ಮನೆ ಮನರಂಜನೆ ಡಿ.16ಕ್ಕೆ ತೆರೆಗೆ ಬರಲಿದೆ ದುಬಾರಿ ಸಿನಿಮಾ “ಅವತಾರ್-2′

ಡಿ.16ಕ್ಕೆ ತೆರೆಗೆ ಬರಲಿದೆ ದುಬಾರಿ ಸಿನಿಮಾ “ಅವತಾರ್-2′

0

ನವದೆಹಲಿ(Newdelhi): ಡಿ.16ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಲಿರುವ “ಅವತಾರ್- ದ ವೇ ಆಫ್ ವಾಟರ್’. ಅದರ ನಿರ್ಮಾಣ ವೆಚ್ಚವೇ 3,351 ಕೋಟಿ ರೂ. ಆರಂಭದಲ್ಲಿ ಅದರ ವೆಚ್ಚ 2,555 ಕೋಟಿ ರೂ. ಎಂದು ಅಂದಾಜು ಮಾಡಲಾಗಿತ್ತು.

ಹೀಗಾಗಿ, ಹಾಲಿವುಡ್’ನ ನಿರ್ಮಾಪಕ ಜೇಮ್ಸ್ ಕ್ಯಾಮರೂನ್ ಅವರು ನಿರ್ದೇಶಿಸಿದ ಸಿನಿಮಾವೇ ಜಗತ್ತಿನಲ್ಲಿ ಇದುವರೆಗೆ ನಿರ್ಮಾಣಗೊಂಡ ಸಿನಿಮಾ ಎಂದು ಹಲವು ರೀತಿಯ ವಿಶ್ಲೇಷಣೆಗಳು ನಡೆದಿವೆ.

ಇನ್ನು ದೇಶಕ್ಕೆ ಸಂಬಂಧಿಸಿದಂತೆ ಹೇಳುವುದಿದ್ದರೆ, 3 ಸಾವಿರ ಸಿನಿಮಾ ಪರದೆಗಳಲ್ಲಿ “ಅವತಾರ್-2′ ನೋಡಲು ಲಭ್ಯವಾಗಲಿದೆ. ಜತೆಗೆ ಬಾಕ್ಸ್ ಆಫೀಸ್ ಗಳಿಕೆಯನ್ನೂ ಮೀರಿಸಲಿದೆ ಎಂಬ ಲೆಕ್ಕಾಚಾರ ನಡೆದಿದೆ. ಇತ್ತೀಚೆಗೆ ತೆರೆಕಂಡ “ಅವೇಂಜರ್ಸ್: ಎಂಡ್’ಗೇಮ್’ ಎಂಬ ಸಿನಿಮಾ ಬಿಡುಗಡೆಯಾಗಿದ್ದ ಮೊದಲ ದಿನ ದೇಶದ ಮಾರುಕಟ್ಟೆಯಲ್ಲಿ 53 ಕೋಟಿ ರೂ. ಗಳಿಸಿತ್ತು. ಒಟ್ಟಾರೆಯಾಗಿ ಅದು 370 ಕೋಟಿ ರೂ.ಗಳನ್ನು ಗಲ್ಲಾ ಪೆಟ್ಟಿಗೆಯಲ್ಲಿ ಬಾಚಿಕೊಂಡಿತ್ತು.

ಅದ್ಧೂರಿಯಲ್ಲಿ ಅದ್ಧೂರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಸಿನಿಮಾ ಜಗತ್ತಿನ ಮಾರುಕಟ್ಟೆಯಿಂದ ಲಾಭ ಪಡೆದುಕೊಳ್ಳಬಹುದೇ ಎಂಬ ಚರ್ಚೆಗಳೂ ಶುರುವಾಗಿವೆ. 2019ರಲ್ಲಿ ತೆರೆ ಕಂಡಿದ್ದ ಸಿನಿಮಾದ ಮೊದಲ ಭಾಗ 18,957 ಕೋಟಿ ರೂ. ಬಾಚಿಕೊಂಡಿತ್ತು.

ದೇಶದಲ್ಲಿ ಟ್ವೆಂಟಿಯತ್ ಸೆಂಚುರಿ ಸ್ಟುಡಿಯೋಸ್ ಇಂಡಿಯಾ ಸಿನಿಮಾದ ಹಂಚಿಕೆ ಹೊಣೆ ಹೊತ್ತುಕೊಂಡಿದೆ. ದೇಶದಲ್ಲಿ ಈಗಾಗಲೇ 2.4 ಲಕ್ಷ ಟಿಕೆಟ್ ಮಾರಾಟ ಮಾಡಿ 8 ಕೋಟಿ ರೂ. ಮೊತ್ತ ಸಂಗ್ರಹಿಸಲಾಗಿದೆ.

ಸಿನಿಮಾವನ್ನೂ ಕನ್ನಡದಲ್ಲೂ ಬಿಡುಗಡೆ ಮಾಡಬೇಕು ಎಂದು ಜಾಲತಾಣಗಳಲ್ಲಿ ಒತ್ತಾಯ ನಡೆದಿತ್ತು. ಅದಕ್ಕೆ ಮನ್ನಣೆ ನೀಡಿರುವ ಟ್ವೆಂಟಿಯತ್ ಸೆಂಚುರಿ ಸ್ಟುಡಿಯೋಸ್ ಇಂಡಿಯಾ ಸಿನಿಮಾವನ್ನು ಕನ್ನಡದಲ್ಲಿ ಡಬ್ ಮಾಡಿದೆ.

ಹಿಂದಿನ ಲೇಖನನವದೆಹಲಿ: ಬಾಲಕಿ ಮೇಲೆ ಆ್ಯಸಿಡ್ ದಾಳಿ- ಓರ್ವನ ಬಂಧನ
ಮುಂದಿನ ಲೇಖನಜನವರಿ ಅಂತ್ಯಕ್ಕೆ ಎಲ್ಲಾ 438 ನಮ್ಮ ಕ್ಲಿನಿಕ್‌’ಗಳು ಕಾರ್ಯಾರಂಭ: ಸಚಿವ ಡಾ.ಕೆ.ಸುಧಾಕರ್‌