ಹೊರಗಣ ಕತ್ತಲಿಗಿಂತ
ಒಳಗಣ ಕತ್ತಲು
ಬೆಳಕಿಗೆ ಬಲು ಕೇಡು.
ಅರಿವೆಯ ಬೆತ್ತಲೆಗಿಂತ
ಅರಿವಿನ ಬೆತ್ತಲೆ,
ಬದುಕಿಗೆ ನಾಚಿಕೆಗೇಡು.
ಬಣ್ಣಗಳಿಲ್ಲದ ಜಾಗದಲ್ಲಿ
ಸವೆಸಬಹುದು ಬದುಕು,
ಬೆಳಕಿಲ್ಲದ ಜಾಗದಲ್ಲಿ
ಬದುಕಲಾಗದು ಕ್ಷಣಕು.
ನಂಬಿಕೆಗಳಿಲ್ಲದ ಮನಸು
ಭಯಭೀತಿಗೆ ಕಾರಣ,
ಭರವಸೆಗಳಿಲ್ಲದ ಕನಸು
ಅಶಾಂತಿಗೆ ಪ್ರೇರಣ.
ಬೆಳಕು ಹಿಡಿದವರ
ಹೃನ್ಮನಗಳ ಒಳಗೆಲ್ಲಾ
ಹೊಂಗಿರಣ ಮಾಲೆ.
ಬೆಂಕಿ ಹಿಡಿದವರ
ಕಣಕಣಗಳ ತುಂಬೆಲ್ಲಾ
ಧಗಧಗಿಸುವ ಜ್ವಾಲೆ.
- ಎ.ಎನ್.ಆರ್