ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಲಲಿತ : ನಾನು ನನ್ನ ಗಂಡನ್ನ 365 ದಿನಾನೂ ನನ್ನ ಮುಷ್ಟೀಯಲ್ಲಿ ಹಿಡಿದುಕೊಂಡಿರಬೇಕು. ಹಾಗೆ ಮಾಡ್ತೀರಾ ಡಾಕ್ಟರ್ ?

 ಡಾಕ್ಟರ್ : ಇದಕ್ಕೆ ನನಗಿಂತ ನನ್ನ ಹೆಂಡತಿ ಸರಿಯಾದ ಐಡಿಯಾ ಕೊಡ್ತಾಳೆ. ನೀವು ಅವಳನ್ನ ಕೇಳಿ.

****

 ರಂಗ : ನಿಮ್ ಹೆಂಡ್ತಿ ಹುಚ್ಚುಚ್ಚಾಗಿ ಆಡ್ತಾರೆ ಅಂತ ಆಸ್ಪತ್ರೆಗೆ ಕರ್ಕೊಂಡು ಹೋಗಿದ್ರಲ್ಲ,ಡಾಕ್ಟರ್ ಏನಂದ್ರು?

 ಸಿಂಗ : ಅವರು ಚೆನ್ನಾಗಿದ್ದಾರೆ, ನೀವೇ ಹುಚ್ಚುಚ್ಚಾಗಿ ಆಡ್ತಿದೀರಾ ಅಂತ ನನಗೇ ಮಾತ್ರೆ ಕೊಟ್ರು!

****

 ಲಂಚ ತಿಂದು ಸೆರೆಮನೆಗೆ ಸೇರಿದ ವ್ಯಕ್ತಿಯನ್ನು ನೋಡಲು ಅವನ ಗೆಳೆಯ ಬಂದಿದ್ದ.

 ಗೆಳೆಯ : ಲಂಚ ತಿಂದು ಸೆರೆಮನೆಗೆ ಸೇರಿರುವೆಯಲ್ಲ. ಈಗ ಹೇಗೆ ಹೊರಬರುವೆ.

 ಜಗ್ಗು : ಲಂಚ ಕೊಟ್ಟು ಹೊರ ಹೋಗಲು ಯತ್ನಿಸುವೆ.