ಬೆಂಗಳೂರು : ನಾನು ಸತೀಶ್ ಜಾರಕಿಹೊಳಿ ಭೇಟಿಯಾಗಿ ಮಾತಾಡಿದ್ದು ನಿಜ. ರಾಜಕಾರಣದಲ್ಲಿ ಬಾಂಧವ್ಯ, ನೆಂಟಸ್ತನ, ಸ್ನೇಹ ಎಲ್ಲ ಇದ್ದೇ ಇರುತ್ತದೆ ಅಂತ ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಸತೀಶ್ ಭೇಟಿ ಆಗಿದ್ದು ನಿಜ. ನಾವಿಬ್ಬರು ಕೊಲೀಗ್‌ಗಳು. ಕ್ಯಾಬಿನೆಟ್‌ನಲ್ಲಿ ಇರ್ತೀವಿ, ರಾತ್ರಿ ಊಟಕ್ಕೆ ಸೇರ್ತೀವಿ, ಬೆಳಗ್ಗೆ ತಿಂಡಿಗೆ ಸೇರ್ತೀವಿ ಇವೆಲ್ಲ ಇದ್ದೇ ಇರುತ್ತದೆ. ನಾನು ಎಂಬಿ ಪಾಟೀಲ್ ಒಂದು ಗಂಟೆ ರಾಜ್ಯಕ್ಕೆ ಹೇಗೆ ಇನ್ವೆಸ್ಟರ್ ಕರೆಯಬೇಕು ಅಂತ ಚರ್ಚೆ ಮಾಡಿದ್ದೇವೆ.
ಆಂಧ್ರ ಪ್ರದೇಶದ ನಮಗೆ ಕಾಂಪಿಟೇಷನ್ ಬರ್ತಿದೆ. ತಮಿಳುನಾಡು, ತೆಲಂಗಾಣ ಕಾಂಪಿಂಟ್ ಮಾಡ್ತಿದೆ. ನಾವು ಹೇಗೆ ಕಾಂಪಿಟ್ ಮಾಡಬೇಕು ಅಂತ ಚರ್ಚೆ ಮಾಡಿದ್ದೇವೆ. ಅದೇ ರೀತಿ ಸತೀಶ್ ಜಾರಕಿಹೊಳಿ ಭೇಟಿಯಾಗಿ ಮಾತಾಡಿದ್ದೇನೆ ಎಂದರು. ನಾನು ಸತೀಶ್ ರಾತ್ರಿ ಸೇರಿದ್ದು ನಿಜ. ಯಾವುದೋ ಮದುವೆಯಲ್ಲಿ ಸೇರಿಕೊಂಡು ರಾಜ್ಯದ, ಪಕ್ಷದ ವಿಚಾರ ಮಾತಾಡಿಕೊಂಡಿದ್ದೇವೆ. ನಾವೆಲ್ಲ ಕೊಲೀಗ್‌ಗಳು. ನಾವು ವೈರಿಗಳ ತರಹ ಲೆಕ್ಕ ಹಾಕ್ತಾ ಇದ್ದೀರಾ ನೀವು? ಏನ್ ಕುತೂಹಲ ಇಲ್ಲ. ರಾಜಕಾರಣದಲ್ಲಿ ಬಾಂಧವ್ಯ, ನೆಂಟಸ್ತನ, ಸ್ನೇಹ ಎಲ್ಲಾ ಇದ್ದೇ ಇರುತ್ತದೆ ಅಂತ ಮಾರ್ಮಿಕವಾಗಿ ನುಡಿದರು.
ಯಾವ ಸರ್ಕಾರದ ಕಮಿಷನ್ ಬಗ್ಗೆ ಉಪ ಲೋಕಾಯುಕ್ತರು ಮಾತಾಡಿದ್ದಾರೆ ಎಂಬುದನ್ನು ವಿಪಕ್ಷ ನಾಯಕ ಅಶೋಕ್ ಮೊದಲು ತಿಳಿದುಕೊಳ್ಳಲಿ. ಉಪ ಲೋಕಾಯುಕ್ತ ಮಾತಾಡಿದ್ದು ಯಾವ ಕಾಲದ್ದು ಅಂತ ಅಶೋಕ್‌ಗೆ ಗೊತ್ತಿಲ್ಲ. ಮೊದಲು ಅಶೋಕ್ ಯಾವ ಕಾಲದ್ದು ರಿಪೋರ್ಟ್ ಯಾವಾಗ ಕೊಟ್ಟಿದ್ದು ಅಂತ ಓದಿಕೊಳ್ಳಲಿ. ಆಮೇಲೆ ನಾನು ಮಾತಾಡ್ತೀನಿ ಅಂತ ತಿರುಗೇಟು ಕೊಟ್ಟರು.
ದೆಹಲಿಗೆ ಸರ್ವ ಪಕ್ಷ ನಿಯೋಗ ಕರೆದುಕೊಂಡು ಹೋಗೋಕೆ ದಿನಾಂಕ ನಿಗದಿ ಆಗಿಲ್ಲ. ಕೇಂದ್ರ ಸಚಿವರು ಬ್ಯುಸಿ ಅಂತ ಹೇಳಿದ್ದಕ್ಕೆ 8ನೇ ತಾರೀಖಿನ ಸಭೆ ಮುಂದಕ್ಕೆ ಹಾಕಿದ್ದೇವೆ. ನಿರ್ಮಲಾ ಸೀತಾರಾಮನ್‌ಗೆ ಬಿಲ್ ಇದೆ ಅವತ್ತು. ಜೋಷಿ ಅವರು ಪಿಎಂ ರಿವ್ಯೂ ಇಟ್ಟುಕೊಂಡಿದ್ದಾರೆ ಅಂತೆ. ಸೋಮಣ್ಣ ಆಗಲ್ಲ ಅಂತ ಬರೆದಿದ್ದರು. ಇಬ್ಬರಿಗೂ ಅನುಕೂಲ ಆಗೋ ಇನ್ಮೊಂದು ಡೇಟ್ ತಗೊಂಡು ಸಭೆ ಮಾಡ್ತೀವಿ ಅಂತ ತಿಳಿಸಿದರು.















