ಮನೆ ಅಪರಾಧ ಕುಷ್ಟಗಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಗೆ ಮನೆ ಭಸ್ಮ

ಕುಷ್ಟಗಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಗೆ ಮನೆ ಭಸ್ಮ

0

ಕುಷ್ಟಗಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಗೆ ಮನೆಯೊಂದು ಭಸ್ಮವಾದ ಘಟನೆ ತಾಲೂಕಿನ ಮಿಟ್ಟಲಕೋಡ್ ಗ್ರಾಮದಲ್ಲಿ ನಡೆದಿದೆ.

ಎಚ್ಚರಪ್ಪ ಮಾನಪ್ಪ ಬಡಿಗೇರ ಅವರಿಗೆ ಸೇರಿದ ಮನೆ ಇದಾಗಿದೆ.

ಮನೆಯಲ್ಲಿ ಎಂದಿನಂತೆ ಮಲಗಿದ್ದ ವೇಳೆ ಸ್ವಿಚ್ ಬೋರ್ಡ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು, ಮನೆಯಲ್ಲಿ ದಟ್ಟ ಹೊಗೆ ವ್ಯಾಪಿಸುತ್ತಿದ್ದಂತೆ ಮನೆಯ ಸದಸ್ಯರು ಹೊರಗೆ ದಾವಿಸಿ ಅಪಾಯದಿಂದ ಪಾರಾಗಿದ್ದಾರೆ.

ಮರದ ಮಡಗಿ ಮನೆಯಾಗಿದ್ದರಿಂದ ಬೆಂಕಿಯ ತೀವ್ರತೆ ಹೆಚ್ಚಿದ್ದು, ಮನೆಯಲ್ಲಿ ವಸ್ತುಗಳು ಸುಟ್ಟು ಕರಕಲಾಗಿದೆ. ದವಸ-ಧಾನ್ಯ, ಬಟ್ಟೆ ಬರೆ, ಪಾತ್ರೆ ಪಗಡೆ, ಒಡವೆಗಳು ಬೆಂಕಿಗೆ ಆಹುತಿಯಾಗಿದೆ.

ಮನೆಗೆ ಬೆಂಕಿ ವ್ಯಾಪಿಸುತ್ತಿದ್ದಂತೆ ಅಕ್ಕ-ಪಕ್ಕದವರು ಬಕೇಟ್, ಕೊಡಗಳಲ್ಲಿ ನೀರು ತುಂಬಿ ನಂದಿಸಲು ವಿಫಲ ಯತ್ನ ನಡೆಸಿದರು‌.

ಕುಷ್ಟಗಿ ಅಗ್ನಿಶಾಮಕ ವಾಹನ ಆಗಮಿಸಿ ನಂದಿಸಿದರಾದರೂ ಅಷ್ಟರಲ್ಲಿ ಮನೆ ಬಹುತೇಕ ಸುಟ್ಟು ಕರಕಲಾಗಿತ್ತು.