ಮನೆ ಅಪರಾಧ ಕೆ.ಆರ್.ನಗರ ಅಬಕಾರಿ ಇಲಾಖೆಯ ಸಿಬ್ಬಂದಿಯ ಮೇಲೆ ಹಲ್ಲೆ: ನಾಲ್ವರ ಬಂಧನ

ಕೆ.ಆರ್.ನಗರ ಅಬಕಾರಿ ಇಲಾಖೆಯ ಸಿಬ್ಬಂದಿಯ ಮೇಲೆ ಹಲ್ಲೆ: ನಾಲ್ವರ ಬಂಧನ

0

ಕೆ.ಆರ್.ನಗರ: ಪಟ್ಟಣದ ಅಬಕಾರಿ ಇಲಾಖೆಯ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ ಆರೋಪದಡಿ ನಾಲ್ವರನ್ನು ಬಂಧಿಸಿ ನ್ಯಾಯಾಂಗದ ವಶಕ್ಕೆ ನೀಡಲಾಗಿದೆ.

Join Our Whatsapp Group

ತಾಲೂಕಿನ ತಿಪ್ಪೂರು ಗ್ರಾಮದ ಬಳಿ ಅಕ್ರಮ ಮದ್ಯ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ೯-೦೦ ಗಂಟೆಯ ಸಮಯದಲ್ಲಿ ಇಲಾಖೆಯ ಸಿಬ್ಬಂದಿಗಳಾದ ಸಂತೋಷ್, ಸಂದೀಪ್, ಮಲ್ಲೇಶ್ ಮತ್ತು ಮಾಳಪ್ಪ ಅವರು ಸ್ಥಳಕೆ ಭೇಟಿ ನೀಡಿ ತಿಪ್ಪೂರು ಗ್ರಾಮದ ಸಂತೋಷ್ ಎಂಬುವವರ ಬೈಕ್ ತಪಾಸಣೆ ಮಾಡಲು ಮುಂದಾಗಿದ್ದಾರೆ.

ಈ ಸಂದರ್ಭದಲ್ಲಿ ಸಂತೋಷ್ ನನ್ನ ಬೈಕ್ ತಪಾಸಣೆ ಮಾಡಲು ನೀವು ಯಾರು ಎಂದು ಗಲಾಟೆ ಮಾಡಿದ ಸಮಯದಲ್ಲಿ ಆತನ ಬೈಕಿನಲ್ಲಿ ಅಕ್ರಮ ಮದ್ಯ ಇಲ್ಲದಿರುವುದು ಗೊತ್ತಾದ್ದರಿಂದ ಸಿಬ್ಬಂದಿ ಕೆ.ಆರ್.ನಗರಕ್ಕೆ ವಾಪಸ್ ಹೊರಟಿದ್ದಾರೆ.

ಈ ಸಂದರ್ಭದಲ್ಲಿ ಸಂತೋಷ್ ತನ್ನ ಸ್ನೇಹಿತರಾದ ರಘು, ಯಶ್ವಂತ್ ಮತ್ತು ಪ್ರಶಾಂತ್ ಎಂಬುವವರೊಡಗೂಡಿ ಅಬಕಾರಿ ಇಲಾಖೆಯ ನಾಲ್ವರು ಸಿಬ್ಬಂದಿಯನ್ನು ಹಿಂಬಾಲಿಸಿಕೊಂಡು ಬಂದು ಕಗ್ಗೆರೆ ಬಸ್ ನಿಲ್ದಾಣದ ಬಳಿ ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ.

ಈ ಸಂದರ್ಭದಲ್ಲಿ ಸಂತೋಷ್ ತೀವ್ರವಾಗಿ ಗಾಯಗೊಂಡಿದ್ದು, ಉಳಿದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆನಂತರ ಅವರನ್ನು ಕೂಡಲೇ ಕೆ.ಆರ್.ನಗರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತಲ್ಲದೆ ತೀವ್ರವಾಗಿ ಗಾಯಗೊಂಡಿದ್ದ ಅಬಕಾರಿ ಮುಖ್ಯಪೇದೆ ಸಂತೋಷ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸ್ ಇನ್ಸ್ಪೆಕ್ಟರ್ ಪಿ.ಪಿ.ಸಂತೋಷ್, ಪಿಎಸ್‌ಐ ಆರ್.ಧನರಾಜ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಯ ಸಂಬಂಧ ಸಂತೋಷ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡ ಪಟ್ಟಣದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗದ ವಶಕ್ಕೆ ನೀಡಿದ್ದಾರೆ.

ಹಿಂದಿನ ಲೇಖನಅಕ್ರಮ ಸಂಬಂಧ ಶಂಕೆ: ಚಾಕುವಿನಿಂದ ಪತ್ನಿಯ ಮೇಲೆ ಹಲ್ಲೆ ನಡೆಸಿದ ಪತಿ
ಮುಂದಿನ ಲೇಖನಫೋರ್ಬ್ಸ್ ನಿಯತಕಾಲಿಕ ಬಿಡುಗಡೆ: ಜಗತ್ತಿನ ಶ್ರೀಮಂತರ ಪಟ್ಟಿಗೆ ಭಾರತದಿಂದ 25 ಮಂದಿ ಸೇರ್ಪಡೆ