ಇನ್ಸುಲಿನ್ ಇಂಜೆಕ್ಷನ್ ಬಳಕೆ ವಹಿಸಬೇಕಾದ ಜಾಗೃತೆಗಳು:-
★ಇನ್ಸುಲಿನ್ ನನ್ನು ತಂಪಾದ ಜಾಗದಲ್ಲಿಡಬೇಕು ರೆಫ್ರಿಜಟರ್ ನಲ್ಲಿ ಮಂಜುಗಡ್ಡೆ ತಯಾರಾಗುವ Freezer ಜಾಗದಲ್ಲಿ ಮಾತ್ರ ಇಡಬಾರದು
★ ಕೆಸರಿನಂತೆ Muddy ಕಾಣುವ, ಹರಳು ಹರಳಾಗಿ ಕಾಣುವ ಇನ್ಸುಲಿನ್ ಕೊಳ್ಳಬಾರದು.
★ ಶರೀರದಲ್ಲಿ ಇಂಜೆಕ್ಷನ್ ಕೊಡುವ ಜಾಗವನ್ನು ಆಗಾಗ ಬದಲಾಯಿಸುತ್ತಿರಬೇಕು.
★ ಊಟಕ್ಕೆ 20 30 ನಿಮಿಷಗಳ ಕಾಲ ಮುನ್ನ ಇಂಜೆಕ್ಷನ್ ತೆಗೆದುಕೊಳ್ಳಬೇಕು.
★ಇಂಜೆಕ್ಷನ್ ಬಾಟಲಿಯ ಮೇಲಿನ ಲೇಬಲ್ ಪರೀಕ್ಷಿಸಬೇಕು Units of Insulin Per ml ಹಾಗೆಯೇ ಸಿರಿಂಜಿನ ಮೇಲಿನ ಮಾರ್ಕುಗಳನ್ನು ಇನ್ಸುಲಿನ್ ಬಾಟಲಿಯ ಮೇಲಿನ Expiry Date ಕೂಡಾ ಗಮನಿಸಬೇಕು.
★ ಸ್ವಂತವಾಗಿ ಇಂಜೆಕ್ಷನ್ ಮಾಡಿಕೊಳ್ಳುವುದನ್ನು ಕಲಿಯಬೇಕು.ವಿವಿಧ ಸಮಯಗಳಲ್ಲಿ ನಿಮ್ಮ ಬ್ಲಡ್ ಗ್ಲೂಕೋಸನ್ನು ಪರೀಕ್ಷೆ ಮಾಡಿಕೊಳ್ಳುವ ವಿಧಾನವನ್ನೂ ಕಲಿಯಬೇಕು.
★ನೀವು ತೆಗೆದುಕೊಳ್ಳುವ ಇನ್ಸುಲಿನ್ ಡೋಸೇಜ್ ಷೆಡ್ಯೂಲಿಗೆ ಅನುಗುಣವಾಗಿ ನೀವು ಯಾವಾಗ ಊಟ ಮಾಡಬೇಕು. ನೀವು ಮಾಡಬೇಕಾದ ಉಳಿದ ಶಾರೀರಿಕ ಕೆಲಸಗಳು ಮೊದಲಾದವುಗಳು ಮಧ್ಯೆ ಸಮನ್ವಯವಿರಬೇಕು.ಒಂದು ಚಿಕ್ಕ ಡೈರಿಯನ್ನಿಡಬೇಕು.
ಇಂಜೆಕ್ಷನ್ ಹೇಗೆ ಮಾಡಬೇಕು
ನೀವು ತೆಗೆದುಕೊಳ್ಳಬೇಕಾದ ಪ್ರಮಾಣದಲ್ಲಿ ಡಾಕ್ಟರ್ ಸೂಚಿಸಿದ ರೀತಿಯಲ್ಲಿ ಸಿರಿಂಜಿನೊಳಗೆ ಇನ್ಸುಲಿನ್ ತೆಗೆದುಕೊಳ್ಳಬೇಕು.
★ ಇಂಜೆಕ್ಷನ್ ನಿಮ್ಮ ಶರೀರದ ಸ್ನಾಯುಗಳೊಳಕ್ಕೆ, ಇಲ್ಲವೇ ಕೊಬ್ಬಿರುವ ಭಾಗಕ್ಕೆ ಇಂಜೆಕ್ಟ್ ಮಾಡಿಕೊಳ್ಳಬಹುದು. ಸಾಮಾನ್ಯವಾಗಿ ಕೊಬ್ಬೂ ಇರುವ ಭಾಗದಲ್ಲಿ ತೆಗೆದುಕೊಳ್ಳುವುದು ಸುಲಭವಾಗಿರುತ್ತದೆ
★ಚಿತ್ರದಲ್ಲಿ ತೋರಿಸಿರುವಂತೆ ತೋಳುಗಳು, ತೊಡೆಗಳು,ಕಿಬ್ಬಟ್ಟೆ,ಪಿರ್ರೆಗಳು ಮೊದಲಾದ ಆ ಭಾಗಗಳಿಗೆ ಮಾಡಿಕೊಳ್ಳಬಹುದು. ಆ ಭಾಗದ ಚರ್ಮ ಗಡಸ್ಸುಗಟ್ಟದಂತಿರಲೂ ಆಗಿಂದಾಗ ಇಂಜೆಕ್ಷನ್ ಮಾಡುವ ಜಾಗವನ್ನು ಬದಲಾಯಿಸುತ್ತಿರಬೇಕು.
★ ಇಂಜೆಕ್ಷನ್ ಮಾಡಲಿರುವ ಭಾಗವನ್ನು ಆಲ್ಕೋಹಾಲ್ ನಲ್ಲಿ ಅದ್ದಿದ್ದ ಹತ್ತಿಯಿಂದ ಶುಭ್ರಗೊಳಿಸಬೇಕು.
★ ಹೆಬ್ಬಟ್ಟು, ಉಳಿದ ಬೆರಳುಗಳ ನಡುವಿ ಇಂಜೆಕ್ಷನ್ ಮಾಡಲಿರುವ ಭಾಗವನ್ನು ಹಿಡಿದುಕೊಳ್ಳಿ.
★ಪೆನ್ಸಿಲನ್ನು ಹಿಡಿದುಕೊಳ್ಳುವ ರೀತಿಯಲ್ಲಿ ಸಿರಿಂಜ್ ನ್ನು ಎರಡನೆಯ ಕೈ ಬೆರಳುಗಳ ನಡುವೆ ಹಿಡಿದುಕೊಂಡು ಸೂಜಿಯನ್ನು ನೆಟ್ಟಗೆ ಚರ್ಮದೊಳಕ್ಕೆ ಚುಚ್ಚಬೇಕು. ನಂತರ ಸಿರಂಜಿನ ಪ್ಲಂಜರನ್ನು ಕೆಳಕ್ಕೆ ಒತ್ತಬೇಕು.
★ಈಗ ಬೆರಳುಗಳ ಮಧ್ಯೆ ಹಿಡಿದಿರುವ ಚರ್ಮವನ್ನು ಬಿಟ್ಟು ಸಿರಂಜ್ ನ್ನು ಮೆಲೆಳೆಯಬೇಕು.
ನಿವಾರಣೆ
ಆರೋಗ್ಯವಾಗಿರುವೆವೆಂದು ಭಾವಿಸುತ್ತಾ ಆಗಿಂದಾಗ ತಕ್ಕ ಎಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿರುವ ಡಯಾಬಿಟಿಕ್ ಪೇಷಂಟ್ ಗಳಿಗೆ, ಕೀಟೋ ಅಸಿಡೋಸಿಸ್ ಉಂಟಾಗುವ ಅಪಾಯ ಬಹಳ ಕಡಿಮೆ ಇರುತ್ತದೆ
★ಆದರೆ ಮೇಲೆ ಹೇಳಿದಂತೆ ಸೋಂಕಿಗೆ ಗುರಿಯಾಗುವುದು,ಏನಾದರೂ ರೋಗಕ್ಕೆ ಈಡಾಗುಗವುದು, ಏಟುಗಳು ತಗಲುವುದು, ಮಾನಸಿಕ ಒತ್ತಡಗಳಿಗೆ ಗುರಿಯಾಗುವಂತಹ ಸಂದರ್ಭಗಳಲ್ಲಿ, ಸಾಮಾನ್ಯ ಡಯಾಬಿಟಿಕ್ ರೋಗಿಗಳು ಕೂಡಾ ಕೀಟೋ ಅಸಿಡೋಸಿಸ್ ಗೆ ಗುರಿಯಾಗುವ ಅಪಾಯವಿದೆ.
★ಇಂತಹ ಸಂದರ್ಭಗಳಲ್ಲಿ ಮೂತ್ರದಲ್ಲಿ ಗ್ಲುಕೋಸ್ ಕೀಟೋನ್ ಗಳು ಇವೆಯೇನೋ, ಎಂದು ಪರೀಕ್ಷೆ ಮಾಡಿಸಿಕೊಳ್ಳಬೇಕು. ಇವುಗಳ ಪ್ರಮಾಣ ಅಧಿಕವಾಗಿದ್ದರೆ ಕೂಡಲೇ ಡಾಕ್ಟರನ್ನು ಭೇಟಿಯಾಗಿ,ತೆಗೆದುಕೊಳ್ಳುತ್ತಿರುವ ಔಷಧಿಗಳಲ್ಲಿ ಇಲ್ಲಿವೆ ಚಿಕಿತ್ಸೆಯಲ್ಲಿ ಸೂಕ್ತ ಮಾರ್ಪಾಟುಗಳನ್ನು ಮಾಡಿಕೊಳ್ಳಬೇಕು.
ಚಿಕಿತ್ಸೆ
★ತೀವ್ರವಾದ ಕೀಟೋ ಅಸಿಡೋಸಿಸ್ ಬಹಳ ಅಪಾಯಕ್ಕೆಡೆ ಮಾಡಿಕೊಡುತ್ತದೆ. ಆಸ್ಪತ್ರೆಗೆ ಸೇರಿಕೊಂಡು ಡಾಕ್ಟರ್ ಉಸ್ತುವಾರಿಯಲ್ಲಿ ಚಿಕಿತ್ಸೆ ತೆಗೆದುಕೊಳ್ಳುವುದು ಬಹಳ ಅಗತ್ಯ.














