ಮನೆ ಮನರಂಜನೆ ಜುಲೈ 12ರಂದು ಕಮಲ್-ಶಂಕರ್ ಜೋಡಿಯ ಇಂಡಿಯನ್ -2 ತೆರೆಗೆ

ಜುಲೈ 12ರಂದು ಕಮಲ್-ಶಂಕರ್ ಜೋಡಿಯ ಇಂಡಿಯನ್ -2 ತೆರೆಗೆ

0

ಕಮಲ್‌ ಹಾಸನ್‌ ಹಾಗೂ ಆರ್‌. ಶಂಕರ್‌ ಜೋಡಿಯ ಇಂಡಿಯನ್‌ 2 ಸಿನಿಮಾ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಜುಲೈ 12ಕ್ಕೆ ಚಿತ್ರ ವರ್ಲ್ಡ್ ವೈಡ್‌ ರಿಲೀಸ್‌ ಆಗುತ್ತಿದೆ. ಹೀಗಾಗಿ ಚಿತ್ರತಂಡ ಪ್ರಚಾರಕ್ಕೆ ಚಾಲನೆ ನೀಡಿದೆ. ಇಂಡಿಯನ್‌ 2 ಸಿನಿಮಾದ ಮೊದಲ ಹಾಡು ಬಿಡುಗಡೆ ಮಾಡಲಾಗಿದೆ. ಇಂಡಿಯನ್‌ 2 ಸಿನಿಮಾದ ಸೌರಾ ಎಂಬ ಹಾಡು ಅನಾವರಣಗೊಂಡಿದೆ. ಕುದುರೆ ಏರಿ ಬರುವ ಸೇನಾಪತಿ ಸಾಹಸ ಕಥೆಯನ್ನು ವರ್ಣಿಸುವ ಈ ಹಾಡಿಗೆ ಸುದ್ದಲ ಅಶೋಕ್‌ ತೇಜ ಸಾಹಿತ್ಯ ಬರೆದಿದ್ದಾರೆ.

Join Our Whatsapp Group

ರಿತೇಶ್‌ ಜಿ ರಾವ್‌ ಮತ್ತು ಶೃತಿಕಾ ಸಮುದ್ರಾ ಸೌರಾ ಹಾಡಿಗೆ ಧ್ವನಿಯಾಗಿದ್ದಾರೆ. ಬ್ರಿಟಿಷರಿಗೆ ಸಿಂಹಸ್ವಪ್ನ ವಾಗಿದ್ದ ಸೇನಾಪತಿಯಾಗಿ ಕಮಲ್‌ ಹಾಸನ್‌ ನಟಿಸಿದ್ದು, ಅನಿರುದ್ಧ್ ಹಾಡಿಗೆ ಟ್ಯೂನ್‌ ಹಾಕಿದ್ದಾರೆ.

ಇಂಡಿಯನ್‌ 1 ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆಯನ್ನು ಒಳಗೊಂಡಿತ್ತು. ಈ ಸಿನಿಮಾದಲ್ಲಿ ಕಮಲ್‌ ಹಾಸನ್‌ ದ್ವಿಪಾತ್ರ ನಿಭಾಯಿಸಿದ್ದರು. ಇಂಡಿಯನ್‌ 2: 1996 ರ ಹಿಟ್‌ ಚಲನಚಿತ್ರ ಇಂಡಿಯನ್‌ ಮುಂದುವರಿದ ಭಾಗವಾಗಿದ್ದು, ಇದರಲ್ಲೂ ಕಮಲ್‌ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗ್ತಿದೆ.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸೇನಾ ಪಾತಿಯು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆ ಈ ಸಿನಿಮಾದಲ್ಲಿದ್ದು, ಕಮಲ್‌ ಹಾಸನ್‌ ಜೊತೆಗೆ ಸಿದ್ಧಾರ್ಥ, ರಕುಲ್‌ ಪ್ರೀತ್‌ ಸಿಂಗ್‌ ಮುಂತಾದವರು ನಟಿಸಿದ್ದಾರೆ. ಅನಿರುದ್ಧ್ ರವಿಚಂದರ್‌ ಸಂಗೀತ ಜವಾಬ್ದಾರಿ ಹೊತ್ತಿದ್ದು, ರವಿವರ್ಮನ್‌, ರತ್ನವೇಲು ಛಾಯಾಗ್ರಹಣ ಮಾಡಿದ್ದಾರೆ.

ಹಿಂದಿನ ಲೇಖನಕೆರೆಗೆ ಈಜಲು ಹೋದ ಬಾಲಕ ನೀರುಪಾಲು: ಮುಗಿಲು ಮುಟ್ಟಿದ ಪೋಷಕರ ಆಕ್ರಂದನ
ಮುಂದಿನ ಲೇಖನಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ: ಹೊತ್ತಿ ಉರಿದ ಅಂಗಡಿ, ಲಕ್ಷಾಂತರ ರೂ. ನಷ್ಟ