ಬೆಂಗಳೂರು (Bengaluru)- ಕಾಂಗ್ರೆಸ್, ಬಿಜೆಪಿ ತಂತ್ರಕ್ಕೆ ಜೆಡಿಎಸ್ ಪ್ರತಿತಂತ್ರ ರೂಪಿಸಿದೆ. ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಬಳಿಕೆ ಬೃಹತ್ ಶಕ್ತಿ ಪ್ರದರ್ಶನಕ್ಕೆ ಜೆಡಿಎಸ್ ಸಜ್ಜಾಗಿದೆ.
ಬಿಜೆಪಿ, ಕಾಂಗ್ರೆಸ್ ಅಸಮಾಧಾನಿತರನ್ನು ಜೆಡಿಎಸ್ ಪಕ್ಷಕ್ಕೆ ಸೆಳೆಯಲು ತಂತ್ರ ರೂಪಿಸಲಾಗುತ್ತಿದೆ. ಮೊತ್ತೊಂದಡೆ ಅಸಮಾಧಾನಿತರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಪ್ಲಾನ್ ಮಾಡಲಾಗುತ್ತಿದೆ.
ಬಿಜೆಪಿಯಲ್ಲಿನ ಅಸಮಾಧಾನಿತರು ಹಾಗೂ ಕಾಂಗ್ರೆಸ್ ನ ಅಲ್ಪ ಸಂಖ್ಯಾತ ನಾಯಕರನ್ನೇ ಜೆಡಿಎಸ್ ಟಾರ್ಗೆಟ್ ಮಾಡಿದೆ.
ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡರ ಅಣತಿ ಮೇರೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಫೀಲ್ಡಿಗಿಳಿದಿದ್ದಾರೆ.
ಎಚ್.ಡಿ. ದೇವೆಗೌಡರ ಸಂಧಾನ ಸೂತ್ರದ ಮೂಲಕ ಮಾತುಕತೆಗೆ ಮುಂದಾಗಿದೆ. ಜಿ.ಟಿ.ದೇವೇಗೌಡ, ಮರಿತಿಬ್ಬೇಗೌಡ ಸೇರಿದಂತೆ ಹಲವು ನಾಯಕರ ಮನವೊಲಿಕೆಗೆ ಯತ್ನಿಸಲಾಗುತ್ತಿದೆ.
ಇನ್ನೊಂದೆಡೆ ಜಿಟಿಡಿ, ಮರಿತಿಬ್ಬೇಗೌಡ ಪಕ್ಷದಲ್ಲೇ ಇರುತ್ತಾರೆ ಎಂದು ಜೆಡಿಎಸ್ ನಾಯಕರು ಹೇಳುತ್ತಿದ್ದಾರೆ.















