ಮನೆ ಮನೆ ಮದ್ದು ಕುರು

ಕುರು

0

1. ಕುರು ಆದವರು ಬಿಲ್ವಪತ್ರೆ ಬೇರನ್ನು ನುಣ್ಣಗೆ ಎರೆದು ನಿಂಬೆರಸವನ್ನು ಬೆರೆಸಿ ಕುರುವಿಗೆ ಲೇಪಿಸುವುದರಿಂದ ಕುರು ಬೇಗನೆ  ಹಣ್ಣಾಗಿ ಒಡೆಯುವುದು. ಹಾಗೂ ಕೀವು ಸೋರಿ ಹೋಗಿ  ಗುಣ ಹೊಂದುವುದು.

Join Our Whatsapp Group

2. ಬೆಣಚುಕಲ್ಲು ತಂದು ಕುಟ್ಟಿ ಬಟ್ಟೆಯಲ್ಲಿ ಶೋಧಿಸಿ,ಆ ಹಿಟ್ಟನ್ನು ಬೆಣ್ಣೆಯಲ್ಲಿ ಕಲಸಿ,ಕುರುವಿನ ಮೇಲೆ ಇಟ್ಟು ಬಟ್ಟೆ ಕಟ್ಟಿದರೆ ಒಡೆದು ಹೋಗುತ್ತದೆ.

3. ನರ ಚುಂಡೇಸೊಪ್ಪಿನ ಕುಡಿ,ಮಿಮಾರಿಸೊಪ್ಪು,ಹೆಗ್ಗಡ ಜನ ಸೊಪ್ಪು, ದತ್ತೂರಿ ಕುಡಿ, ಎಕ್ಕಧ ಕುಡಿಗಳನ್ನು ಅರೆದು ಒಂದೊಂದೇ ಸೊಪ್ಪನ್ನು ಅರೆದು ಕುರುಗಳಿಗೆ ಕಟ್ಟಿದರೆ ಕುರು ಒಡೆದು ಹೋಗುತ್ತದೆ.

4. ಕಪ್ಪುಕುರು ಹಿಮ್ಮಡಿ ಸುಳಿಗಳಿಗೆ ಈಜಿ ಎಲೆ ಹಾಕಿ ಕಟ್ಟಿದರೆ ಒಡೆಯುತ್ತದೆ.

5. ಎಕ್ಕದ ಎಲೆ ಹಿಂದೆ ಕಟ್ಟಿದರೆ ಒಡೆಯುತ್ತಾಮ ಮುಂದೆ ಕಟ್ಟಿದರೆ ವಾಸಿಯಾಗುತ್ತದೆ.

ಕಾಲು ಅಂಗೈ ದೇಹ ವಿಪರೀತ ಬೇವರುವುದು :-

1. ಬದನೆ ಹೋಳುಗಳ ಜೊತೆಗೆ ಗಸಗಸೆ ರುಬ್ಬಿ ಕೈಗೆ ಕಾಲಿಗೆ, ಮೈಗೆ ಹಚ್ಚಿಕೊಂಡು ಬೆಳಿಗ್ಗೆ ಸ್ನಾನ ಮಾಡುತ್ತಾ ಇದೇ ರೀತಿ ನಿಲ್ಲುವವರೆಗೂ ಮಾಡುವುದರಿಂದ ಗುಣವಾಗುತ್ತದೆ.

2. ನೆಲ್ಲಿರಸ ರಾತ್ರಿ  ಕೈಕಾಲು ದೇಹಗಳಿಗೆ ಸವರಿ, ಬೆಳಿಗ್ಗೆ  ಸ್ಥಾನ ಮಾಡಬೇಕು. ಇದನ್ನು ಬೇವರು ನಿಲುವವರೆಗೂ ಮಾಡಬೇಕು.

3. ಅಳಲೆಕಾಯಿಯ ಚೂರ್ಣವನ್ನು ನೀರಿನಲ್ಲಿ ನೆನೆಸಿ ಕೈ,ಕಾಲು,ಮೈಗೆ ಚೆನ್ನಾಗಿ ಲೇಪಿಸಿ, ಬೆಳಿಗ್ಗೆ ಸ್ನಾನ ಮಾಡುವುದರಿಂದ ಬೆವರುವುದು ನಿಂತು ಹೋಗುತ್ತದೆ.

ಹಿಂದಿನ ಲೇಖನಕನ್ನಡ ನಾಡಿನ ಈ ನೆಲ
ಮುಂದಿನ ಲೇಖನಪರಿವೃತ್ತ ಜಾನುಶ್ರೀರ್ಷಾಸನ