ಮನೆ ಅಪರಾಧ ಚಾಮರಾಜನಗರ: ರಸ್ತೆಯಲ್ಲಿ ಚಿರತೆ ಮೃತದೇಹ ಪತ್ತೆ: ವಾಹನ ಡಿಕ್ಕಿ ಸಾಧ್ಯತೆ

ಚಾಮರಾಜನಗರ: ರಸ್ತೆಯಲ್ಲಿ ಚಿರತೆ ಮೃತದೇಹ ಪತ್ತೆ: ವಾಹನ ಡಿಕ್ಕಿ ಸಾಧ್ಯತೆ

0

ಚಾಮರಾಜನಗರ: ಮಂಗಳವಾರ ಬೆಳಿಗ್ಗೆ ಗಂಡು ಚಿರತೆಯೊಂದರ ಮೃತದೇಹ ತಾಲ್ಲೂಕಿನ ಗುರುಮಲ್ಲಪ್ಪನದೊಡ್ಡಿ ಗ್ರಾಮದ ರಸ್ತೆಯಲ್ಲಿ ಪತ್ತೆಯಾಗಿದ್ದು, ಸೋಮವಾರ ರಾತ್ರಿ ವಾಹನ ಡಿಕ್ಕಿ ಹೊಡೆದಿರುವ ಅನುಮಾನ ವ್ಯಕ್ತವಾಗಿದೆ.

ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುವ ಲೊಕ್ಕನಹಳ್ಳಿಯಿಂದ ತಮಿಳುನಾಡಿನ ಸತ್ಯ ಮಂಗಲಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಚಿರತೆಯ ಮೃತದೇಹ ಪತ್ತೆಯಾಗಿದೆ.

ಮಂಗಳವಾರ ಮುಂಜಾನೆ ರಸ್ತೆಯಲ್ಲಿ ಚಿರತೆ ಸತ್ತು ಬಿದ್ದಿರುವುದನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಬಿಆರ್‌ಟಿಯ ಬೈಲೂರು ವಲಯದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬೈಲೂರು ವನ್ಯಜೀವಿ ವಲಯ ಅರಣ್ಯಾಧಿಕಾರಿ ಶಿವರಾಮು, ಚಿರತೆ ರಸ್ತೆಯಲ್ಲಿ ಬಿದ್ದಿರುವುದರಿಂದ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವಂತೆ ಕಾಣಿಸುತ್ತಿದೆ. ಆದರೆ ಚಿರತೆಯ ದೇಹದಲ್ಲಿ ಗಾಯವಾಗಲಿ, ರಕ್ತಸ್ರಾವವಾಗಲಿ ಆಗಿಲ್ಲ.‌ ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ತಿಳಿಸಿದ್ದಾರೆ

ಹಿಂದಿನ ಲೇಖನಭಾರತ ಹೆಮ್ಮೆ ಪಡುವಂತೆ ಮಾಡಿದ್ದೀರಿ: ಪ್ರಜ್ಞಾನಂದಗೆ ಸಚಿನ್ ತೆಂಡೂಲ್ಕರ್ ಶ್ಲಾಘನೆ
ಮುಂದಿನ ಲೇಖನಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ; 12 ಆರೋಪಿಗಳು  ವಶಕ್ಕೆ