ಮನೆ ಜ್ಯೋತಿಷ್ಯ ಜ್ಯೇಷ್ಠಾ- ನಕ್ಷತ್ರ

ಜ್ಯೇಷ್ಠಾ- ನಕ್ಷತ್ರ

0

ಕ್ಷೇತ್ರ – ವೃಶ್ಚಿಕ ರಾಶಿಯಲ್ಲಿ 16 ಡಿಗ್ರಿ 30 ಕಲೆಯಿಂದ 30ಡಿಗ್ರಿಯವರೆಗೆ, ರಾಶಿಸ್ವಾಮೀ – ಮಂಗಳ, ನಕ್ಷತ್ರಸ್ವಾಮಿ – ಬುಧ, ನಾಡಿ – ಆದ್ಯ, ಗಣ- ರಾಕ್ಷಸ, ಯೋನಿ – ಮೃಗ, ನಾಮಾಕ್ಷರ – ನೇ,ಯಾ, ಯಿ, ಯೂ, ಶರೀರಭಾಗ – ಕರುಳು, ಮಲದ್ವಾರ, ಗುಪ್ತಾಂಗ, ಯೋನಿ ಅಥವ ಲಿಂಗ, ಅಂಡಾಶಯ, ಡಿಂಭಗ್ರಂಥಿ.

ರೋಗಗಳು :- ಲಿಕೇರಿಯ, ರಕ್ತಸ್ರಾವ, ಮೂಲವ್ಯಾಧಿ, ಕ್ಯಾನ್ಸರ್, ಗುಪ್ತಾಂಗರೋಗ, ಕರುಳಿನಲ್ಲಿ ವಿಕಾರ, ಭುಜಗಳಲ್ಲಿನೋವು, ಹೆಗಲಲ್ಲಿ  ತೊಂದರೆ.

ಸಂರಚನೆ :- ಈ ನಕ್ಷತ್ರದಲ್ಲಿ ಜನಿಸಿದವರು ಅಧ್ಯಯನಶೀಲರು, ಕಾರ್ಯಕರ್ತರು, ನಿಷ್ಕಪಟ, ಸರಳ ಹೃದಯದವರು, ವಿದ್ವಾನ್, ಪ್ರಯೋಗವಾದಿಗಳು, ಮಾತುಗಾರರು, ತಿರಂಜನವಾದಿ, ಪ್ರಸಿದ್ಧ ಗುಣ ದವರು, ಕಳ್ಳತನ ಮಾಡುವವರು, ವಿಷಕನ್ಯೆಯಂತಿರುವವರು, ವೈಜ್ಞಾನಿಕ, ಗಣಿತತಜ್ಞ, ಸೈನಿಕ, ಸಿಟ್ಟೀನವರಾಗಬಹುದು.

ಉದ್ಯೋಗ, ವಿಶೇಷತೆಗಳು :- ರಾಸಾಯನತಜ್ಞ, ಇಂಜಿನಿಯರ್, ಮುದ್ರಣಕಾರ್ಯ ಮಾಡುವವ, ಪ್ರಕಾಶಕ, ಟೈಪ್ ರೈಟರ್, ಶಾರ್ಟ್ ಹ್ಯಾಂಡ್ ತಿಳಿದವ, ವಾದ್ಯ ಪ್ರವೀಣ, ಸೇನಾಧಿಕಾರಿ, ಶಸ್ತ್ರ ಚಿಕಿತ್ಸಕ, ವಿದ್ಯುತ್ ಉಪಕರಣ ತಯಾರಕ, ನಾವಿಕ, ರೇಡಿಯೋ ರಿಪೇರಿ ಮಾಡುವ, ಪತ್ರಕರ್ತ, ಸಂಗೀತ ನೃತ್ಯಪಟು, ಅಭಿನೇತ, ಭಾಷಣಕಾರ ಮತ್ತು ಹಾಸ್ಯಗಾರನಾಗಬಹುದು.

ಮಂಗಳ ರಾಶಿ ಬುಧನ ನಕ್ಷತ್ರದಲ್ಲಿ ಹುಟ್ಟಿದವರು, ಉತ್ತಮ ಶಿಕ್ಷಣ ಪಡೆಯುವವರು, ಪಶುಪಾಲನೆ, ಪತ್ರಕಾರರಾಗಿ ಕೆಲಸ ಮಾಡುವವರು, ಪಶು ಚಿಕಿತ್ಸಕ, ಲೇಖಕರು, ವಿಮರ್ಶಕರು ಆಗುವವರು, ಮಿತ್ರರಿಗೆ ಉಪಕಾರಕ ಮಾಡುವವರು, ವಿಜ್ಞಾನಗಳನ್ನ ಎದುರಿಸುವವರು, ಅಭಿಮಾನಿಗಳು, ವಿಲಾಸಪ್ರಿಯರಾಗಬಹುದಾಗಿದೆ. ಸೂರ್ಯನು ಈ ನಕ್ಷತ್ರದ ಮಾರ್ಗಶಿರ್ಷ ಮಾಸದಲ್ಲಿ 13 ದಿನವಿರುತ್ತಾರೆ. ಬುಧ, ಮಂಗಳನ ಭುಕ್ತಿಯಿರುವಾಗ ಮೇಲಿನ ಎಲ್ಲಾ ಪರಿಣಾಮಗಳಾಗಬಹುದು.