ಮನೆ ಕಾನೂನು ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ನಿವೃತ್ತಿ ಘೋಷಣೆ

ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ನಿವೃತ್ತಿ ಘೋಷಣೆ

0

ಬೆಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಂತ ಪಿ.ವಿಶ್ವನಾಥ ಶೆಟ್ಟಿಯವರು   ಇಂದು ನಿವೃತ್ತಿಯನ್ನು ಘೋಷಣೆ ಮಾಡಿದ್ದಾರೆ.

ಈ ಸಂಬಂಧ ಇಂದು ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲೋಕಾಯುಕ್ತ ನ್ಯಾಯಮೂರ್ತಿಯಾಗಿ ಕೆಲಸ ಮಾಡೋದಕ್ಕೆ ಸಹಕರಿಸಿದಂತ ಎಲ್ಲರನ್ನು ಸ್ಮರಿಸಿ, ಧನ್ಯವಾದ ಹೇಳಿದ ಅವರು, ತಾವು ನಿವೃತ್ತಿ ಘೋಷಿಸೋದಕ್ಕೆ ಯಾವುದೇ ಒತ್ತಡ ಬಂದಿಲ್ಲ ಅಂತ ಹೇಳಿದರು.

ಮುಂದುವರೆದು ಮಾತನಾಡಿದಂತ ಅವರು, ನನ್ನ ಕಾಲಾವಧಿಯಲ್ಲಿ ಎಲ್ಲಾ ಕೆಲಸವನ್ನು ತ್ವರಿತ, ದಕ್ಷತೆಯಿಂದ ಮಾಡಿದ್ದೇನೆ. ಲೋಕಾಯುಕ್ತಕ್ಕೆ ಅಧಿಕಾರವನ್ನು ಮೊಟಕುಗೊಳಿಸೋ ವಿಚಾರ, ತಾವು ಹುದ್ದೆ ಅಲಂಕರಿಸೋ ಮುಂಚೆಯೇ ಗೊತ್ತಿತ್ತು ಎಂದರು.

ಈ ಸಂದರ್ಭದಲ್ಲಿ ತಮ್ಮ ಅಧಿಕಾರದ ಅವಧಿಯಲ್ಲಿ ನಡೆದಂತ ಪ್ರಕರಣಗಳ ತನಿಖೆ, ವಿವಿಧ ಹಂತದ ತನಿಖೆಗಳ ಬಗ್ಗೆಯೂ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಬಳಿಕ, ತಮ್ಮ ಲೋಕಾಯುಕ್ತ ಹುದ್ದೆಗೆ ನಿವೃತ್ತಿ ಘೋಷಿಸೋದಾಗಿ ಹೇಳಿದರು.

ಹಿಂದಿನ ಲೇಖನನಿಗೂಢವಾಗಿ ನಾಪತ್ತೆಯಾಗಿದ್ದ ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಶವವಾಗಿ ಪತ್ತೆ
ಮುಂದಿನ ಲೇಖನಅಪ್ಪು ಜನ್ಮದಿನದಂದು `ಜೇಮ್ಸ್’ ಬಿಡುಗಡೆ ಸಾಧ್ಯತೆ