ಮನೆ ಆಟೋ ಮೊಬೈಲ್ ಭಾರತದಲ್ಲಿ ಅತಿಹೆಚ್ಚು ಮಾರಾಟವಾದ ಕಾರುಗಳು ಯಾವುವು?: ಇಲ್ಲಿದೆ ಪಟ್ಟಿ

ಭಾರತದಲ್ಲಿ ಅತಿಹೆಚ್ಚು ಮಾರಾಟವಾದ ಕಾರುಗಳು ಯಾವುವು?: ಇಲ್ಲಿದೆ ಪಟ್ಟಿ

0

ಮಾರುತಿ ಸುಜುಕಿ ವ್ಯಾಗನ್ ಆರ್: 2022ರಲ್ಲಿ 2ಲಕ್ಷಕ್ಕೂ ಹೆಚ್ಚು ಕಾರುಗಳ ಮಾರಾಟವಾಗಿದ್ದು, ಭಾರತದ ಬೆಸ್ಟ್ ಸೆಲ್ಲಿಂಗ್ ಕಾರ್ ಎನಿಸಿದೆ. ಮಾರುತಿ ಸುಜುಕಿ ಸಂಸ್ಥೆ ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆ. ಕಾರುಗಳ ಮಾರಾಟ ಸಂಖ್ಯೆಯಲ್ಲಿ ಅದು ನಂಬರ್ ಒನ್. ಅದರ ವ್ಯಾಗನ್ ಅರ್ ಕಾರು ಸತತ ಎರಡು ವರ್ಷ ಕಾಲ ಭಾರತದಲ್ಲಿ ಅತಿಹೆಚ್ಚು ಮಾರಾಟವಾದ ಕಾರೆನಿಸಿದೆ. ಭಾರತದಲ್ಲಿ ಈವರೆಗೂ ವ್ಯಾಗನ್ ಅರ್ ಕಾರು 30 ಲಕ್ಷ ಸಂಖ್ಯೆಯಲ್ಲಿ ಸೇಲ್ ಆಗಿದೆ. ಈ ಮೂಲಕ ಭಾರತದ ಕಾರು ಮಾರುಕಟ್ಟೆಗೆ ವ್ಯಾಗನ್ ಆರ್ ಕಿಂಗ್ ಎನಿಸಿದೆ. ಜನರ ಅಭಿರುಚಿಗೆ ಅನುಗುಣವಾಗಿ ಕಾಲಕಾಲಕ್ಕೆ ವಿನ್ಯಾಸ ಬದಲಿಸುತ್ತಾ ಬರುತ್ತಿರುವ ವ್ಯಾಗನ್ ಆರ್ ಬೆಲೆಯೂ ಕಡಿಮೆ ಇರುವುದರಿಂದ ಮಧ್ಯಮವರ್ಗದವರಲ್ಲಿ ಬಹಳ ಬೇಡಿಕೆ ಪಡೆದಿದೆ.

Join Our Whatsapp Group

ಮಾರುತಿ ಸುಜುಕಿ ಸ್ವಿಫ್ಟ್: 1.7 ಲಕ್ಷ ಕಾರುಗಳ ಮಾರಾಟವಾಗಿದೆ. ಸ್ವಿಫ್ಟ್ ಕೂಡ ಕಡಿಮೆ ಬಜೆಟ್​ನ ಕಾರನ್ನು ಕೊಳ್ಳುವ ಭಾರತೀಯರಿಗೆ ಫೇವರಿಟ್ ಕಾರ್ ಎನಿಸಿದೆ.

ಮಾರುತಿ ಸುಜುಕಿ ಬಲೇನೋ: 1.5 ಲಕ್ಷ ಕಾರುಗಳ ಮಾರಾಟವಾಗಿದೆ. ಈ ಹ್ಯಾಚ್​ಬ್ಯಾಕ್ ಕಾರು ನವೀನ ವಿನ್ಯಾಸದೊಂದಿಗೆ ಕಳೆದ ಒಂದೆರಡು ವರ್ಷದಿಂದಲೂ ಗ್ರಾಹಕರನ್ನು ಸೆಳೆಯುತ್ತಿದೆ.

ಟಾಟಾ ನೆಕ್ಸನ್: 1.5 ಲಕ್ಷ ಕಾರುಗಳ ಮಾರಾಟವಾಗಿದೆ. ಎಸ್​ಯುವಿ ಕಾರುಗಳನ್ನು ಬಯಸುವವರಿಗೆ ಟಾಟಾ ನೆಕ್ಸಾನ್ ಫೇವರಿಟ್ ಎನಿಸಿರುವುದು ಅದರ ಕಾರುಗಳ ಮಾರಾಟ ಸಂಖ್ಯೆಯಿಂದಲೇ ತಿಳಿಯಬಹುದು.

ಮಾರುತಿ ಸುಜುಕಿ ಡಿಜೈರ್ : 1.4 ಲಕ್ಷ ಕಾರುಗಳ ಮಾರಾಟವಾಗಿದೆ. ಸೆಡಾನ್ ಕಾರಾದ ಇದು ತನ್ನ ಲುಕ್​ನಿಂದಲೇ ಗಮನ ಸೆಳೆಯುತ್ತದೆ. ಎಸ್​ಯುವಿ ಕಾರುಗಳ ಪೈಪೋಟಿ ಮಧ್ಯೆಯೂ ಡಿಜೈರ್ ತನ್ನ ಬೇಡಿಕೆ ಉಳಿಸಿಕೊಂಡಿರುವುದು ಗಮನಾರ್ಹ.

ಮಾರುತಿ ಸುಜುಕಿ ಆಲ್ಟೋ: 1.4 ಲಕ್ಷ ಕಾರುಗಳ ಮಾರಾಟವಾಗಿದೆ. ಅತ್ಯಂತ ಕಡಿಮೆ ಬೆಲೆಯ ಹ್ಯಾಚ್​ಬ್ಯಾಕ್ ಕಾರೆನಿಸಿರುವ ಆಲ್ಟೋ ಮೈಲೇಜ್​ನಲ್ಲಿ ಸೂಪರ್.

ಹ್ಯುಂಡೇ ಕ್ರೆಟಾ: 1.3 ಲಕ್ಷ ಕಾರುಗಳ ಮಾರಾಟವಾಗಿದೆ. ಇದು ಬಿಡುಗಡೆ ಆದಾಗಿನಿಂದಲೂ ಹ್ಯುಂಡೈಗೆ ಸೂಪರ್ ಹಿಟ್ ಐಟಂ ಎನಿಸಿದೆ. ಹ್ಯುಂಡೈ ಐ20 ಕಾರನ್ನೂ ಇದು ಮೀರಿಸಿದೆ.

ಮಾರುತಿ ಸುಜುಕಿ ಎರ್ಟಿಗಾ: 1.15 ಲಕ್ಷ ಕಾರುಗಳ ಮಾರಾಟವಾಗಿದೆ. ಇದರ ಪ್ರಬಲ ಎಂಜಿನ್, ಕ್ಯಾಬಿನ್ ಸ್ಪೇಸ್ ಇತ್ಯಾದಿ ಅಂಶಗಳು ಜನರ ಗಮನ ಸೆಳೆಯುತ್ತವೆ. ಇನ್ನೋವಾ ಕೊಳ್ಳಲು ಸಾಧ್ಯವಿಲ್ಲದ ಜನರು ಎರ್ಟಿಗಾ ಕಡೆ ವಾಲುವುದುಂಟು.

ಮಾರುತಿ ವಿಟಾರ ಬ್ರೆಜ್ಜಾ : 1.15ಲಕ್ಷ ಕಾರುಗಳ ಮಾರಾಟ. ಇದರ ಪವರ್ ಮತ್ತು ಲುಕ್ ಅಮೋಘ ಎನಿಸಿದೆ.

ಟಾಟಾ ಪಂಚ್: 2022ರಲ್ಲಿ 1.15 ಲಕ್ಷ ಕಾರುಗಳ ಮಾರಾಟ. ಲಾಂಚ್ ಆಗಿ ಒಂದೇ ವರ್ಷದಲ್ಲಿ ಟಾಟಾ ಪಂಚ್ ಬೆಸ್ಟ್ ಸೆಲ್ಲರ್ ಪಟ್ಟಿಗೆ ಸೇರಿರುವುದು ಗಮನಾರ್ಹ. ಎಸ್​ಯುವಿ ರೀತಿಯ ಲುಕ್ ಹಾಗೂ ಅಗ್ಗದ ಬೆಲೆ ಟಾಟಾ ಪಂಚ್ ಕಾರುಗಳ ಮಾರಾಟ ಸುಗಮಗೊಳಿಸಿದೆ.

ಮಾರುತಿ ಸುಜುಕಿ ಈಕೋ: 1 ಲಕ್ಷ ಕಾರುಗಳ ಮಾರಾಟ. ಇದು ಟ್ರಾಸ್​ಪೋರ್ಟ್ ವಲಯದಲ್ಲಿ ಬಹಳ ಜನಪ್ರಿಯವಾಗಿರುವ ಕಾರು. ಮೈಲೇಜ್ ಸೂಪರ್ ಆಗಿದೆ. ಬೆಲೆಯೂ ಹೊರೆ ಎನಿಸುವುದಿಲ್ಲ. ಹೀಗಾಗಿ, ವರ್ಷಕ್ಕೆ ಲಕ್ಷದಷ್ಟು ಕಾರುಗಳು ಮಾರಾಟವಾಗುತ್ತವೆ.

ಇನ್ನು ಹ್ಯುಂಡೈ ಐ10 ನಿಯೋಸ್, ಹ್ಯೂಂಡೇ ವೆನ್ಯೂ, ಮಹೀಂದ್ರ ಬೊಲೆರೋ ಮತ್ತು ಕಿಯಾ ಸೆಲ್ಟೋಸ್ ಕಾರುಗಳು ಟಾಪ್-15ನಲ್ಲಿರುವ ಇತರ ಕಾರುಗಳಾಗಿವೆ.

ಹಿಂದಿನ ಲೇಖನಇಂದಿನ ರಾಶಿ ಭವಿಷ್ಯ
ಮುಂದಿನ ಲೇಖನಶಾರುಖ್ ಖಾನ್ ನೀಡಿದ 300 ರೂ ಜೋಪಾನವಾಗಿಟ್ಟಿರುವ ಪ್ರಿಯಾಮಣಿ