ಮನೆ ಅಪರಾಧ ವಿಜಯಪುರ: ಪ್ರೇಮ ವಿವಾಹವಾಗಿದ್ದ ನವ ದಂಪತಿ ನೇಣಿಗೆ ಶರಣು

ವಿಜಯಪುರ: ಪ್ರೇಮ ವಿವಾಹವಾಗಿದ್ದ ನವ ದಂಪತಿ ನೇಣಿಗೆ ಶರಣು

0

ವಿಜಯಪುರ: ಕೇವಲ ನಾಲ್ಕು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ದಂಪತಿ ನೇಣಿಗೆ ಶರಣಾಗಿರುವ ದುರಂತ ಘಟನೆ ನಗರದಲ್ಲಿ ಜರುಗಿದೆ.

Join Our Whatsapp Group

ನಗರದ ಸಿದ್ಧೇಶ್ವರ ಬಡಾವಣೆಯ ಮನೆಯಲ್ಲಿ ಮಂಗಳವಾರ ರಾತ್ರಿ ಮನೋಜಕುಮಾರ ಪೋಳ (30) ಹಾಗೂ ರಾಖಿ (23) ಎಂಬವರೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಜೋಡಿ.

ಮನೋಜ್ ಹಾಗೂ ರಾಖಿ ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ಮನೋಜ ತಾಯಿ ಭಾರತಿ ತಮ್ಮ ಮಗಳ ಊರಿಗೆ ಹೋಗಿದ್ದರು.‌ ಮಂಗಳವಾರ ರಾತ್ರಿ ಊಟ ಮಾಡಿದ ಬಳಿಕ ನವದಂಪತಿ ಸೀರೆಯಿಂದ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ.

ಬುಧವಾರ ಬೆಳಗ್ಗೆ ಭಾರತಿ ಮನೆಗೆ ಬಂದಾಗ ಮಗ-ಸೊಸೆ ಇಬ್ವರೂ ನೇಣಿಗೆ ಶರಣಾದ ಘಟನೆ ಕಂಡು ಕಂಗಾಲಾಗಿದ್ದಾರೆ. ನವದಂಪತಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಸುದ್ದಿ ತಿಳಿದ ಜಲನಗರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಹಿಂದಿನ ಲೇಖನಪ್ರಜ್ವಲ್ ರೇವಣ್ಣ ಡಿ ಕೆ ಶಿವಕುಮಾರ್ ಕೇಳಿ ವಿಡಿಯೋ ರೆಕಾರ್ಡ್​​ ಮಾಡಿಕೊಂಡ್ರಾ: ಸಚಿವ ಶರಣಬಸಪ್ಪ ದರ್ಶನಾಪುರ ಪ್ರಶ್ನೆ
ಮುಂದಿನ ಲೇಖನಬಹುಮತ ಇರುವ ಸರ್ಕಾರವನ್ನ ಬಿಜೆಪಿ ಅಭದ್ರ ಮಾಡಲ್ಲ: ಶಾಸಕ ಸುನಿಲ್ ಕುಮಾರ್