ಮೈಸೂರು : ಮೈಸೂರಿನ ರಮ್ಮನಹಳ್ಳಿ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿ ಮಹೇಶ್, ಕಂದಾಯ ನಿರೀಕ್ಷಕ ಮಂಜುನಾಥ್ ಅಮಾನತ್ತಿಗೆ ಆಗ್ರಹಿಸಿ ಕರ್ನಾಟಕ ಕ್ರಾಂತಿ ಸೇನೆ ಪ್ರತಿಭಟನೆ ನಡೆಸಿತು.

ರಮ್ಮನಹಳ್ಳಿ ಪಟ್ಟಣ ಪಂಚಾಯಿತಿಗೆ ಒಳಪಡುವ ಸರ್ಕಾರಿ ಜಾಗಗಳನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಜಮೀನುಗಳನ್ನು ಖಾತೆ ಮಾಡಿಕೊಡುವುದಲ್ಲದೆ ಅಮಾಯಕ ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡದೆ ಈ ಇಬ್ಬರು ಅಧಿಕಾರಿಗಳು ಜನಗಳಿಗೆ ತೊಂದರೆ ಕೊಡುತ್ತಿದ್ದು ಈ ಕೂಡಲೇ ಅಮಾನತು ಮಾಡಬೇಕೆಂದು ಆಗ್ರಹಿಸಿದರು.
ಅದು ಅಲ್ಲದೆ ಸಾರ್ವಜನಿಕರು ಸರಿಯಾದ ದಾಖಲೆಗಳನ್ನು ನೀಡಿದರು ಸಾವಿರಾರು ರೂಪಾಯಿ ಕೊಟ್ಟು ತಮ್ಮ ಜಾಗಕ್ಕೆ ಖಾತೆ ಮಾಡಿಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಹೇಳಿ ಕರ್ನಾಟಕ ಕ್ರಾಂತಿ ಸೇನೆ ಪ್ರತಿಭಟನೆ ನಡೆಸಿ ಈ ಕೂಡಲೇ ಸರ್ಕಾರವು ಇವರಿಬ್ಬರನ್ನು ಅಮಾನತು ಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಸರ್ಕಾರಿ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿದ್ದಾರೆ ಎಂದು ಆರೋಪ ಮಾಡಿ ಉದ್ದೇಶಪೂರ್ವಕವಾಗಿ ಅಧಿಕಾರಿಗಳ ಹೆಸರನ್ನು ಹಾಳು ಮಾಡುವ ನಿಟ್ಟಿನಲ್ಲಿ ರಮ್ಮನಹಳ್ಳಿ ಪಟ್ಟಣ ಪಂಚಾಯತ್ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದವರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಮೈಸೂರಿನ ರಮ್ಮನಹಳ್ಳಿ ಪಟ್ಟಾ ಪಂಚಾಯತ್ ಎದುರು ಆರ್ಐ ಮಂಜುನಾಥ್ ಮತ್ತು ಮುಖ್ಯಾಧಿಕಾರಿ ಮಹೇಶ್ ವಿರುದ್ದ ದುರುದ್ದೇಶ ಪೂರ್ವಕವಾಗಿ ಕೆಲ ವ್ಯಕ್ತಿಗಳು ಪ್ರತಿಭಟನೆ ನಡೆಸುತ್ತಿದ್ರು.

ಇದನ್ನು ತಿಳಿದು ಸ್ಥಳಕ್ಕಾಗಮಿಸಿದ ಸ್ಥಳೀಯರು ಪ್ರತಿಭಟನಾಕಾರರನ್ನು ತರಾಟೆಗೆ ತೆಗೆದುಕೊಂಡು ಈಗಾಗಲೇ ನೀವು ಆರೋಪ ಮಾಡುತ್ತಿರುವ ಜಮೀನಿನ ಖಾತೆ ರದ್ದಾಗಿದೆ. ಅಲ್ಲದೇ ಇದರಲ್ಲಿ ಪಟ್ಟಣ ಪಂಚಾಯತಿ ಅಧಿಕಾರಿಗಳ ತಪ್ಪಿಲ್ಲ ಇಲ್ಲಿ ತಪ್ಪಾಗಿರುವುದು ರೆವಿನ್ಯೂ ಇಲಾಖೆ ಅಧಿಕಾರಿಗಳಿಂದ ಎಂದು ತಹಶೀಲ್ದಾರ್ ಕಚೇರಿಯಿಂದ ವರದಿ ಬಂದಿದೆ.
ಅಲ್ಲದೇ ಈ ಇಬ್ಬರು ಅಧಿಕಾರಿಗಳು ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸುಖಾಸುಮ್ಮನೇ ನೀವು ಹೊರಗಿನಿಂದ ಬಂದು ಅಧಿಕಾರಿಗಳ ಹೆಸರನ್ನು ಕೆಡಿಸುವ ಕೆಲಸ ಮಾಡುತ್ತೀದ್ದೀರಾ ಎಂದು ತರಾಟೆಗೆ ತೆಗೆದುಕೊಂಡರು. ಈ ವೇಳೆ ಸ್ಥಳೀಯರಾದ ಜೋಗಿ ಸಿದ್ದಯ್ಯ,ಹಿದಾಯತ್ ಅಲಿ ಖಾನ್, ಮಂಜುನಾಥ್, ರವಿಕುಮಾರ್, ಚೆನ್ನಯ್ಯ ಸೇರಿದಂತೆ ಹಲವರು ಹಾಜರಿದ್ರು.















