ಮನೆ ದೇವರ ನಾಮ ಜಯ ಜನಾರ್ದನಾ ಕೃಷ್ಣಾ ರಾಧಿಕಾಪತೇ

ಜಯ ಜನಾರ್ದನಾ ಕೃಷ್ಣಾ ರಾಧಿಕಾಪತೇ

0

ಜಯ ಜನಾರ್ದನಾ ಕೃಷ್ಣಾ ರಾಧಿಕಾಪತೇ
ಜನವಿಮೋಚನಾ ಕೃಷ್ಣಾ ಜನ್ಮಮೋಚನಾ
ಗರುಡವಾಹನಾ ಕೃಷ್ಣಾ ಗೋಪಿಕಾಪತೇ
ನಯನಮೋಹನಾ ಕೃಷ್ಣಾ ನೀರಜೇಕ್ಷಣಾ ||

ಸುಜನಬಾಂಧವಾ ಕೃಷ್ಣಾ ಸುಂದರಾಕೃತೇ
ಮದನಕೋಮಲಾ ಕೃಷ್ಣಾ ಮಾಧವಾ ಹರೇ
ವಸುಮತೀಪತೇ ಕೃಷ್ಣಾ ವಾಸವಾನುಜಾ
ವರಗುಣಾಕರಾ ಕೃಷ್ಣಾ ವೈಷ್ಣವಾಕೃತೇ ||

ಸುರುಚಿನಾನನಾ ಕೃಷ್ಣಾ ಶೌರ್ಯವಾರಿಧೇ
ಮುರಹರಾ ವಿಭೋ ಕೃಷ್ಣಾ ಮುಕ್ತಿದಾಯಕಾ
ವಿಮಲಪಾಲಕಾ ಕೃಷ್ಣಾ ವಲ್ಲಭೀಪತೇ
ಕಮಲಲೋಚನಾ ಕೃಷ್ಣಾ ಕಾಮ್ಯದಾಯಕಾ ||

ವಿಮಲಗಾತ್ರನೇ ಕೃಷ್ಣಾ ಭಕ್ತವತ್ಸಲಾ
ಚರಣಪಲ್ಲವಂ ಕೃಷ್ಣಾ ಕರುಣಕೋಮಲಂ
ಕುವಲಯೇಕ್ಷಣಾ ಕೃಷ್ಣಾ ಕೋಮಲಾಕೃತೇ
ತವ ಪದಾಂಬುಜಂ ಕೃಷ್ಣಾ ಶರಣಮಾಶ್ರಯೇ ||

ಭುವನನಾಯಕಾ ಕೃಷ್ಣಾ ಪಾವನಾಕೃತೇ
ಗುಣಗಣೋಜ್ವಲಾ ಕೃಷ್ಣಾ ನಳಿನಲೋಚನಾ

ಪ್ರಣಯವಾರಿಧೇ ಕೃಷ್ಣಾ ಗುಣಗಣಾಕರಾ
ರಾಮಸೋದರಾ ಕೃಷ್ಣಾ ದೀನವತ್ಸಲಾ [*ಶ್ಯಾಮ*] ||

ಕಾಮಸುಂದರಾ ಕೃಷ್ಣಾ ಪಾಹಿ ಸರ್ವದಾ
ನರಕನಾಶನಾ ಕೃಷ್ಣಾ ನರಸಹಾಯಕಾ
ದೇವಕೀಸುತಾ ಕೃಷ್ಣಾ ಕಾರುಣ್ಯಾಂಬುಧೇ
ಕಂಸನಾಶನಾ ಕೃಷ್ಣಾ ದ್ವಾರಕಾಸ್ಥಿತಾ ||

ಪಾವನಾತ್ಮಕಾ ಕೃಷ್ಣಾ ದೇಹಿ ಮಂಗಳಂ
ತ್ವತ್ಪದಾಂಬುಜಂ ಕೃಷ್ಣಾ ಶ್ಯಾಮಕೋಮಲಂ
ಭಕ್ತವತ್ಸಲಾ ಕೃಷ್ಣಾ ಕಾಮ್ಯದಾಯಕಾ
ಪಾಲಿಶನ್ನನೂ ಕೃಷ್ಣಾ ಶ್ರೀಹರೀ ನಮೋ ||

ಭಕ್ತದಾಸನಾ ಕೃಷ್ಣಾ ಹರಸುನೀ ಸದಾ
ಕಾದುನಿಂತಿನಾ ಕೃಷ್ಣಾ ಸಲಹಯಾವಿಭೋ
ಗರುಡವಾಹನಾ ಕೃಷ್ಣಾ ಗೋಪಿಕಾಪತೇ
ನಯನಮೋಹನಾ ಕೃಷ್ಣಾ ನೀರಜೇಕ್ಷಣಾ ||

ಜಯ ಜನಾರ್ದನಾ ಕೃಷ್ಣಾ ರಾಧಿಕಾಪತೇ
ಜನವಿಮೋಚನಾ ಕೃಷ್ಣಾ ಜನ್ಮಮೋಚನಾ
ಗರುಡವಾಹನಾ ಕೃಷ್ಣಾ ಗೋಪಿಕಾಪತೇ
ನಯನಮೋಹನಾ ಕೃಷ್ಣಾ ನೀರಜೇಕ್ಷಣಾ ||

ಹಿಂದಿನ ಲೇಖನಹಿಜಾಬ್ ಪ್ರಕರಣ: ವಿದ್ಯಾರ್ಥಿಗಳು ಮಿನಿ, ಮಿಡಿ ಅಥವಾ ಬೇಕಾದದ್ದು ತೊಡಬಹುದೇ ಎಂದು ಪ್ರಶ್ನಿಸಿದ ಸುಪ್ರೀಂ ಕೋರ್ಟ್‌
ಮುಂದಿನ ಲೇಖನಯೋಗದ ಮಹತ್ವ