ಮನೆ ರಾಜಕೀಯ ಗಣರಾಜ್ಯೋತ್ಸವ ವೇಳೆ ತಲೆಕೆಳಗಾಗಿ ರಾಷ್ಟ್ರಧ್ವಜ ಹಾರಿಸಿದ ಜಿಲ್ಲಾ ಉಸ್ತುವಾರಿ ಸಚಿವ

ಗಣರಾಜ್ಯೋತ್ಸವ ವೇಳೆ ತಲೆಕೆಳಗಾಗಿ ರಾಷ್ಟ್ರಧ್ವಜ ಹಾರಿಸಿದ ಜಿಲ್ಲಾ ಉಸ್ತುವಾರಿ ಸಚಿವ

0

ಕಾಸರಗೋಡು: 73ನೇ ಗಣರಾಜ್ಯೋತ್ಸವ ಆಚರಣೆ ಸಮಾರಂಭದಲ್ಲಿ ಕಾಸರಗೋಡು ಜಿಲ್ಲಾ ಉಸ್ತುವಾರಿ ಸಚಿವ ಅಹಮ್ಮದ್ ದೇವರಕೋವಿಲ್ ಅವರು ತಲೆಕೆಳಗಾಗಿ ರಾಷ್ಟ್ರಧ್ವಜವನ್ನು ಹಾರಿಸಿರುವ ಘಟನೆ ವರದಿಯಾಗಿದೆ.

ಕಾಸರಗೋಡು ಜಿಲ್ಲಾ ಉಸ್ತುವಾರಿ ಸಚಿವ ಅಹಮ್ಮದ್ ದೇವರಕೋವಿಲ್ ಧ್ವಜಾರೋಹಣ ಮಾಡಿದ ತಕ್ಷಣ, ಬಂದರು ಮತ್ತು ಜಿಲ್ಲಾ ಪೊಲೀಸ್ ಮುಖ್ಯಸ್ಥ ವೈಭವ್ ಸಕ್ಸೇನಾ, ಪ್ರಭಾರಿ ಜಿಲ್ಲಾಧಿಕಾರಿ ಎಡಿಎಂ ಎ ಕೆ ರಾಮೇಂದ್ರನ್ ಮತ್ತು ಇತರ ಉನ್ನತ ಪೊಲೀಸ್ ಅಧಿಕಾರಿಗಳು ಗೌರವ ವಂದನೆ ಸಲ್ಲಿಸಿದರು. ಕರ್ತವ್ಯ ನಿರತ ಪತ್ರಕರ್ತರು ತಪ್ಪನ್ನು ಗಮನಿಸಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಜಿಲ್ಲಾ ಪೊಲೀಸ್ ಮುಖ್ಯಸ್ಥ ಸಕ್ಸೇನಾ ಅವರು ಕಣ್ಣೂರು ರೇಂಜ್ ಡೆಪ್ಯುಟಿ ಇನ್ಸ್ ಪೆಕ್ಟರ್ ಜನರಲ್ ರಾಹುಲ್ ಆರ್ ನಾಯರ್ ಅವರಿಗೆ ಘಟನೆಯ ಬಗ್ಗೆ ವರದಿ ಸಲ್ಲಿಸಲಿದ್ದಾರೆ.

ಸಮಾರಂಭದಲ್ಲಿ ಕಾಸರಗೋಡು ಸಂಸದ ರಾಜಮೋಹನ್ ಉನ್ನಿತಾನ್, ಶಾಸಕರಾದ ಎ ಕೆ ಎಂ ಅಶ್ರಫ್, ಎನ್ ಎ ನೆಲ್ಲಿಕ್ಕುನ್ನು, ಸಿ ಎಚ್ ಕುಂಞಂಬು, ಎಂ ರಾಜಗೋಪಾಲನ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉಪಸ್ಥಿತರಿದ್ದರು. ಚಂದೇರ ಪೊಲೀಸ್ ಇನ್ಸ್ ಪೆಕ್ಟರ್ ನಾರಾಯಣನ್ ನೇತೃತ್ವದಲ್ಲಿ ವನಿತಾ ಪೊಲೀಸ್, ಸಶಸ್ತ್ರ ಪೊಲೀಸ್, ಅಬಕಾರಿ ಇಲಾಖೆ ಪರೇಡ್ ನಡೆಯಿತು.

ಹಿಂದಿನ ಲೇಖನಮಂಡ್ಯ ಪತ್ರಕರ್ತರ ಸಂಘಕ್ಕೆ 5 ಲಕ್ಷ ರೂ.: ದಿನೇಶ್ ಗೂಳಿಗೌಡ
ಮುಂದಿನ ಲೇಖನಕರಾಮುವಿವಿಗೆ ಯುಜಿಸಿಯಿಂದ ಅತ್ಯುತ್ತಮ ಶ್ರೇಣಿ ಕುರಿತು ವಿದ್ಯಾಶಂಕರ್ ಅವರಿಂದ ತಪ್ಪು ಮಾಹಿತಿ: ಆರೋಪ