ಮನೆ ರಾಜಕೀಯ ಜೆಡಿಎಸ್’ನ ಪ್ರಜಾಪ್ರಭುತ್ವ ಇರುವುದು ಕುಟುಂಬದಿಂದ, ಕುಟುಂಬಕ್ಕಾಗಿ, ಕುಟುಂಬಕೋಸ್ಕರ: ಸಿ.ಟಿ ರವಿ ವ್ಯಂಗ್ಯ

ಜೆಡಿಎಸ್’ನ ಪ್ರಜಾಪ್ರಭುತ್ವ ಇರುವುದು ಕುಟುಂಬದಿಂದ, ಕುಟುಂಬಕ್ಕಾಗಿ, ಕುಟುಂಬಕೋಸ್ಕರ: ಸಿ.ಟಿ ರವಿ ವ್ಯಂಗ್ಯ

0

ಚಿಕ್ಕಮಗಳೂರು: ಜೆಡಿಎಸ್ ಪಕ್ಷಕ್ಕೆ ಪ್ರಜಾಪ್ರಭುತ್ವದ ಅರ್ಥವೇ ಬೇರೆ. ಜೆಡಿಎಸ್’ನ ಪ್ರಜಾಪ್ರಭುತ್ವ ಇರುವುದು ಕುಟುಂಬದಿಂದ, ಕುಟುಂಬಕ್ಕಾಗಿ, ಕುಟುಂಬಕೋಸ್ಕರ ಎಂದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಲೇವಡಿ ಮಾಡಿದರು.

ಬಿಜೆಪಿ ಯುವ ಮೋರ್ಚಾ ಆಯೋಜನೆ ಮಾಡಿದ್ದ ಯುವ ಸಂಗಮದಲ್ಲಿ ಮಾತನಾಡಿದ ಅವರು, ಜೆಡಿಎಸ್ ನಲ್ಲಿ ಒಂದೇ ಒಂದು ತಪ್ಪಾಗಿರುವುದು. ಅವರಲ್ಲಿ 224 ಕ್ಷೇತ್ರದಲ್ಲಿ ನಿಲ್ಲುವುದಕ್ಕೆ ಅವರ ಕುಟುಂಬದಲ್ಲಿ ಸದಸ್ಯರಿಲ್ಲ. 224 ಜನ ಇದ್ದಿದ್ದರೆ ಅಭ್ಯರ್ಥಿಗಳಿಗಾಗಿ ಹುಡುಕುವ ಅವಶ್ಯಕತೆ ಇರುತ್ತಿರಲಿಲ್ಲ ಎಂದರು.

ಹಾಸನದಲ್ಲಿ ಜಗಳ ನಡೆಯುತ್ತಿದೆ, ದೇಶಗಾಗಿ ಅಲ್ಲ. ಹಾಸನದ ಜಗಳ ಜನರಿಗಾಗಿ ಅಲ್ಲ, ಬದಲಾಗಿ ಅವರ ಕುಟುಂಬಕ್ಕಾಗಿ. ಯಾರೋ ಒಬ್ಬರಿಗೆ 36 ಹೆಂಡತಿಯರು, 316 ಜನ ಮಕ್ಕಳು ಇದ್ದಾರೆಂದು ಎಲ್ಲೋ ಕೇಳಿದ್ದೆ. ಹಾಗೇನಾದರೂ ಆಗಿಬಿಟ್ಟಿದ್ದರೆ 224 ಕ್ಷೇತ್ರಕ್ಕೆ ಅಭ್ಯರ್ಥಿ ಹುಡುಕುವ ಪ್ರಮೇಯ ಇರುತ್ತಿರಲಿಲ್ಲ ಎಂದು ಲೇವಡಿ ಮಾಡಿದರು.

ಹಿಂದಿನ ಲೇಖನಕರ್ನಾಟಕದಲ್ಲಿರುವ 40 ಪರ್ಸೆಂಟೇಜ್ ಭ್ರಷ್ಟಾಚಾರದ ಸರ್ಕಾರ ಕಿತ್ತೊಗೆಯಬೇಕು: ಅರವಿಂದ ಕೇಜ್ರಿವಾಲ್​ ​
ಮುಂದಿನ ಲೇಖನಆಟದ ಮೈದಾನವಿಲ್ಲದೆ ಶಾಲೆ ಇರುವಂತಿಲ್ಲ: ಸುಪ್ರೀಂಕೋರ್ಟ್‌