ಮನೆ ಉದ್ಯೋಗ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿಯಲ್ಲಿ ಉದ್ಯೋಗಾವಕಾಶ

ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿಯಲ್ಲಿ ಉದ್ಯೋಗಾವಕಾಶ

0

ನ್ಯಾಷನಲ್ ಫಿಶೆರೀಸ್ ಡೆವಲಪ್ಮೆಂಟ್ ಬೋರ್ಡ್ (NFDB), ಹೈದೆರಾಬಾದ್, ಇಲ್ಲಿನ ಹಣಕಾಸು ವಿಭಾಗ, ಆಡಳಿತ ವಿಭಾಗ, ತಾಂತ್ರಿಕ ವಿಭಾಗಗಳಲ್ಲಿ ಅಗತ್ಯ ಇರುವ ಎಕ್ಸಿಕ್ಯೂಟಿವ್ ಅಸಿಸ್ಟಂಟ್ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಿ. ಒಟ್ಟು 7 ಗ್ರೂಪ್ ಬಿ ಹುದ್ದೆಗಳನ್ನು ಮಂಡಳಿ ಭರ್ತಿ ಮಾಡಲು ಮುಂದಾಗಿದೆ.

ಹುದ್ದೆಗಳ ವಿವರ

ಎಕ್ಸಿಕ್ಯೂಟಿವ್ ಅಸಿಸ್ಟಂಟ್ (ತಾಂತ್ರಿಕ): 6

ಎಕ್ಸಿಕ್ಯೂಟಿವ್ ಅಸಿಸ್ಟಂಟ್ (ಫೈನಾನ್ಸ್ ಅಂಡ್ ಅಡ್ಮಿನಿಸ್ಟ್ರೇಷನ್ ) : 1

ವಿದ್ಯಾರ್ಹತೆ

ಎಕ್ಸಿಕ್ಯೂಟಿವ್ ಅಸಿಸ್ಟಂಟ್ (ತಾಂತ್ರಿಕ): ಫಿಶೆರೀಸ್ ಸೈನ್ಸ್ / ಅಕ್ವಾಕಲ್ಚರ್ / ಮರಿಕಲ್ಚರ್ / ಮರಿನ್ ಬಯೋಲಜಿ / ಇಂಡಸ್ಟ್ರಿಯಲ್ ಫಿಶೆರೀಸ್ / ಜುವಾಲಜಿ / ಇಂಡಸ್ಟ್ರಿಯಲ್ ಫಿಶೆರೀಸ್ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.

ಎಕ್ಸಿಕ್ಯೂಟಿವ್ ಅಸಿಸ್ಟಂಟ್ (ಫೈನಾನ್ಸ್ ಅಂಡ್ ಅಡ್ಮಿನಿಸ್ಟ್ರೇಷನ್ ) : ಕಲೆ / ಕಾಮರ್ಸ್ / ಸ್ಟ್ಯಾಟಿಸ್ಟಿಕ್ಸ್ / ಸೈನ್ಸ್ / ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ / ಮ್ಯಾನೇಜ್ಮೆಂಟ್ / ಕಂಪ್ಯೂಟರ್ ಅಪ್ಲಿಕೇಶನ್ ವಿಷಯಗಳಲ್ಲಿ ಡಿಗ್ರಿ ಪಾಸ್ ಮಾಡಿರಬೇಕು.

ಈ ಹುದ್ದೆಗಳಿಗೆ ಎಂಪ್ಲಾಯ್ಮೆಂಟ್ ನ್ಯೂಸ್ ನಲ್ಲಿ ನೇಮಕಾತಿ ಪ್ರಕಟಣೆ ಜಾಹಿರಾತು ಪ್ರಕಟವಾದಾಗಿನಿಂದ 30 ದಿನಗಳೊಳಗಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಅರ್ಜಿ ಸಲ್ಲಿಸಬೇಕಾದ ವಿಳಾಸ : Chief Executive, National Fisheries Development Board, Pillar No. 235, PVNR Expressway, SVPNPA Post, Rajendra Nagar, Hyderabad, 500052.

ಅರ್ಜಿ ಶುಲ್ಕ ರೂ.500 ಅನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಖಾತೆ ಸಂಖ್ಯೆ -110311100001510 ( ಎಪಿ ಸೆಕ್ರೇಟರಿಯಟ್ ಬ್ರ್ಯಾಂಚ್, ಹೈದೆರಾಬಾದ್, ಐಎಫ್ಎಸ್ ಕೋಡ್ – UBIN0811033) ಡಿಡಿ ತೆಗೆದು, ಅರ್ಜಿ ರಶೀದಿಯನ್ನು ನಿಗದಿತ ಅರ್ಜಿ ನಮೂನೆ ಜತೆ ಲಗತ್ತಿಸಬೇಕು.

ಎಸ್ಸಿ /ಎಸ್ಟಿ / ಅಂಕವಿಕಲ / ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಅರ್ಜಿ ಸಲ್ಲಿಸಲು ನಿಗದಿತ ಕೊನೆ ದಿನಾಂಕಕ್ಕೆ 30 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಒಬಿಸಿ, ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ವೇತನ ಶ್ರೇಣಿ ರೂ.9300-34800. (Level 6 of 7th CPC).

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಿ ನೇಮಕ ಮಾಡಲಾಗುತ್ತದೆ. ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಕೆಳಗಿನ ನೋಟಿಫಿಕೇಶನ್ ಲಿಂಕ್ ಅನ್ನು ಕ್ಲಿಕ್ ಮಾಡಿರಿ.

ಹಿಂದಿನ ಲೇಖನಈ ರಾಶಿಯವರನ್ನು ಇಂಪ್ರೆಸ್ ಮಾಡೋದು ತುಂಬಾ ಕಷ್ಟ..!
ಮುಂದಿನ ಲೇಖನಸ್ಟೀಲ್ ಮ್ಯಾನ್ ಆಫ್ ಇಂಡಿಯಾ ಖ್ಯಾತಿಯ ಜಮ್ಶೆಡ್‌ ಜೆ ಇರಾನಿ ನಿಧನ