ಬದುಕು ಬದಲಾಗಲು ಕಾಲ ಬೇಕು,
ಹಸಿವು ಕಸುವಿನಲಿ ಮೀಯ ಬೇಕು,
ಒಲುಮೆ ಚಿಲುಮೆಯ ಜಾಲ ಬೇಕು,
ಪರೀಕ್ಷೆ ನಿರೀಕ್ಷೆಯಲಿ ಬೇಯ ಬೇಕು.
ಒಳಗಿನ ಚೈತನ್ಯದ ಜೊತೆಗೆ,
ಹೊರಗಣ ಕಾರುಣ್ಯ ಸಂಗಮಿಸಿ
ಸಮೀಕರಿಸಿದರಷ್ಟೇ ಸತ್ವವೆಲ್ಲ ತ
ತ್ವವಾಗಿ ಮಾನ್ಯವಾಗಬಲ್ಲುದು.
ಪ್ರತಿಭೆ ಯೋಗ್ಯತೆಯ ಒಡನೆ
ಪರಿಶ್ರಮ ಯೋಗಗಳು ಮೇಳೈಸಿ
ಝೇಂಕರಿಸಿದರಷ್ಟೇ ಬದುಕೆಲ್ಲ ಬೆಳಕಾಗಿ
ಧನ್ಯವಾಗಬಲ್ಲುದು.
- ಎ.ಎನ್.ಆರ್
Saval TV on YouTube