ಮನೆ ಸ್ಥಳೀಯ ಮೈಸೂರನಲ್ಲಿ ನಿಯಂತ್ರಣ ತಪ್ಪಿ, KSRTC ಬಸ್ ಪಲ್ಟಿ : 60 ಪ್ರಯಾಣಿಕರು ಬಚಾವ್

ಮೈಸೂರನಲ್ಲಿ ನಿಯಂತ್ರಣ ತಪ್ಪಿ, KSRTC ಬಸ್ ಪಲ್ಟಿ : 60 ಪ್ರಯಾಣಿಕರು ಬಚಾವ್

0

ಮೈಸೂರು : ಮೈಸೂರಲ್ಲಿ ಭಾರಿ ದುರಂತ ಒಂದು ತಪ್ಪಿದ್ದು, ಮಾದೇಗೌಡನಹುಂಡಿ ಬಳಿ ಕೆಎಸ್ಆರ್ಟಿಸಿ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನ ಮಾದೇಗೌಡನಹುಂಡಿಯಲ್ಲಿ ಈ ಒಂದು ಅಪಘಾತ ಸಂಭವಿಸಿದೆ.

ಚಾಲಕನ ನಿಯಂತ್ರಣ ತಪ್ಪಿ ಕೆಎಸ್ಆರ್ಟಿಸಿ ಬಸ್ ರಸ್ತೆ ಬದಿಯ ಜಮೀನಿಗೆ ಉರುಳಿದೆ. ಬಸ್ ಚಾಲಕ ಸೇರಿದಂತೆ ಹಲವು ಪ್ರಯಾಣಿಕರಿಗೆ ಗಂಭೀರವಾದ ಗಾಯಗಳಾಗಿದ್ದು, ಗಾಯಗೊಂಡ ಪ್ರಯಾಣಿಕರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. KSRTC ಬಸ್ ನಲ್ಲಿದ್ದ 60 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಅಪಘಾತದ ಕುರಿತಂತೆ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.