1. ಬೇವಿನ ಎಣ್ಣೆಯಲ್ಲಿ ಅಳಲೆ ಕಾಯಿಯ ಚೂರ್ಣ ಬೆರೆಸಿ ಕುಷ್ಟರೋಗದ ಭಾಗಕ್ಕೆ ಹಚ್ಚುತ್ತಾ ಬಂದರೆ ಗುಣವಾಗುವುದು.
2. ಕುಷ್ಟರೋಗವು ಒಂದುಸಾರಿ ಬಂದಿತೆಂದರೆ ಅದು ನರಗಳನ್ನು ಹಾಳುಮಾಡಿ ಸ್ವರ್ಶಜ್ಞಾನವನ್ನು ಹಾಳು ಮಾಡುವುದರಿಂದ ಅಳಲೆ ಕಾಯಿಯ ಚೂರ್ಣವನ್ನು ಬಿಡದೆ ಗುಣವಾಗುವವರೆಗೂ ಸೇವಿಸುತ್ತದೆ ಇರಬೇಕು.
ಭಲ್ಲತಃ ಲೇಹ್ಯವನ್ನು ಬೆಳಿಗ್ಗೆ ಒಂದು ತೋಲ ಸಾಯಂಕಾಲ ಒಂದು ತೋಲದಂತೆ ಸೇವಿಸಿ,ತೆಂಗಿನಕಾಯಿ ಹಾಲಿನಲ್ಲಿ ಅನ್ನ ಸೇವೆ ಮಾಡುತ್ತಾ ಸಕ್ಕರೆ ಬೆಲ್ಲ ಸೇವಿಸಬಹುದು. ಹೆಸರು ಕಾಳಿನ ಸಾರು ಪಲ್ಯ,ಮೊಳೆತ ಕಾಳು ಸೇವಿಸುತ್ತಾ ಕಾರವನ್ನು ಸೇವನೆ ಮಾಡದೆ ಹಸಿ ತರಕಾರಿ,ಎಲ್ಲಾ ವಿಧವಾದ ಹಣ್ಣುಗಳು ಸೇವಿಸುತ್ತಾ ಬರಲು ಕುಷ್ಟರೋಗ ನಿರ್ವಹಣೆ ಆಗುವುದು. ತುಪ್ಪದಲ್ಲಿ ತಯಾರಿಸಿದ ಗೇರು ಎಣ್ಣೆಯನ್ನು ಕುಷ್ಟರೋಗದ ಹುಣ್ಣು ಆಗಿರುವ ಕಡೆ ಹಚ್ಚಬೇಕು.
ಗರುಡ ಫಲಾ ಎಂದು ಹೇಳುವ ಮೂಲಿಕೆಯೇ ಜಂಗಲಿ ಬಾದಾಮಿ. ಇದರ ಬೀಜ ಮತ್ತು ಬೀಜದ ತೈಲ ಉಪಯೋಗಿಸಬೇಕು. ಚಾಲಮುಗರಾ ಎಣ್ಣೆ ಎಂದು ತಯಾರಿಸುತ್ತಾರೆ. ಚರ್ಮರೋಗಗಳನ್ನು ಗುಣಪಡಿಸುತ್ತದೆ. ಇದರಲ್ಲಿ ಎರಡು ತರಹವಿದ್ದು. ಶ್ವೇತ ಕುಷ್ಠ, ನರಕುಷ್ಠಗಳಾಗಿವೆ. ಹಿಂದೆ ತಿಳಿಸಿದುದೆಲ್ಲಾ ನರಕ್ಕೆ ಸಂಬಂಧಪಟ್ಟ ಕುಷ್ಠವಾಗಿರುತ್ತದೆ.