ಮನೆ ದೇವಸ್ಥಾನ ಮೈಸೂರು: ಜ್ವಾಲಾಮುಖಿ ತ್ರಿಪುರ ಸುಂದರಿ ದೇವಸ್ಥಾನ

ಮೈಸೂರು: ಜ್ವಾಲಾಮುಖಿ ತ್ರಿಪುರ ಸುಂದರಿ ದೇವಸ್ಥಾನ

0

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನೆಲೆಸಿರುವ ಚಾಮುಂಡಿಬೆಟ್ಟ ದೇಶಾದ್ಯಂತ ಪ್ರಸಿದ್ಧಿ ಪಡೆದಿದೆ.ದೇಶದ ಜನರು ಮಾತ್ರವಲ್ಲದೇ ವಿದೇಶಿಯರು ಮೈಸೂರಿಗೆ ಆಗಮಿಸಿದವರು ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ತಾಯಿಯ ದರ್ಶನ ಪಡೆಯುತ್ತಾರೆ

ಚಾಮುಂಡಿ ಬೆಟ್ಟ ದೇವಸ್ಥಾನದ ಜೊತೆಗೆ ಗುರುತಿಸಿಕೊಂಡಿರುವ ದೇವಾಲಯ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಸ್ಥಾನ ಉತ್ತನಹಳ್ಳಿನಲ್ಲಿದೆ.

ಮೈಸೂರಿನಿಂದ ಸುಮಾರು 7 ಕಿಲೋಮೀಟರ್ ದೂರದಲ್ಲಿದೆ ಹಾಗೂ ಚಾಮುಂಡಿಬೆಟ್ಟದಿಂದ ಮೂರು ಕಿಲೋಮೀಟರ್ ದೂರದಲ್ಲಿ ಉತ್ತನಹಳ್ಳಿ ಎಂಬ ಗ್ರಾಮದಲ್ಲಿ ದೇವಸ್ಥಾನ ಇದೆ. ಜ್ವಾಲಾಮುಖಿ ತ್ರಿಪುರ ಸುಂದರಿ ಯನ್ನು ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಿಯ ಸಹೋದರಿ ಎಂದು ಕರೆಯಲಾಗುತ್ತದೆ. ಮಹಿಷಾಸುರ ನ ಕಾಟ ತಡೆಯಲಾರದೆ ದೇವತೆಗಳು ತ್ರಿಮೂರ್ತಿಗಳ ಮೊರೆಹೋಗಿ ಮಹಿಷಾಸುರನ ಸಂಹಾರ ಒಂದು ಸ್ತ್ರೀ ಇಂದ ತಿಳಿದಾಗ ಎಲ್ಲ ದೇವರುಗಳು ಸೇರಿಕೊಂಡು ಚಾಮುಂಡೇಶ್ವರಿ ದೇವಿ ಅವತಾರ ಎತ್ತುತ್ತಾಳೆ. 

ಮಹಿಷಾಸುರ ಮತ್ತು ಚಾಮುಂಡೇಶ್ವರಿಗೆ ನಡುವೆ ಯುದ್ಧ ನಡೆಯುವಾಗ ಚಾಮುಂಡೇಶ್ವರಿ ದೇವಿ ಬೆವರುತ್ತಾರೆ. ಆಗ ಜನಿಸುವ ಜ್ವಾಲಾಮುಖಿ ತ್ರಿಪುರ ಸುಂದರಿ ಈಕೆಯು ಯುದ್ಧದಲ್ಲಿ ಚಾಮುಂಡೇಶ್ವರಿ ಗೆ ಸಹಾಯ ಮಾಡುತ್ತಾಳೆ ಉತ್ತನಹಳ್ಳಿ ಮಾರಮ್ಮ ಎಂದೇ ಪ್ರಸಿದ್ಧಿ ಆಗಿದ್ದಾರೆ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಸ್ಥಾನ ಪಶ್ಚಿಮ ದಿಕ್ಕಿಗೆ ಮುಖ ಮಾಡಿಕೊಂಡು ದೇವಿ ಕುಳಿತಿದ್ದಾಳೆ.

ಈ ದೇವಿಯು ಮೈಸೂರು ಯಾವಾಗಲೂ ನೋಡಿಕೊಂಡು ಕುಳಿತುಕೊಂಡಿದ್ದಾರೆ ಮೈಸೂರಿಗೆ ಯಾವುದೇ ಕಹಿ ಘಟನೆಗಳು ಮತ್ತು ಯಾವುದೇ ಸಮಸ್ಯೆ ಇದ್ದರೆ ದೇವರು ಕಾಪಾಡುತ್ತದೆ ಮೈಸೂರಿನಲ್ಲಿ ಯಾವುದೇ ಕೆಟ್ಟ ಕಣ್ಣು ಬಿದ್ದರು. ದೇವಿಯು ಕಾಪಾಡುತ್ತಾಳೆ. ಮೈಸೂರು ರಾಜವಂಶದ ಕುಲದೇವತೆ ಕೂಡ ಆಗಿತ್ತು.