ಮನೆ ರಾಷ್ಟ್ರೀಯ ಬಾರಾಮತಿ ವಿಧಾನಸಭಾ ಉಪಚುನಾವಣೆಯಲ್ಲಿ ಸುನೇತ್ರಾ ಪವಾರ್‌ಗೆ ಗೆಲುವು..!

ಬಾರಾಮತಿ ವಿಧಾನಸಭಾ ಉಪಚುನಾವಣೆಯಲ್ಲಿ ಸುನೇತ್ರಾ ಪವಾರ್‌ಗೆ ಗೆಲುವು..!

0

ಮುಂಬೈ : ಬಾರಾಮತಿ ವಿಧಾನಸಭಾ ಉಪಚುನಾವಣೆಯಲ್ಲಿ ದಿವಂಗತ ಅಜಿತ್‌ ಪವಾರ್‌ ಅವರ ಪತ್ನಿ ಸುನೇತ್ರಾ ಪವಾರ್‌ ಐತಿಹಾಸಿಕ ಗೆಲುವಿನತ್ತ ದಾಪುಗಾಲಿಟ್ಟಿದ್ದಾರೆ. 24 ಸುತ್ತುಗಳ ಎಣಿಕೆಯಲ್ಲಿ 15 ಸುತ್ತುಗಳಲ್ಲೇ 1.32 ಲಕ್ಷಕ್ಕೂ ಹೆಚ್ಚು ಮತಗಳಿಂದ ಪವಾರ್‌ ಪತ್ನಿ ಮುನ್ನಡೆ ಸಾಧಿಸಿದ್ದಾರೆ. ಅಜಿತ್ ಪವಾರ್ ನಂತರ ಇದು ಮೊದಲ ಚುನಾವಣೆಯಾಗಿದೆ.

ಈ ಚುನಾವಣೆಯಲ್ಲಿ ಸ್ಪರ್ಧಿಸಬೇಕಾಗುತ್ತದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ಬಾರಾಮತಿಯ ಜನರ ಮತಗಳು ಅಜಿತ್ ದಾದಾ ಅವರಿಗೆ ನಿಜವಾದ ಗೌರವ. ಎಲ್ಲರಿಗೂ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇನೆಂದು ಸುನೇತ್ರಾ ಪವಾರ್‌ ಪ್ರತಿಕ್ರಿಯಿಸಿದ್ದಾರೆ. ನಾನು ನನ್ನ ಜನರಿಗೆ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತೇನೆ. ಅಭಿವೃದ್ಧಿ ಕಾರ್ಯಗಳ ಮೂಲಕ ಅಜಿತ್ ಪವಾರ್ ಅವರ ಕನಸುಗಳನ್ನು ನನಸಾಗಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದಾರೆ.

ಜನವರಿ 28 ರಂದು ಪುಣೆ ಜಿಲ್ಲೆಯ ಬಾರಾಮತಿ ಬಳಿ ವಿಮಾನ ಅಪಘಾತದಲ್ಲಿ ಆಗಿನ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಮತ್ತು ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಸಾವಿಗೀಡಾದರು. ಅವರಿಂದ ತೆರವಾದ ಸ್ಥಾನಕ್ಕೆ ಪತ್ನಿ ಸುನೇತ್ರಾ ಅವರನ್ನೇ ಕಣಕ್ಕಿಳಿಸಲಾಗಿತ್ತು. ಪವಾರ್ ಕುಟುಂಬದ ಭದ್ರಕೋಟೆಯಾಗಿರುವ ಈ ಸ್ಥಾನದಿಂದ ಎನ್‌ಸಿಪಿ ಅವರ ಪತ್ನಿ ಸುನೇತ್ರಾ ಸ್ಪರ್ಧಿಸಿದ್ದರು. ಏ.23 ರಂದು ಬಾರಾಮತಿ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು.

ಬಾರಾಮತಿ ನನ್ನ ಕುಟುಂಬ. ಶರದ್ ಪವಾರ್ ಅವರು ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು ಘೋಷಿಸಿದ್ದರು. ಇದು ನನ್ನ ಕುಟುಂಬದಿಂದ ನನಗೆ ಸಿಕ್ಕ ಬೆಂಬಲ. ಪವಾರ್ ಕುಟುಂಬ ಈ ಕ್ಷೇತ್ರದ ಮೇಲೆ ಇಟ್ಟಿರುವ ನಂಬಿಕೆ ಮತ್ತು ಸೇವೆಯನ್ನು ಮುಂದುವರಿಸುತ್ತೇನೆ ಎಂದು ತಿಳಿಸಿದ್ದಾರೆ. ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ ಬಿಜೆಪಿಗೆ ಸುನೇತ್ರಾ ಪವಾರ್‌ ಅಭಿನಂದನೆ ಸಲ್ಲಿಸಿದ್ದಾರೆ.