ಮನೆ ಉದ್ಯೋಗ ಅಗ್ನಿ ಸ್ಟೀಲ್ಸ್ ಕಂಪನಿಯಲ್ಲಿದೆ ಉದ್ಯೋಗ: ಮೈಸೂರಿನಲ್ಲಿ ನಾಳೆ ಇಂಟರ್ ವ್ಯೂ

ಅಗ್ನಿ ಸ್ಟೀಲ್ಸ್ ಕಂಪನಿಯಲ್ಲಿದೆ ಉದ್ಯೋಗ: ಮೈಸೂರಿನಲ್ಲಿ ನಾಳೆ ಇಂಟರ್ ವ್ಯೂ

0

ಅಗ್ನಿ ಸ್ಟೀಲ್ಸ್​ ಪ್ರೈವೇಟ್​ ಲಿಮಿಟೆಡ್ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಭ್ಯರ್ಥಿಗಳ ನೇಮಕಾತಿಗೆ ಮುಂದಾಗಿದೆ. ಈ ಸಂಬಂಧ ಸಂಸ್ಥೆ ಉದ್ಯೋಗ ಪ್ರಕಟಣೆ ಹೊರಡಿಸಿದೆ. ಮಂಡ್ಯ, ರಾಮನಗರ, ತುಮಕೂರು, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಸೇರಿದಂತೆ ವಿವಿಧ ಕಡೆ ಮಾರಾಟ ಅಧಿಕಾರಿಗಳು ಮತ್ತು ಬ್ಯುಸಿನೆಸ್​ ಡೆವಲಪ್​ಮೆಂಟ್​ ಎಕ್ಸೂಕ್ಯುಟಿವ್​ಗಳ ನೇಮಕಾತಿಗೆ ಮುಂದಾಗಿದೆ. ಯಾವುದೇ ವಿಷಯದಲ್ಲಿ ಪದವಿಯನ್ನು ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲಾಗುವುದು. ಜೊತೆಗೆ ಯಾವುದೇ ಲಿಖಿತ ಪರೀಕ್ಷೆ ಇಲ್ಲ. ಈ ಹುದ್ದೆಗಳಿಗೆ ಆಗಸ್ಟ್​ 27ರ ಶನಿವಾರ ವಾಕ್​ ಇನ್​ ಇಂಟರ್​ವ್ಯೂ ನಡೆಯಲಿದೆ.
ಸಂಸ್ಥೆ: ಅಗ್ನಿ ಸ್ಟೀಲ್​ ಪ್ರೈವೇಟ್​ ಲಿಮಿಟೆಡ್​
ಹುದ್ದೆಗಳು: ಮಾರ್ಕೆಟಿಂಗ್​ ಮ್ಯಾನೇಜರ್​, ಸೇಲ್ಸ್​ ಆಫೀಸರ್​, ಬ್ಯುಸಿನೆಟ್​ ಡೆವಲಪ್​ಮೆಂಟ್​ ಎಕ್ಸೂಕ್ಯೂಟಿವ್​
ಒಟ್ಟು ಹುದ್ದೆಗಳ ಸಂಖ್ಯೆ: ನಿರ್ಧಿಷ್ಟ ಪಡಿಸಿಲ್ಲ
ಕಾರ್ಯ ನಿರ್ವಹಣೆ ಸ್ಥಳ: ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ತುಮಕೂರು ಸೇರಿದಂತೆ ವಿವಿಧ ನಗರ
ವೇತನ: ಸಂಸ್ಥೆಯ ನಿಯಮ ಅನುಸಾರ

ಆಯ್ಕೆ ಪ್ರಕ್ರಿಯೆ: ನೇರ ಸಂದರ್ಶನ
ನೇರ ಸಂದರ್ಶನ ನಡೆಯುವ ಸ್ಥಳ: ಹೋಟೇಲ್​ ಪೈ ವಿಸ್ತಾ, ಬೆಂಗಳೂರು ನೀಲಿಗಿರಿ ರಸ್ತೆ. ಮೈಸೂರು.

ಅಧಿಸೂಚನೆ ಬಿಡುಗಡೆ ದಿನಾಂಕ: 22 ಆಗಸ್ಟ್​ 2022
ನೇರ ಸಂದರ್ಶನ ದಿನಾಂಕ 27 ಆಗಸ್ಟ್​ ಬೆಳಗ್ಗೆ 10 ಕ್ಕೆ

ನೇರ ಸಂದರ್ಶನದಲ್ಲಿ ಅಗತ್ಯವಾಗಿ ಕೊಂಡೊಯ್ಯಬೇಕಾದ ದಾಖಲೆ

ಆಸಕ್ತ ಅಭ್ಯರ್ಥಿಗಳು ಭರ್ತಿಯಾದ ಅರ್ಜಿಯನ್ನು ನೇರ ಸಂದರ್ಶನಕ್ಕೆ ಕೊಂಡೊಯ್ಯವುದು ಅವಶ್ಯ.
ಪದವಿ ಮತ್ತು 10ನೇ ತರಗತಿ ಮಾರ್ಕ್ಸ್​ ಕಾರ್ಡ್​​
ಸಕ್ಷಮ ಅಧಿಕಾರಿಗಳು ನೀಡಿದ ಅನುಭವ ಪ್ರಮಾಣಪತ್ರಗಳು/ಯಾವುದೇ ಸಂಬಂಧಿತ ಪ್ರಮಾಣಪತ್ರಗಳು/ ಪ್ರಶಂಸಾಪತ್ರಗಳು.
ಜಾತಿ ಪ್ರಮಾಣ ಪತ್ರ
ನಾನ್-ಕ್ರೀಮಿ ಲೇಯರ್ ಪ್ರಮಾಣಪತ್ರ ಅತ್ಯಗತ್ಯ
ಶೈಕ್ಷಣಿಕ ಅರ್ಹತೆ ಸಂಬಂಧಿಸಿದ ಯಾವುದೇ ಇತರ ಸಂಬಂಧಿತ ಮಾಹಿತಿ

ಹೆಚ್ಚಿನ ಮಾಹಿತಿಗೆ 9686667664, 7094470026 ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.

ಹಿಂದಿನ ಲೇಖನಗೌರಿ-ಗಣೇಶ ಹಬ್ಬ: ಹೆಚ್ಚುವರಿಯಾಗಿ 500 ವಿಶೇಷ ಬಸ್‌ಗಳ ಸಂಚಾರ
ಮುಂದಿನ ಲೇಖನ40 % ಕಮಿಷನ್ ಆರೋಪ: ಸಾಕ್ಷಿ ನೀಡಿ ಮಾತನಾಡಿ ಎಂದ ನಳಿನ್ ಕುಮಾರ್ ಕಟೀಲ್