ಮನೆ ರಾಜ್ಯ ಕುಣಿಗಲ್: ಮನೆ ಬೀಗ ಒಡೆದು ನಗದು ಕಳ್ಳತನ

ಕುಣಿಗಲ್: ಮನೆ ಬೀಗ ಒಡೆದು ನಗದು ಕಳ್ಳತನ

0
ಸಾಂದರ್ಭಿಕ ಚಿತ್ರ

ಕುಣಿಗಲ್: ತಾಲೂಕಿನ ಹುಲಿಯೂರುದುರ್ಗ ಹೋಬಳಿ ಆರ್.ಬ್ಯಾಡರಹಳ್ಳಿ ಗ್ರಾಮದ ಮನೆಯೊಂದರ ಬಾಗಿಲು ಹಾಗೂ ಬೀರುವಿನ ಬೀಗ ಹೊಡೆದು ಬೀರುವಿನಲ್ಲಿದ್ದ ನಗದು ಹಣ ಕಳವು ಮಾಡಿ ಕಳ್ಳರು ಪರಾರಿಯಾಗಿರುವ ಘಟನೆ ನಡೆದಿದೆ.

ಗ್ರಾಮದ ಚಂದ್ರಮ್ಮ ಹಣ ಕಳೆದುಕೊಂಡ ವೃದ್ದ ಮಹಿಳೆ.

ಚಂದ್ರಮ್ಮ ಆನಾರೋಗ್ಯದಿಂದ ಬಳಲುತ್ತಿದ್ದು, ಅವರನ್ನು ಆಕೆಯ ಮಗಳು ಮಂಗಳಗೌರಮ್ಮ ಮದ್ದೂರು ಆಸ್ಪತ್ರೆಗೆ ಕಳೆದ ಮೂರು ದಿನಗಳಿಂದ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದರು.

ಈ ಸಂದರ್ಭ ಮನೆಯಲ್ಲಿ ಯಾರು ಇಲ್ಲದ ವೇಳೆ ದುಷ್ಕರ್ಮಿಗಳು ಮನೆಯ ಬೀಗ ಹೊಡೆದು ಒಳಗೆ ಪ್ರವೇಶಿಸಿ ಗಾಡ್ರೇಜ್ ಬೀರುವನ್ನು ಯಾವುದೋ ಆಯುಧ ಬಳಸಿ ಬೀರುವಿನಲ್ಲಿದ್ದ 26 ಸಾವಿರ ರೂ. ನಗದು ಹಣ ಕಳವು ಮಾಡಿ ಹೋಗಿದ್ದಾರೆ.

ಮನೆಯ ಬಾಗಿಲು ಹೊಡೆದಿರುವುದು ಗಮನಿಸಿದ ಗ್ರಾಮಸ್ಥರು ಮಂಗಳಗೌರಮ್ಮನಿಗೆ ವಿಷಯ ತಿಳಿಸಿದ್ದಾರೆ. ಮಂಗಳಗೌರಮ್ಮ ಹುಲಿಯೂರುದುರ್ಗ ಪೊಲೀಸರಿಗೆ ದೂರು ನೀಡಿದ್ದು, ಪಿಎಸ್‌ ಐ ಸುನೀಲ್‌ ಕುಮಾರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಹಿಂದಿನ ಲೇಖನಪ್ರಶ್ನೆ ಪತ್ರಿಕೆ ಮಾರಾಟ: ಮರು ಪರೀಕ್ಷೆಗೆ ನಡೆಸಲು ಕರಾಮುವಿವಿ ನಿರ್ಧಾರ
ಮುಂದಿನ ಲೇಖನ9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ