ಮನೆ ರಾಜ್ಯ ಕಸ್ತೂರಿ ರಂಗನ್ ವರದಿ: ಪರಿಸರ ಸೂಕ್ಷ್ಮ ವಲಯದಲ್ಲಿನ ಮೈಸೂರು ಜಿಲ್ಲೆ ಹಳ್ಳಿಗಳ ಮಾಹಿತಿ

ಕಸ್ತೂರಿ ರಂಗನ್ ವರದಿ: ಪರಿಸರ ಸೂಕ್ಷ್ಮ ವಲಯದಲ್ಲಿನ ಮೈಸೂರು ಜಿಲ್ಲೆ ಹಳ್ಳಿಗಳ ಮಾಹಿತಿ

0

ಬೆಂಗಳೂರು(Bengaluru): ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ ಪಶ್ಚಿಮ ಘಟ್ಟದಲ್ಲಿ ಪರಿಸರ ಸೂಕ್ಷ್ಮ ವಲಯ ಗುರುತಿಸುವ ಕೇಂದ್ರ ಪರಿಸರ ಇಲಾಖೆಯ ಐದನೇ ಅಧಿಸೂಚನೆಯನ್ನು ಹೊರಡಿಸಿದೆ.

ಕೇಂದ್ರ ಪರಿಸರ ಇಲಾಖೆ ಜುಲೈ 4ರಂದು ಅಧಿಸೂಚನೆಯನ್ನು ಹೊರಡಿಸಿ ಆಕ್ಷೇಪಣೆಯನ್ನು ಸಲ್ಲಿಸಲು 60 ದಿನಗಳ ಕಾಲಾವಕಾಶವನ್ನು ನೀಡಿದೆ. ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ ಹೊರಡಿಸಿರುವ ಅಧಿಸೂಚನೆಯನ್ನು ಅನುಸರಿಸಿದರೆ ರಾಜ್ಯದ ಕರಾವಳಿ, ಮಲೆನಾಡು, ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ವಾಸಿಸುವ ಜನ ಜೀವನವೇ ಅಸ್ತವ್ಯಸ್ತವಾಗಿಬಿಡುತ್ತದೆ.

ಕೇಂದ್ರ ಸರ್ಕಾರಕ್ಕೆ ಗಾಡ್ಗಿಳ್ ವರದಿಯು 2010ರಲ್ಲಿ ಸಲ್ಲಿಕೆಯಾಗಿತ್ತು. ಗಾಡ್ಗಿಳ್ ವರದಿಯಲ್ಲಿ ಅವೈಜ್ಞಾನಿಕವಾಗಿದೆ ಎಂದು ಇಸ್ರೋ ವಿಜ್ಞಾನಿ ಕಸ್ತೂರಿ ರಂಗನ್ ನೇತೃತ್ವದ ಸಮಿತಿಯನ್ನು ರಚನೆಯನ್ನು ಮಾಡಲಾಗಿತ್ತು. ಕಸ್ತೂರಿ ರಂಗನ್ ಸಮಿತಿಯ ಅಧ್ಯಯನವನ್ನು ಮಾಡಿ ಪಶ್ಚಿಮ ಘಟ್ಟವನ್ನು ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸಲು ವರದಿಯನ್ನು ನೀಡಿತ್ತು. ಅದರಂತೆ ಗುಜರಾತ್ ತಮಿಳುನಾಡು, ಮಹಾರಾಷ್ಟ್ರ, ಗೋವಾ, ಕರ್‍ನಾಟಕದ ವ್ಯಾಪ್ತಿಯನ್ನು ಹೇಳಿತ್ತು. ಅದರಂತೆ ರಾಜ್ಯದ 20668 ಚದರ ಕಿ.ಮೀ ಒಳಗೊಂಡಿದೆ.

ಸೂಕ್ಷ್ಮ ವಲಯದಲ್ಲಿರುವ ಮೈಸೂರು ಜಿಲ್ಲೆಯ ಹಳ್ಳಿಗಳು

ಮೈಸೂರಿನ ಹೆಗ್ಗಡದೇವನಕೋಟೆ ತಾಲೂಕಿನ ಹಳ್ಳಿಗಳಿಗೆ ಅಪಾಯ ರಾಜೇಗೌಡನದೊಡ್ಡಿ, ಸೋಲ್ಲಾಪುರ, ಗೌಡಿ ಮಾಚನಾಯಕನಹಳ್ಳಿ, ಸಿದ್ದಾಪುರ, ಮೇಟಿಗುಪ್ಪೆ ಫಾರೆಸ್ಟ್, ಮೇಟಿಗುಪ್ಪೆ ಕಾವಲ್, ಅಮಣಿ ಜಂಗಲ್, ಹೀರೆಹಳ್ಳಿ, ಹೊನ್ನೂರುಕುಪ್ಪೆ, ಮಂಜೇಗೌಡನಹಳ್ಳಿ, ಕಾಕನಕೋಟೆ ಫಾರೆಸ್ಟ್, ಕೊಣನಲತ್ತೂರು, ಎನ್.ಬೆಳತ್ತೂರ್, ನಿಸ್ನಾ, ನಿಸ್ನಾ, ಬೇಗೂರು, ಕೆಂಚನಹಳ್ಳಿ, ಹರಿಯಾಳಪುರ, ಕಿತ್ತೂರು(ತೆರಣಿ ಮಂಟಿ), ಶಂಭುಗೌಡನಹಳ್ಳಿ, ಕಟವಾಲು, ತೆಣೆಕಲ್ಲು, ಲಕ್ಷ್ಮಣಪುರ, ಹರಿಯಾಳಪುರ, ಬೈರಾಪುರ, ಬೇಗೂರ್ ಜಂಗಲ್, ಹುರಳಿಪುರ, ಬಡಗ, ಕಂದಲಿಕೆ, ಅಲಾಲಹಳ್ಳಿ, ಸೀಗೇವಾಡಿ, ಬಂಕವಾಡಿ, ಆನೆಮಲ, ಹೊಸಕೋಟೆ, ಚನ್ನಗುಂಡಿ, ನೆಟ್ಕಲ್ ಹುಂಡಿ, ಕಾಕನಕೋಟೆ ಫಾರೆಸ್ಟ್, ಹೊಸಕೋಟೆ, ಕಾಡೆಗಡ್ಡೆ, ಹೀರೆಹಳ್ಳಿ, ಮೊಲೆಯೂರು, ಬೇರಂಬಾಡಿ ಸ್ಟೇಟ್ ಫಾರೆಸ್ಟ್, ಬೇಗೂರು, ಚೌಡಹಳ್ಳಿ, ಇನೂರ್ ಮಾರಿಗುಡಿ ಜಂಗಲ್, ಕುರ್‍ನಾಗಾಳ, ಚಿಕ್ಕ ಕುಂದೂರ್, ಅಂಕೂಪುರ, ಬರಗಿ, ಅಲನಹಳ್ಳಿ, ವಡೇರಹಳ್ಳಿ, ಹೀರೆಹಳ್ಳಿ ಎಂಬ ಹಳ್ಳಿಗಳು ಪಶ್ಚಿಮ ಘಟ್ಟದಲ್ಲಿ ಪರಿಸರ ಸೂಕ್ಷ್ಮ ವಲಯದಲ್ಲಿ ಗುರುತಿಸಿರುವ ಕಾರಣ ಈ ಹಳ್ಳಿಗಳಿಗೆ ಅಪಾಯ ಎದುರಾಗಲಿದೆ.

ಹಿಂದಿನ ಲೇಖನರಾಷ್ಟ್ರೀಯ ಹಸಿರು ನ್ಯಾಯಮಂಡಳಿ:  ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ
ಮುಂದಿನ ಲೇಖನಮೇಲುಕೋಟೆ ಚೆಲುವನಾರಾಯಣ ಸ್ವಾಮಿಯ 4ನೇ ತಿರುನಾಳ್ ಶ್ರೀಕೃಷ್ಣ ರಾಜಮುಡಿ ಉತ್ಸವ