ಮನೆ ಸುದ್ದಿ ಜಾಲ ಜಮ್ಮು-ಕಾಶ್ಮೀರ: ಇಬ್ಬರು ಉಗ್ರರರನ್ನು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

ಜಮ್ಮು-ಕಾಶ್ಮೀರ: ಇಬ್ಬರು ಉಗ್ರರರನ್ನು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

0

ಶ್ರೀನಗರ(srinagar): ಇಬ್ಬರು ಶಸ್ತ್ರಧಾರಿ ಉಗ್ರರನ್ನು ಗ್ರಾಮಸ್ಥರೇ ಹೆಡೆಮುರಿಕಟ್ಟಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ.
ಪೊಲೀಸರಿಗೆ ಒಪ್ಪಿಸಿದ ಇಬ್ಬರು ಉಗ್ರರ ಪೈಕಿ ಓರ್ವ ಉಗ್ರ ಎಲ್ಇಟಿ ಸಂಘಟನೆಯ ಕಮಾಂಡ್ ಆಗಿದ್ದು ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಉಗ್ರನಾಗಿದ್ದಾನೆ.
ರಜೌರಿ ಜಿಲ್ಲೆಯ ನಿವಾಸಿ ಆಗಿದ್ದ ಎಲ್ಇಟಿ ಕಮಾಂಡರ್ ತಲಿಬ್ ಹುಸೇನ್ ಹಾಗೂ ಜಿಲ್ಲೆಯಲ್ಲಿ ಇತ್ತೀಚಿನ ಐಇಡಿ ಸ್ಫೋಟ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದ ಫೈಜಲ್ ಅಹ್ಮದ್ ದರ್ ನ್ನು ತುಕ್ಸಾನ್ ಗ್ರಾಮದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗ್ರಾಮಸ್ಥರ ಧೈರ್ಯ, ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಡಿಜಿಪಿ ದಲ್ಬಿರ್ ಸಿಂಗ್ ಗ್ರಾಮಸ್ಥರಿಗೆ 2 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದ್ದಾರೆ.

ಹಿಂದಿನ ಲೇಖನಮರವಂತೆ ಬೀಚ್ ಗೆ ಉರುಳಿದ ಕಾರು: ಓರ್ವನ ಸಾವು
ಮುಂದಿನ ಲೇಖನನೂಪುರ್ ಶರ್ಮಾ ಪ್ರಕರಣ ಸುಪ್ರೀಂ ಕೋರ್ಟ್ ಗೆ ಅಭಿನಂದನೆ ಸಲ್ಲಿಸಿದ‌ ಯಶವಂತ್ ಸಿನ್ಹಾ