ಮನೆ ರಾಜಕೀಯ ಕನಕಪುರದ ಬಂಡೆಗಳನ್ನು ಲೂಟಿ ಮಾಡುವ ದೊಡ್ಡವರ ಬಗ್ಗೆ ಮಾತನಾಡುವುದಿಲ್ಲ: ಎಂ.ಪಿ ರೇಣುಕಾಚಾರ್ಯ

ಕನಕಪುರದ ಬಂಡೆಗಳನ್ನು ಲೂಟಿ ಮಾಡುವ ದೊಡ್ಡವರ ಬಗ್ಗೆ ಮಾತನಾಡುವುದಿಲ್ಲ: ಎಂ.ಪಿ ರೇಣುಕಾಚಾರ್ಯ

0

ಬೆಂಗಳೂರುಡಿಕೆ ಶಿವಕುಮಾರ್ ಬಹಳ ದೊಡ್ಡವರು, ದೊಡ್ಡಮಟ್ಟದ ಭ್ರಷ್ಟಾಚಾರ ನಡೆಸಿದ್ದಾರೆ. ಕನಕಪುರದ ಬಂಡೆಗಳನ್ನ ಲೂಟಿ ಮಾಡಿ ಸಾಗಿಸಿದ್ದಾರೆ. ಇಂತಹ ದೊಡ್ಡವರ ಬಗ್ಗೆ ಮಾತನ್ನಾಡುವುದಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಎಂಪಿ ರೇಣುಕಾಚಾರ್ಯ ನಾನು ಅವರಷ್ಟು ದೊಡ್ಡವನಲ್ಲ. ನಾನು ವೈಯಕ್ತಿಕವಾಗಿ ಮಾತನ್ನಾಡುವುದಿಲ್ಲ. ರಾಜಕೀಯವಾಗಿ ಟೀಕೆ ಮಾಡಿದರೆ ಎದುರಿಸುತ್ತೇನೆ. ವೈಯಕ್ತಿಕ ವಿಚಾರಗಳನ್ನ ತಂದು ಟೀಕಿಸುವುದು ಯಾಕೆ? ಸಿಎಂ ಆಗಲು ಹಗಲುಗನಸು ಕಾಣುತ್ತಿದ್ದಾರೆ. ಅದು ಆಗುವುದು ಕನಸಿನ ಮಾತು. ಸಿದ್ದರಾಮಯ್ಯ ಹಾಗೂ ಅವರ ನಡುವೆ ಗುದ್ದಾಟ ನಡೆಯುತ್ತಿದೆ ಎಂದು ಹೇಳಿದ್ದಾರೆ. 

ನಾನು ಅಲ್ಪಸಂಖ್ಯಾತ ವಿರೋಧಿ ಅಲ್ಲ. ಆದರೆ ಇಂದು ಗಲಾಟೆಯಾಗುತ್ತಿದೆ. ಅಮಯಾಕ ವಿದ್ಯಾರ್ಥಿನಿಯರ ಹಿಂದೆ ಅಂತರಾಷ್ಟ್ರೀಯ ಭಯೋತ್ಪಾದಕರ ಸಂಘಟನೆ ಕೈವಾಡ ಇದೆ ಎಂದು ಹೇಳಿದ್ದಾರೆ. 

ನಾನು‌ ಹಳ್ಳಿ ಹೈದ ನನಗೂ ಭಾಷೆ ಬರುತ್ತೆ. ವೈಯಕ್ತಿಕವಾಗಿ ಮಾತಾಡಿದರೆ ನನಗೂ ಮಾತಾಡಲು ಬರುತ್ತದೆ. ನಾನು ಅಲ್ಪಸಂಖ್ಯಾತ ವಿರೋಧಿ ಅಲ್ಲ. ಬಿಜೆಪಿ ಮತ್ತು ಸರ್ಕಾರದ ವರ್ಚಸ್ಸು ಹಾಳು ಮಾಡಲು ಹಿಜಾಬ್ ವಿಚಾರ ತೆಗೆದುಕೊಂಡಿದ್ದಾರೆ. ಮುಗ್ದ ವಿದ್ಯಾರ್ಥಿಗಳ ಮನಸ್ಸನ್ನು ಹಾಳು ಮಾಡಲಾಗಿದೆ. ಈಗ ಜಮೀರ್, ಖಾದರ್, ತನ್ವೀರ್ ಸೇಠ್ ಎಲ್ಲರೂ‌ ಮಾತಾಡ್ತಾರೆ. ಹಿಂದೆ ತನ್ವೀರ್ ಸೇಠ್ ತಂದೆ ಅಜೀಜ್ ಸೇಠ್ ಕೋಮು ಗಲಭೆ ಸೃಷ್ಟಿ ಮಾಡಿಸಿ ಅವರ ಪಕ್ಷದ ಸಿಎಂ ಅನ್ನೇ ಕೆಳಗಿಳಿಸಿದರು ಎಂದು ಹೇಳಿದ್ದಾರೆ.