಂಬುತ್ತದೆ. ಆಟಗಾರರು ಮತ್ತು ಅವರ ಮಹಿಳಾ ಸಹಚರರ ನಡುವಿನ ವಿವಾದಗಳನ್ನು ಒಳಗೊಂಡ ಹಿಂದಿನ ಘಟನೆಗಳು ಅವುಗಳಲ್ಲಿ ಕೆಲವು ಪೊಲೀಸ್ ಠಾಣೆಯವರೆಗೂ ತಲುಪಿರುವಂತಹ ಸಂದರ್ಭಗಳಿರುವ ಕಾರಣ ಇಂತಹ ಘಟನೆಗಳು ಲೀಗ್ನ ಖ್ಯಾತಿಗೆ ಕಳಂಕ ತರುವುದಲ್ಲದೇ ಮಂಡಳಿಯ ಪ್ರತಿಷ್ಠೆಯನ್ನು ಹಾಳು ಮಾಡಲಿವೆ ಎಂದು ಬಿಸಿಸಿಐ ಆತಂಕ ವ್ಯಕ್ತಪಡಿಸಿದೆ. ಈ ಕಾರಣದಿಂದಾಗಿ ನಿಯಮಗಳನ್ನು ಬಿಗಿಗೊಳಿಸುವುದು ಸಂಪೂರ್ಣ ಅಗತ್ಯ ಎಂದು ಮಂಡಳಿ ತೀರ್ಮಾನಿಸಿದೆ. ಈ ವಿಷಯಕ್ಕೆ ಪ್ರತಿಕ್ರಿಯಿಸಿದ ಬಿಸಿಸಿಐನ ಉನ್ನತ ಅಧಿಕಾರಿಯೊಬ್ಬರು, ಅತ್ಯಂತ ಆಘಾತಕಾರಿ ವಿಷಯವೆಂದರೆ ತಂಡದ ಬಸ್ಗಳು ಸಹ ಗೆಳತಿಯರಿಗಾಗಿ ಆಗಾಗ್ಗೆ ಕಾಯಬೇಕಾದ ಸಂದರ್ಭಗಳು ಬಂದಿವೆ. ಮತ್ತು ಆಟಗಾರರ ಜೊತೆಗೆ ಒಂದೇ ಹೋಟೆಲ್ಗಳಲ್ಲಿ ಉಳಿಯುವುದು ಸಹ ಸೂಕ್ತವಲ್ಲ ಎಂದಿದ್ದಾರೆ ಎನ್ನಲಾಗಿದೆ.
ಗರ್ಲ್ ಫ್ರೆಂಡ್ನ ಸಂಸ್ಕೃತಿ ಬಿಸಿಸಿಐ ನೀತಿಯಲ್ಲಿ ಎಲ್ಲಿಯೂ ಅಸ್ತಿತ್ವದಲ್ಲಿಲ್ಲ. ಮಾರ್ಗಸೂಚಿಗಳ ಪ್ರಕಾರ – ಪತ್ನಿಯರು ಮತ್ತು ಕುಟುಂಬ ಸದಸ್ಯರಿಗೆ ಮಾತ್ರ ಜೊತೆಯಲ್ಲಿರಲು, ತಿರುಗಲು ಅನುಮತಿ ನೀಡಲಾಗುತ್ತದೆ ಎಂದು ಒತ್ತಿ ಹೇಳಿದ್ದಾರೆ ಎಂದು ವರದಿಗಳಿವೆ ಎನ್ನಲಾಗಿದೆ. ಮುಂಬರುವ ಸಭೆಯಲ್ಲಿ ಈ ವಿಷಯದ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವ ಸಾಧ್ಯತೆಗಳಿವೆ. ಐಪಿಎಲ್ ಫ್ರಾಂಚೈಸಿಗಳು ಖಾಸಗಿ ಒಡೆತನದಲ್ಲಿದ್ದರೂ, ಬಿಸಿಸಿಐ ಇದನ್ನು ಕೇಂದ್ರ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಎಲ್ಲಾ ತಂಡಗಳಿಗೆ ಅನ್ವಯಿಸುವಂತೆ ಮಾಡಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ಇದಲ್ಲದೆ, ಈ ನಿಯಮಗಳು ಐಪಿಎಲ್ಗೆ ಮಾತ್ರವಲ್ಲದೆ ಭಾರತೀಯ ರಾಷ್ಟ್ರೀಯ ತಂಡವು ವಿದೇಶ ಪ್ರವಾಸಗಳನ್ನು ಕೈಗೊಂಡಾಗಲೂ ಅನ್ವಯಿಸುತ್ತವೆ ಎಂದು ಮೂಲಗಳಿಂದ ತಿಳಿದುಬಂದಿದೆ ಎನ್ನಲಾಗುತ್ತಿದೆ.














