ಮನೆ ಸುದ್ದಿ ಜಾಲ ಇಂದಿಗೂ ಬಾಲ್ಯವಿವಾಹ ಜೀವಂತವಾಗಿರುವುದು ದುರಾದೃಷ್ಟ: ಅರುಂಧತಿ ವಿಷಾದ

ಇಂದಿಗೂ ಬಾಲ್ಯವಿವಾಹ ಜೀವಂತವಾಗಿರುವುದು ದುರಾದೃಷ್ಟ: ಅರುಂಧತಿ ವಿಷಾದ

0

ಮೈಸೂರು (Mysuru): ಬಾಲ್ಯ ವಿವಾಹ ಒಂದು ಸಾಮಾಜಿಕ ಪಿಡುಗು. ಇಂದಿಗೂ ನಮ್ಮಲ್ಲಿ ಅತಿ ಹೆಚ್ಚು ಬಾಲ್ಯವಿವಾಹಗಳು ನಡೆಯುತ್ತಿರುವುದು ದುರಾದೃಷ್ಟವೇ ಸರಿ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅರುಂಧತಿ ವಿಷಾದ ವ್ಯಕ್ತಪಡಿಸಿದರು.

ಇಂದು ತಿ.ನರಸೀಪುರ ತಾಲೂಕಿನ ಕೊಡಗವಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ RLHP- ಚೈಲ್ಡ್ ಲೈನ್ -1098 ಮೈಸೂರು ವತಿಯಿಂದ ಆಯೋಜಿಸಿದ್ದ ತೆರೆದ ಮನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬಾಲ್ಯವಿವಾಹ ಮಾಡಿದಲ್ಲಿ ಕಾನೂನು ಪ್ರಕಾರ ಕನಿಷ್ಠ ಒಂದು ವರ್ಷದಿಂದ ಎರಡು ವರ್ಷದವರೆಗೆ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಮಕ್ಕಳಿಗೆ ಮಾಹಿತಿ ದೊರೆತ ಕೂಡಲೇ ಉಚಿತ ಸಹಾಯವಣಿ ಚೈಲ್ಡ್ ಲೈನ್- 1098 ಗೆ ಕರೆ ಮಾಡಿ ಎಂದು ತಿಳಿಸಿದರು.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳು ಪರಿಚಿತರಿಂದಲೇ ನಡೆಯುತ್ತಿರುವುದು ತುಂಬಾ ವಿಷಾದನೀಯವಾಗಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ-2012 ಇದ್ದು ಮಕ್ಕಳು ಇದರ ವಿರುದ್ಧ ಧ್ವನಿ ಎತ್ತಬೇಕಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಚೈಲ್ಡ್ ಲೈನ್ ಸಂಯೋಜಕರಾದ ಶಶಿಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಕ್ಕಳ ರಕ್ಷಣಾ ಘಟಕದ ಪಿ.ಓ. ಅಪೇಕ್ಷಿತ, ಶಾಲೆಯ ಮುಖ್ಯ ಶಿಕ್ಷಕರಾದ ಜಗದೀಶ್, ಮಕ್ಕಳ ಪ್ರತಿನಿಧಿಯಾಗಿ ಕುಸುಮ, ಶಿಕ್ಷಣ ಇಲಾಖೆಯ ಸಿ.ಆರ್. ಪಿ.ಚಂದ್ರಶೇಖರ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ತಿಲಕ್ ರಾಜ್, ಅಂಗನವಾಡಿ ಕಾರ್ಯಕರ್ತೆ ಲೋಕೇಶ್ವರಿ, ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.

ಹಿಂದಿನ ಲೇಖನಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಏಕರೂಪ ತಂತ್ರಾಂಶ ಅಳವಡಿಕೆ: ಸಚಿವ ಎಸ್.ಟಿ.ಸೋಮಶೇಖರ್‌
ಮುಂದಿನ ಲೇಖನಬೆಂಗಳೂರು ನಗರ ನಿರ್ಮಾಣದಲ್ಲಿ ಕೆಂಪೇಗೌಡ ಕೊಡುಗೆ ಅಪಾರ: ಶಾಸಕ ಜಿ.ಟಿ.ದೇವೇಗೌಡ