ಮನೆ ಮನರಂಜನೆ ಜು. 25 ರಂದು ʻಲಕ್ಕಿ ಮ್ಯಾನ್‌ʼಚಿತ್ರದ ಟೀಸರ್ ರಿಲೀಸ್‌: ಪುನೀತ್‌ ರಾಜ್‌ ಕುಮಾರ್‌ ರ ದೇವರ...

ಜು. 25 ರಂದು ʻಲಕ್ಕಿ ಮ್ಯಾನ್‌ʼಚಿತ್ರದ ಟೀಸರ್ ರಿಲೀಸ್‌: ಪುನೀತ್‌ ರಾಜ್‌ ಕುಮಾರ್‌ ರ ದೇವರ ರೂಪ ಅನಾವರಣ

0

ಬೆಂಗಳೂರು (Bengaluru): ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಅವರು ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ʻಲಕ್ಕಿ ಮ್ಯಾನ್‌ʼಚಿತ್ರದ ಟೀಸರ್ ರಿಲೀಸ್‌ ಗೆ ದಿನಾಂಕ ನಿಗದಿಯಾಗಿದೆ.

ಈಗಾಗಲೇ ‘ಲಕ್ಕಿ ಮ್ಯಾನ್’ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಪೋಸ್ಟರ್‌ನಲ್ಲಿ ಅಪ್ಪು ಗಮನ ಸೆಳೆದಿದ್ದಾರೆ. ಈ ಪೋಸ್ಟರ್ ಬಳಿಕ ಈಗ ಅಪ್ಪು ಟೀಸರ್‌ನಲ್ಲಿ ಬರಲಿದ್ದಾರೆ.‌ ಇದೇ ಜುಲೈ 25ಕ್ಕೆ ಚಿತ್ರದ ಟೀಸರ್ ರಿಲೀಸ್ ಆಗುತ್ತಿದೆ. s

ಈ ವಿಚಾರವನ್ನು ಚಿತ್ರತಂಡ ಪ್ರಕಟ ಮಾಡಿದೆ. ಇತ್ತೀಚೆಗಷ್ಟೇ ಚಿತ್ರದ ಸಾಂಗ್ ಮೇಕಿಂಗ್ ವಿಡಿಯೋ ವೈರಲ್ ಆಗಿತ್ತು. ಅಂತೆಯೇ ಈಗ ಚಿತ್ರದ ಟೀಸರ್‌ಗಾಗಿ ಎಲ್ಲರೂ ಕಾಯ್ತಿದ್ದಾರೆ. ಪುನೀತ್ ರಾಜ್‌ಕುಮಾರ್ ಟೀಸರ್‌ನಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಕೂಡ ಮನೆ ಮಾಡಿದೆ.

ಲಕ್ಕಿ ಮ್ಯಾನ್’ ಚಿತ್ರವನ್ನು ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡ್ತಿದ್ದಾರೆ. ಈ ಚಿತ್ರ ತಮಿಳಿನ ‘ಒ ಮೈ ಕಡವುಳೆ’ ಚಿತ್ರದ ರಿಮೇಕ್. ಹಾಗಾಗಿ ತಮಿಳಿನಲ್ಲಿ ವಿಜಯ್ ಸೇತುಪತಿ ಮಾಡಿದ್ದ ಪಾತ್ರವನ್ನು ಕನ್ನಡದಲ್ಲಿ ಪುನೀತ್‌ ರಾಜ್‌ಕುಮಾರ್‌ ಮಾಡಿದ್ದಾರೆ. ಚಿತ್ರದಲ್ಲಿ ಅಪ್ಪು ನಾಯಕ ನಟನಿಗೆ ಸರಿಯಾದ ದಾರಿ ತೋರಿಸುವ ‘ದೇವರ’ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಪರ್ಸಾ ಪಿಕ್ಚರ್ಸ್ ಬ್ಯಾನರ್​ಮೂಲಕ ನಿರ್ಮಾಣ ಆಗುತ್ತಿರುವ ಈ ಚಿತ್ರದ ಡಬ್ಬಿಂಗ್​ಕೆಲಸಗಳು ಮುಗಿದಿವೆ. ಚಿತ್ರ ರಿಲೀಸ್‌ಗೆ ರೆಡಿ ಆಗಿದೆ. ‘ಲಕ್ಕಿ ಮ್ಯಾನ್​’ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ಹೀರೋ ಆಗಿದ್ದರೂ ಕೂಡ ಪುನೀತ್ ರಾಜ್​ಕುಮಾರ್‌ ಅವರ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆಯಿದೆ. ವಿಶೇಷವಾಗಿ ಪುನೀತ್ ರಾಜ್​ಕುಮಾರ್ ಹಾಗೂ ಬಹುಭಾಷಾ ನಟ ಪ್ರಭುದೇವ ಅವರು ಹಾಡೊಂದರಲ್ಲಿ ಜೊತೆಯಾಗಿ ಹೆಜ್ಜೆ ಹಾಕಿದ್ದಾರೆ. ಡಾ. ರಾಜ್​ಕುಮಾರ್ ಅವರ ಕುರಿತಾಗಿ ರಚಿಸಲಾದ ಈ ಹಾಡಿನಲ್ಲಿ ಅವರಿಬ್ಬರು ಡ್ಯಾನ್ಸ್​ಮಾಡಿದ್ದಾರೆ.

ಸದ್ಯದಲ್ಲೇ ಚಿತ್ರದ ರಿಲೀಸ್ ದಿನಾಂಕವನ್ನು ಪ್ರಕಟ ಮಾಡಲಿದೆ ಚಿತ್ರತಂಡ. ‘ಲಕ್ಕಿ ಮ್ಯಾನ್’ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯಾಗಿ ಸಂಗೀತಾ ಶೃಂಗೇರಿ ನಟಿಸಿದ್ದಾರೆ. ರೋಶಿನಿ ಪ್ರಕಾಶ್, ಆರ್ಯ, ರಂಗಾಯಣ ರಘು, ಸಾಧು ಕೋಕಿಲ, ನಾಗಭೂಷಣ್, ಸುಂದರ್ ರಾಜ್, ಸುಧಾ ಬೆಳವಾಡಿ, ಮಾಳವಿಕಾ ಚಿತ್ರದ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಹಿಂದಿನ ಲೇಖನಪುತ್ರನಿಗೆ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಡುವ ವಿಚಾರ: ಮೋದಿ ಅವರದ್ದೇ ಅಂತಿಮ ತೀರ್ಮಾನ ಎಂದ ಬಿಎಸ್ವೈ
ಮುಂದಿನ ಲೇಖನನಟ ಅರ್ಜುನ್‌ ಸರ್ಜಾರಿಗೆ ಮಾತೃ ವಿಯೋಗ