ಮನೆ ಮನರಂಜನೆ ಅಪ್ಪು ನಟನೆಯ ಜೇಮ್ಸ್ ಚಿತ್ರದ ಟೀಸರ್ ರಿಲೀಸ್

ಅಪ್ಪು ನಟನೆಯ ಜೇಮ್ಸ್ ಚಿತ್ರದ ಟೀಸರ್ ರಿಲೀಸ್

0

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ  “ಜೇಮ್ಸ್” ಚಿತ್ರದ ಟೀಸರ್ ರಿಲೀಸ್​ ಆಗಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ.

ಟೀಸರ್​ ಕಂಡು ಅಭಿಮಾನಿಗಳು ಫುಲ್​ ಥ್ರಿಲ್ ಆಗಿದ್ದಾರೆ. ಜೊತೆಗೆ ಅಪ್ಪು ನಮ್ಮೊಂದಿಗೆ ಇಲ್ವಲ್ಲಾ ಅನ್ನೋ ನೋವಿನಲ್ಲಿ ಕಣ್ಣಿರು ಹಾಕಿದ್ದಾರೆ.

ಇಂದು 11 ಗಂಟೆ 15ನಿಮಿಷಕ್ಕೆ  ಜೇಮ್ಸ್ ಟೀಸರ್ ದೊಡ್ಮನೆ ಅಭಿಮಾನಿಗಳ ಅಭಿಮಾನದ ಮಡಿಲಿಗೆ ಸೇರಿದೆ. ಮೊಟ್ಟ ಮೊದಲ ಬಾರಿಗೆ ಸೋಲ್ಜರ್​ ಪಾತ್ರದಲ್ಲಿ ಪವರ್​ ಸ್ಟಾರ್ ಪುನೀತ್​ ರಾಜ್​ಕುಮಾರ್​ ಮಿಂಚಿದ್ದಾರೆ. ಅಷ್ಟೇ ಅಲ್ಲದೇ ಈ ಸಿನಿಮಾದಲ್ಲಿ ಶಿವಣ್ಣ, ರಾಘಣ್ಣ ಕೂಡ ನಟಿಸಿದ್ದಾರೆ.

ಈ ಸಿನಿಮಾ ಅಪ್ಪು ಹುಟ್ಟುಹಬ್ಬದ ದಿನ ಬಿಡುಗಡೆ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇದೀಗ ಬಿಡುಗಡೆಯಾಗಿರುವ ಟೀಸರ್​ ಕಂಡು ಸಿನಿಮಾ ಮೇಲಿರುವ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

ಜೇಮ್ಸ್​ ಟೀಸರ್​ ಸಖತ್​ ಆ್ಯಕ್ಷನ್​ನಿಂದ ಕೂಡಿದೆ. ಗನ್​ ಹಿಡಿದು ಅಪ್ಪು ಮಂಚಿದ್ದಾರೆ. ಟೀಸರ್​ ಆರಭಂದಿದಲೂ ಕೊನೆವರೆಗೂ ಆ್ಯಕ್ಷನ್​ ದೃಶ್ಯಗಳು ತುಂಬಿಕೊಂಡಿದೆ. ನನಗೆ ಮೊದಲಿನಿಂದಲೂ ರೆಕಾರ್ಡ್​ ಬ್ರೇಕ್​ ಮಾಡಿ ಅಭ್ಯಾಸ ಎನ್ನುವ ಡೈಲಾಗ್​ ಪಂಚ್​ ಟೀಸರ್​ನಲ್ಲಿದೆ.


‘ಜೇಮ್ಸ್’ ಚಿತ್ರದ ಪವರ್ ಫುಲ್ ಟೀಸರ್ ಪಿಆರ್‌ಕೆ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತ್ರವಲ್ಲ ಕರ್ನಾಟದಲ್ಲಿರುವ ಎಲ್ಲಾ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್ ಗಳಲ್ಲಿ ಪ್ರದರ್ಶನವಾಗುತ್ತಿದೆ. ಕರ್ನಾಟಕದಲ್ಲಿರುವ 580 ಚಿತ್ರಮಂದಿರಗಳು ಹಾಗೂ 1200 ಮಲ್ಟಿಪ್ಲೆಕ್ಸ್ ಗಳಲ್ಲಿ ಜೇಮ್ಸ್ ಟೀಸರ್ ಪ್ರದರ್ಶನ ಆಗುತ್ತಿದೆ. ಮಾರ್ನಿಂಗ್ ಶೋ ಇಂಟರ್‌ವಲ್ ಟೈಮ್‌ನಲ್ಲಿ ಜೇಮ್ಸ್  ಟೀಸರ್ ರಾರಾಜಿಸುತ್ತಿದೆ. ಮಾರ್ಚ್ 17ರವರೆಗೆ ಜೇಮ್ಸ್ ಚಿತ್ರ ರಿಲೀಸ್ ಆಗೋತನಕ ಚಿತ್ರದ ಟೀಸರ್ ಪ್ರಸಾರ ಅಗಲಿದೆ.