ಮನೆ ಸ್ಥಳೀಯ ಪ್ರಶ್ನೆ ಪತ್ರಿಕೆ ಮಾರಾಟ: ಮರು ಪರೀಕ್ಷೆಗೆ ನಡೆಸಲು ಕರಾಮುವಿವಿ ನಿರ್ಧಾರ

ಪ್ರಶ್ನೆ ಪತ್ರಿಕೆ ಮಾರಾಟ: ಮರು ಪರೀಕ್ಷೆಗೆ ನಡೆಸಲು ಕರಾಮುವಿವಿ ನಿರ್ಧಾರ

0

ಮೈಸೂರು: ಪ್ರಶ್ನೆ ಪತ್ರಿಕೆ ಮಾರಾಟವಾದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಬಿಕಾಂ ಕಂಪ್ಯೂಟರ್ ಇನ್ ಬ್ಯುಸಿನೆಸ್ ಪರೀಕ್ಷೆಯನ್ನು ಮತ್ತೊಮ್ಮೆ ನಡೆಸಲು ನಿರ್ಧರಿಸಿದೆ. ವಿಶ್ವವಿದ್ಯಾಲಯ ಸದ್ಯದರಲ್ಲೇ ಮರು ಪರೀಕ್ಷೆ ದಿನಾಂಕ ಪ್ರಕಟಿಸಲಿದೆ.

ಪ್ರಶ್ನೆ ಪತ್ರಿಕೆ ಮಾರಾಟ ಪ್ರಕರಣದಲ್ಲಿ ಜಯಲಕ್ಷ್ಮಿಪುರಂ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ನವೀನ್, ಮುರುಳೀಧರ್ ಬಂಧಿತ ಆರೋಪಿಗಳು.

ಪ್ರಶ್ನೆ ಪತ್ರಿಕೆ ಮಾರಾಟ

ಪರೀಕ್ಷೆಗೆ ಒಂದು ದಿನ ಮೊದಲೇ ವಿಶ್ವವಿದ್ಯಾಲಯದ ಬಿಕಾಂನ ಕಂಪ್ಯೂಟರ್ ಇನ್ ಬಿಸಿನೆಸ್ ವಿಷಯದ ಪ್ರಶ್ನೆ ಪತ್ರಿಕೆ ಮಾರಾಟವಾಗಿತ್ತು. ಕೆಎಸ್‌ ಓಯು ಮಂಗಳೂರು ಕೇಂದ್ರದ ಸಿಬ್ಬಂದಿ 2000 ರೂ.ಗೆ ಮಾರಾಟ ಮಾಡಿದ್ದಾರೆ.

ಆರೋಪಿಗಳನ್ನು ಪರಿಶೀಲನೆ ಮಾಡಲು ಹಣ ನೀಡಿ ಪ್ರಶ್ನೆ ಪತ್ರಿಕೆ ಖರೀದಿಸಿದ್ದು, ಪರೀಕ್ಷೆ ದಿನ ನೀಡಿದ ಪ್ರಶ್ನೆ ಪತ್ರಿಕೆ ಹಾಗೂ ಮಾರಾಟವಾದ ಪ್ರಶ್ನೆ ಪತ್ರಿಕೆ ಎರಡು ಒಂದೇ ಆಗಿದ್ದವು. ಈ ಬಗ್ಗೆ ವಿದ್ಯಾರ್ಥಿ ಚಂದು.ಹೆಚ್.ಎಸ್. ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಹಿಂದಿನ ಲೇಖನಪ್ರತಿ ಶನಿವಾರ ಪಕ್ಷಾತೀತವಾಗಿ ಶಾಸಕರ ಭೇಟಿಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ
ಮುಂದಿನ ಲೇಖನಕುಣಿಗಲ್: ಮನೆ ಬೀಗ ಒಡೆದು ನಗದು ಕಳ್ಳತನ