ಮನೆ ರಾಜಕೀಯ ಸಿ.ಎಂ‌ ಹೊರತುಪಡಿಸಿ ಗುಜರಾತ್ ಮಾದರಿಯಲ್ಲಿ ಸಂಪುಟದಲ್ಲಿ ಭಾರೀ ಬದಲಾವಣೆ: ಎಂ ಪಿ ರೇಣುಕಾಚಾರ್ಯ

ಸಿ.ಎಂ‌ ಹೊರತುಪಡಿಸಿ ಗುಜರಾತ್ ಮಾದರಿಯಲ್ಲಿ ಸಂಪುಟದಲ್ಲಿ ಭಾರೀ ಬದಲಾವಣೆ: ಎಂ ಪಿ ರೇಣುಕಾಚಾರ್ಯ

0

ದಾವಣಗೆರೆ- ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಹೊರತು ಪಡಿಸಿ ಸಚಿವ ಸಂಪುಟದಲ್ಲಿ ಗುಜರಾತ್ ಮಾದರಿಯಂತೆ ಭಾರೀ ಬವಣೆಯಾಗಲಿದೆ ಎಂದು
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೊಸ ಬಾಂಬ್ ಸಿಡಿಸಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿ.ಎಂ. ಬಸವರಾಜ ಬೊಮ್ಮಯಿ ಹೊರತುಪಡಿಸಿ ಸಂಪುಟದಲ್ಲಿ ಬದಲಾವಣೆ ಖಚಿತ ಎಂದು ಭವಿಷ್ಯ ನುಡಿದರು.

ಈ ಹಿಂದೆ 2006 , 2013 ರಿಂದ 2018 ಹಾಗೂ ಪ್ರಸ್ತುತ ಸಂಪುಟದಲ್ಲಿ ಸಚಿವರಾದವರೇ ಸಚಿವರಾಗುತ್ತಿದ್ದು, ಅವರು ರಾಜಿನಾಮೆ ನೀಡಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಲಿ.ಪಕ್ಷ ನಿಷ್ಟೆ ಹಾಗೂ ಹೊಸಬರಿಗೆ ಒಂದು ಅವಕಾಶ ಕೊಟ್ಟರೆ ತಪ್ಪೇನು? ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಅಭಿವೃದ್ದಿ ಕೆಲಸಗಳಿಗೆ ಹಣ ಸರಿಯಾಗಿ ಬಿಡುಗಡೆಯಾಗುತ್ತಿಲ್ಲ.ಇದರಿಂದಾಗಿ ನಮ್ಮ ನಮ್ಮ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲಾ ಈ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಕ್ಷೇತ್ರದ ಅಭಿವೃದ್ದಿಗಾಗೀ ಜನರು ನನಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ ಮಾಡುತ್ತಿದ್ದು ಅಭಿವೃದ್ದಿ ದೃಷ್ಟಿಯಿಂದ ಸಚಿವ ಸ್ಥಾನ ನೀಡುವಂತೆ ಕೇಳಿದ್ದೇನೆ ಎಂದು ಹೇಳಿದರು.

ಪಕ್ಷ ನನಗೆ ತಾಯಿ ಸಮಾನ, ಪಕ್ಷಕ್ಕಾಗಿ ನಾನು ಯಾವುದೇ ತ್ಯಾಗಕ್ಕೂ ಸಿದ್ದ.ಸಚಿವ ‌ಸಂಪುಟ ವಿಸ್ತರಣೆ ಕುರಿತಾಗಿ ನಾನು ಹಾದಿ ಬೀದಿಯಲ್ಲಿ ಮಾತನಾಡುವುದಿಲ್ಲಾ. ಈ ಬಗ್ಗೆ ಪಕ್ಷದ ವರಿಷ್ಟರ ಗಮನಕ್ಕೆ ತಂದಿದ್ದೇನೆ ಎಂದರು.
ನನಗೆ ಸಚಿವ ಸ್ಥಾನ ಕೊಡಬೇಕು ಎಂದು ಶಾಸಕಾಂಗ ಸಭೆಯಲ್ಲೇ ಕೇಳಿದ್ದೇನೆ. ಇನ್ನು ಮುಂದೆ ಹಾದಿ ಬೀದಿಯಲ್ಲಿ ಮಾತನಾಡದೆ ನಾಲ್ಕು ಗೋಡೆಗಳ ಮಧ್ಯೆ ಮಾತನಾಡುವೆ ಎಂದು ತಿಳಿಸಿದರು.

ನಾನು ಸಚಿವ ಸ್ಥಾನದ ಬಗ್ಗೆ ವೈರಾಗ್ಯದ ಮಾತುಗಳನ್ನಾಡಿಲ್ಲಾ, ಹೊಸಬರಿಗೆ ಸಚಿವ ಸ್ಥಾನ ನೀಡುವಂತೆ ಕೇಳಿದ್ದೇನೆ.‌ಸರ್ಕಾರ ಹಾಗೂ ಸಂಘಟನೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು
ಅವರು ಅಭಿಪ್ರಾಯಪಟ್ಟರು. ಯಾವುದೇ ಕಾರಣಕ್ಕೂ ಬಂಡಾಯದ ಪ್ರಶ್ನೇಯೇ ಇಲ್ಲಾ, ಈ ಹಿಂದೆ ರೆಸಾರ್ಟ್‌ ರಾಜಕೀಯ ಮಾಡಿ ತಪ್ಪು ಮಾಡಿದ್ದೇನೆ. ಮುಂದೆ ನಾನು ಅಂತಹ ತಪ್ಪನ್ನು ಮಾಡುವುದಿಲ್ಲಾ.ಎಲ್ಲಿ ಏನು ಹೇಳಬೇಕೋ ಅಲ್ಲಿಯೇ ಹೇಳುತ್ತೇನೆ ಎಂದು ಮಾರ್ಮಿಕವಾಗಿ ನುಡಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆ ಎಂಬುದು ಸಣ್ಣ ಮಕ್ಕಳ ಅಟದ ಗೊಂಬೆಯಂತಾಗಿದೆ. ನನಗೂ ಒಂದು ಕಾರು, ಮನೆ ಕೊಟ್ಟಿದ್ದಾರೆ. ಆದರೆ ನನಗೆ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ‌ರೇಣುಕಾಚಾರ್ಯ ಅವರು ಅಸಮಾಧಾನ ವ್ಯಕ್ತಪಡಿಸಿದರು.

ದೂರು ದಾಖಲಿಸಿದರೆ ಸ್ವಾಗತಿಸುವೆ :ಒಂದು ವೇಳೆ ನಾನು ಕಾನೂನು ಉಲ್ಲಂಘಿಸಿ ಕಾರ್ಯಕ್ರಮ ನಡೆಸಿದ್ದರೆ, ಪೊಲೀಸರು ಯಾವುದೇ ಕ್ಷಣದಲ್ಲೂ ನನ್ನ ಮೇಲೆ ಎಪ್ ಐ ಆರ್‌ ಸೇರಿದಂತೆ ಯಾವುದೇ ಕಾನೂನು ಕ್ರಮ ತೆಗೆದುಕೊಂಡರೂ ಅದನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುವೆ ಎಂದರು.

ನನ್ನ ವಿರುದ್ಧ ದೂರು ದಾಖಲಿಸದಂತೆ ನಾನು ಯಾವ ಅಧಿಕಾರಿಯ ಮೇಲೆಯೂ ಒತ್ತಡ ಹಾಕಿಲ್ಲ. ನಾನೊಬ್ಬ ಜವಬ್ದಾರಿಯುತ ಜನಪ್ರತಿನಿಧಿಯಾಗಿದ್ದು, ಈ ನೆಲದ ಕಾನೂನಿಗೆ ‌ಗೌರವ ಕೊಡುವೆ.ಪೊಲೀಸರು ಈಗಲೇ ದೂರು ದಾಖಲಿಸಿದರೂ ಅದನ್ನು ಕಾನೂನಿನಡಿ ಎದುರಿಸುವೆ. ಈಗಾಗಲೇ ಇದರ ಬಗ್ಗೆ ಹಲವಾರು ಬಾರಿ ನಾನೇ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದೇನೆ ಎಂದು ಹೇಳಿದರು.

ಕಾಂಗ್ರೇಸ್ ನಾಯಕರಂತೆ ನಾನು ದುರಹಂಕಾರ ಪ್ರದರ್ಶನ ಮಾಡುತ್ತಿಲ್ಲ. ಅವರದ್ದು ಕೊರೊನಾ ಅಂಟಿಸುವ ಪಾದಯಾತ್ರೆಯಾಗಿತ್ತು. ಜನಸಾಮಾನ್ಯರಿಗೊಂದು , ಕಾಂಗ್ರೆಸ್ ಪಕ್ಷಕ್ಕೊಂದು ನ್ಯಾಯ ಇಲ್ಲ. ನನ್ನ ಮೇಲೆ ದೂರು ಹಾಕಲಿ ಎಂದು ಹೇಳುವ ನೈತಿಕತೆ ಕಾಂಗ್ರೆಸ್ ಪಕ್ಷದವರಿಗೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಕಡೆ ಪಕ್ಷ ನಾನು ಸರ್ಕಾರ ಹಾಗೂ ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕಾಗಿ ರಾಜ್ಯದ ಜನತೆಯಲ್ಲಿ ಕ್ಷಮೆ ಕೇಳಿದ್ದೇನೆ. ಆದರೆ, ಕಾಂಗ್ರೆಸ್ ಪಕ್ಷದವರು ನನ್ನ ಮೇಲೆ ದೂರು ಹಾಕಿ ಎಂದು ಹೇಳುವ ಮೂಲಕ ದುರಂಹಕಾರ ಪ್ರದರ್ಶಿಸುತ್ತಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.

ಕಾಂಗ್ರೇಸ್ ನವರು ಜನರ ಮೇಲಿನ ಕಾಳಜಿಯಿಂದ ಪಾದಯಾತ್ರೆ ಮಾಡಿಲ್ಲಾ, ಅವರು ಸ್ವಾರ್ಥಕ್ಕಾಗಿ, ಪಾದಯಾತ್ರೆ ಮಾಡಿದ್ದು, ಈ ಮೂಲಕ 2023 ರಕ್ಕೆ ಮತ್ತೆ ನಾವು ಅಧಿಕಾಕ್ಕೆ ಬರುತ್ತೇವೆಂದು ಭ್ರಮೆಯಲ್ಲಿದ್ದು ಮತ್ತೆ 2023 ಕ್ಕೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ನಾನು ಹೊರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದಕ್ಕೆ ರಾಜ್ಯದ ಜನರ ಕ್ಷಮೆ ಕೇಳಿದ್ದೇನೆ, ಅದೇ ರೀತಿ ಕಾಂಗ್ರೇಸ್ ನವರು ರಾಜ್ಯದ ಜನರ ಕ್ಷಮೆ ಕೇಳಬೇಕು.
ಅದನ್ನು ಬಿಟ್ಟು ಏಕೆ ಮಂಡುತನ ಪ್ರದರ್ಶನ ಮಾಡುತ್ತಿದ್ದೀರಿ ಎಂದ ರೇಣುಕಾಚಾರ್ಯ ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದರು.

ಹಿಂದಿನ ಲೇಖನಮಗನನ್ನು ಕೊಂದಿದ್ದ ತಾಯಿ ಕೆರೆಗೆ ಹಾರಿ ಆತ್ಮಹತ್ಯೆ
ಮುಂದಿನ ಲೇಖನಒಂದು ವರ್ಷದಲ್ಲಿ 156 ಕೋಟಿ ಲಸಿಕೆ: ಪ್ರಪಂಚದಲ್ಲೇ ಅಗ್ರಸ್ಥಾನದ ಹಿರಿಮೆ